Tuesday, July 21, 2015

ಮುಂಜಾನಿಂದ ಸಂಜೀವರ್ಗೂ ,,,,,,,,,,,,,,,,,,,,,,,ಎಂಗಿದ್ದೀಯೇ ಎಲ್ಲಿದ್ದೀಯೇ ತಿಮ್ಮಿ
ಹುಟ್ಟಿದಬ್ಬ ಅಂತಾ ಗೆಳ್ಯಾರೆಲ್ರೂ
ಮ್ಯಾಲಿಂದ್ಮೇಲೆ ನನ್ನ ಹರಸ್ತಾ ಅವ್ರೆ
ಕಳೆದೋದ್ ವಯಸ್ನಾ ಹೇಳ್ತಾ ಅವ್ರೆ
ನನ್  ಕಣ್ಣಾಗ್ ಕಂಬ್ನಿ  ತುಂಬ್ತಾ ಅವ್ರೆ
ನೀನು ಮಾತ್ರ ಬರ್ನೇ ಇಲ್ಲಾ ತಿಮ್ಮಿ!

ಮುಂಜಾನಿಂದ ಸಂಜೀವರ್ಗೂ
ಕೆಲ್ಸ ಮಾಡಿ ಮನೇಗ್ ಬಂದ್ರೂ
ಗೆಳೆಯರ್ ಹರ್ಕೆ ನಿಂತೇ ಇಲ್ಲಾ
ಅಮ್ಮನ್ ಗುಡ್ಯಾಗ್ ಹೊಡ್ದಂಗ್ ಘಂಟೆ
ಶಂಖ ಊದಿ ಬಾರ್ಸ್ದಂಗ್ ಜಾಗ್ಟೆ
 ಬತ್ತಾನೇ ಅವೇ ಹರ್ಕೆಗೋಳು!

ಬಾಯಿ ಮುಚ್ಗೊಂಡ್ ಎಲ್ಲೋದ್ಯೇ ನೀ
ಮುಖಾ ಮುಚ್ಗೊಂಡ್ ಎಲ್ಕುಂತ್ಯೇ ನೀ
ಮಾತು ಬುಟ್ಟು ನನ್  ಸಂಗಾ ಬುಟ್ಟು
ಹರ್ಕೆ ಗಿರ್ಕೆ ಎಲ್ಲಾ ಮರ್ತೇ ಬುಟ್ಟು
ಹೂವಾಗಿದ್ದೋಳ್ ಬಂಡೆ ಕಲ್ಲಾಗ್ಬುಟ್ಟು
ತುಂಟಿ ನಿನ್ನಾ ತಂಟೆ ತೀಟೆ ಎಲ್ಲಾ ಮರ್ತು
ಎಲ್ಲಿದ್ದೀಯೇ,,,,,,,,,ಅದೆಂಗಿದ್ದೀಯೇ ತಿಮ್ಮಿ!  :-( 

No comments: