Tuesday, February 9, 2016

ಲಹರಿ ಬಂದಂತೆ ,,,,,,,,,,೧೭.


ಹರಿವ ನದಿಯ ದಡದಲಿ 
ಏಕೆ ದುಗುಡ ಮೊಗದಲಿ 

ಚೆಲುವೆ ನೀನೆನ್ನ ಮನದಲಿ 
ಇರುವೆ  ಹೀಗೆಯೇ ನಗುತಲಿ

ನಗುವ ತುಂಬಿ ಮೊಗದಲಿ
ಜೇನು ತುಂಬಿ ಧ್ವನಿಯಲಿ  

ತುಂಬಿ ಹರಿವ ನಿನ್ನೊಲವಲಿ 
ಮನದ  ನೋವು ಮರೆಯಲಿ 

ಭೀಕರ ಕಾರಿರುಳು ಕಳೆಯಲಿ 
ನಗುವ ಹೊಂಬೆಳಗು ಮೂಡಲಿ  

ಅರಳಲಿರುವ ಹೂಸುಮದಲಿ 
ಪ್ರೀತಿಯಾ ಘಮವು ಹರಡಲಿ  

Monday, February 8, 2016

ಲಹರಿ ಬಂದಂತೆ,,,,,,,,,,,,,,೧೬.

ಹದವಾಗಿ ಹುರಿದ ಮಾಂಸದಲಿ ತುಸು ಖಾರ ಹೆಚ್ಚಾಗಿರಲು
ಜಿಹ್ವೆಯೊಳಿಹ ರಸಗ್ರಂಥಿಗಳೆಲ್ಲ ಹಾ ಹಾ ಹಾ ಎನುತಿರಲು

ತಣ್ಣನೆಯ ಸೋಡಾದೊಡನೆ ಗಾಜಿನ ಸುಂದರ ಲೋಟದೊಳು
ಇಳಿದ ಮಧುರ ಮದಿರೆಯೊಳು ನಿಶೆ ತಾನೇ ತಾನಾಗಿ ಏರಿರಲು

ವಿಶ್ವದೊಳಗಿನ ಜಂಜಡವೆಲ್ಲ ಮುಖಪುಟದಲ್ಲೇ ರಾರಾಜಿಸಿರಲು
ಕಣ್ಣ ಮುಂದೆ ನಂಬಿಕೆ ದ್ರೋಹಿಗಳ ಮುಖಗಳೇ ಸುಳಿಯುತಿರಲು

ಕಹಿರಾತ್ರಿಯಲಿ ಅದು ಬೇಡ ಇದು ಬೇಡ ಬೇರೇನೂ ಬೇಡವೆನಿಸಿರಲು
ತಣ್ಣಗೆ ಬಾಯಿಂದಿಳಿದ ಮದಿರೆಯದು ಮಧುರಾಮೃತವೇ ಆಗಿರಲು

ಅದಾವ ಅಕ್ಕರೆಯೂ ಅತಿ ಸಿಹಿಯಾದ ಸಕ್ಕರೆಯೂ ಬೇಡವೆನಿಸಿರಲು
ಬರಿಯ ಯಾಂತ್ರಿಕ ಜೀವನದಲಿ ಉಳಿದದ್ದು ನಿರಾಸೆಯ ಕಾರ್ಮುಗಿಲು!

Thursday, February 4, 2016

ಭದ್ರತೆಯ ಲೋಕದಲ್ಲಿ ೧೪,,,,,,ಮಾನಿನಿಯ ಮನಃಪರಿವರ್ತನೆ.




ಭದ್ರತೆಯ ಲೋಕಕ್ಕೆ ಕಾಲಿಟ್ಟು ಇಪ್ಪತ್ತೈದು ವರ್ಷಗಳು ಕಳೆದು ಹೋದವು ಕಾಲು ಶತಮಾನದಲ್ಲಿ ಒಡನಾಟಕ್ಕೆ ಬಂದವರೆಷ್ಟೋ, ಜೊತೆಯಾಗಿ ಕೆಲಸ ಮಾಡಿದವರೆಷ್ಟೋ, ನನ್ನ ಕೆಲಸವನ್ನು ಮೆಚ್ಚಿಕೊಂಡವರೆಷ್ಟೋ, ತಮ್ಮೊಡನೆ ಕೈ ಮಿಲಾಯಿಸಲಿಲ್ಲವೆನ್ನುವ ಕಾರಣಕ್ಕೆ ವಿರೋಧಿಗಳಾದವರೆಷ್ಟೋ, ಲೆಕ್ಕವಂತೂ ಸಿಗುತ್ತಿಲ್ಲಆದರೆ ನನಗೆ ವಹಿಸಿದ ಭದ್ರತೆಯ ಜವಾಬ್ಧಾರಿಯನ್ನು ಕಿಂಚಿತ್ತೂ ಲೋಪವಿಲ್ಲದೆ ನಿರ್ವಹಿಸಿದ ಆತ್ಮಸಂತೃಪ್ತಿಯಂತೂ ಸಿಕ್ಕಿದೆಅದೆಷ್ಟೋ ಸಂದರ್ಭಗಳಲ್ಲಿ ಮನೆಯವರನ್ನು ಕಡೆಗಣಿಸಿ ಕರ್ತವ್ಯವೇ ಹೆಚ್ಚು ಎಂದು ಪರಿಭಾವಿಸಿದಾಗ ನನ್ನ ಕರ್ತವ್ಯವೇ ಕೌಟುಂಬಿಕ ಅಶಾಂತಿಗೆ ಕಾರಣವಾಗಿದ್ದೂ ಉಂಟು!   ಆದರೂ ದಿನದಂತ್ಯದಲ್ಲಿ ಸಿಕ್ಕ ಆತ್ಮತೃಪ್ತಿಯ ಮುಂದೆ ಅವೆಲ್ಲ ನಗಣ್ಯವಾಗಿದ್ದವುಇಂತಿಪ್ಪ ಭದ್ರತಾ ಕಾರ್ಯಚಟುವಟಿಕೆಯ ನಡುವೆಯೂ ಒಮ್ಮೆ ನಡೆದ ಘಟನೆ ನನ್ನ ಮನಸ್ಸಿನಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ.

ನಮ್ಮ ಉದ್ಯಾನನಗರಿ ಬೆಂಗಳೂರಿನಲ್ಲಿ ಕೆಲವು ಬ್ಯಾಂಕುಗಳ ಎಟಿಎಮ್ ಯಂತ್ರಗಳು ಆಗಿನ್ನೂ ಹೊಸದಾಗಿ ಸ್ಥಾಪಿಸಲ್ಪಡುತ್ತಿದ್ದವುಅದರಲ್ಲಿ ಸಿಟಿಬ್ಯಾಂಕ್ ಮುಂಚೂಣಿಯಲ್ಲಿದ್ದು ಉದ್ಯಾನನಗರಿಯ ಮೂಲೆ ಮೂಲೆಗಳಲ್ಲೂ ತನ್ನ ಏಟಿಎಮ್ ಯಂತ್ರಗಳನ್ನು ಸ್ಥಾಪಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ತನ್ಮೂಲಕ ಬ್ಯಾಂಕಿಂಗ್ ವ್ಯವಹಾರದಲ್ಲಿ ಔನ್ನತ್ಯ ಸಾಧಿಸಲು ಶ್ರಮಿಸುತ್ತಿತ್ತು ನಿಟ್ಟಿನಲ್ಲಿ ಪ್ರತಿಯೊಂದು ಏಟಿಎಮ್ ಯಂತ್ರವನ್ನು ಸ್ಥಾಪಿಸಿದ್ದ ಕೊಠಡಿಗಳಲ್ಲಿ ಭದ್ರತಾ ರಕ್ಷಕರನ್ನು ನಿಯಮಿಸಿ, ಅವರಿಗೆ ಗ್ರಾಹಕರ ಕುಂದು ಕೊರತೆ ಹಾಗೂ ಸೇವೆಯ ನಿರ್ವಹಣೆಯ ಬಗ್ಗೆ ಪ್ರತ್ಯೇಕ ತರಬೇತಿಯನ್ನು ನೀಡಲಾಗುತ್ತಿತ್ತು. ಹಾಗೆ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜ ಬ್ಯಾಂಕೊಂದರ ತರಬೇತಿಯನ್ನು ಪಡೆದು ಗ್ರಾಹಕರ ಸೇವೆ ಹಾಗೂ ಭದ್ರತೆಯ ಜಂಟಿ ಜವಾಬ್ಧಾರಿಯೊಡನೆ ಸುಮಾರು ನೂರೈವತ್ತು ಜನರ ನಮ್ಮ ಭದ್ರತಾ ತಂಡ ಬೆಂಗಳೂರಿನ ಉದ್ಧಗಲಕ್ಕೂ ಹರಡಿಕೊಂಡಿದ್ದ ಸಿಟಿ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಕಾರ್ಯನಿರತವಾಗಿತ್ತುಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಗಸ್ತು ತಿರುಗುತ್ತಾ, ಎಲ್ಲಾ ಏಟಿಎಮ್ ಕೇಂದ್ರಗಳನ್ನು ಸಂದರ್ಶಿಸುತ್ತಾ, ಭದ್ರತಾ ರಕ್ಷಕರ ಹಾಗೂ ಏಟಿಎಮ್ ಯಂತ್ರಗಳ ಮೇಲುಸ್ತುವಾರಿಗಾಗಿ ನಾನು ಮತ್ತು ನನ್ನ ಜೊತೆಗೆ ಇನ್ನೂ ಮೂರು ಜನರ ತಂಡವನ್ನು ರಚಿಸಲಾಗಿತ್ತುಹೀಗೆ ಒಮ್ಮೆ ರಾತ್ರಿ ಪಾಳಿಯ ಗಸ್ತಿನಲ್ಲಿದ್ದಾಗ ಜೆ.ಪಿ.ನಗರದಲ್ಲಿದ್ದ ಸಿಟಿ ಬ್ಯಾಂಕ್ ಏಟಿಎಮ್ ಕೇಂದ್ರದಲ್ಲಿ ನಡೆದ ಘಟನೆಯಂತೂ ಎಂದಿಗೂ ಮರೆಯಲಾಗದ್ದು.  

ಮಾಮೂಲಿನಂತೆ ರಾತ್ರಿಯ ಗಸ್ತಿನಲ್ಲಿ ಅಂದು ಜೆ.ಪಿ.ನಗರದ ಏಟಿಎಮ್ ಕೇಂದ್ರದ ಬಳಿ ಬಂದಾಗ ಅಲ್ಲಿನ ಭದ್ರತಾ ರಕ್ಷಕ ಹನುಮಂತಯ್ಯ ಅದೇಕೋ ತುಂಬಾ ಒತ್ತಡಕ್ಕೊಳಗಾಗಿ ವರಾಂಡದಲ್ಲಿ ಶತಪಥ ತಿರುಗುತ್ತಿದ್ದಒಳಗೆ ಕೇವಲ ಒಂದೇ ಒಂದು ದೀಪ ಉರಿಯುತ್ತಿದ್ದು ಉಳಿದ ದೀಪಗಳನ್ನು ಆರಿಸಿಬಿಟ್ಟಿದ್ದ ಸಮಯದಲ್ಲಿ ನನ್ನನ್ನು ಕಂಡೊಡನೆ ಸ್ವಲ್ಪ ನಿರಾಳವಾದಂತಾಗಿ ನಮಸ್ಕಾರ ಹೊಡೆದಿದ್ದಏನಾಯ್ತು, ಒಳಗಡೆ ಯಾಕೆ ದೀಪಗಳು ಉರಿಯುತ್ತಿಲ್ಲ ಎಂದಿದ್ದಕ್ಕೆ ಅವನು ಕೊಟ್ಟ ಉತ್ತರ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿತ್ತು. ಅವನೊಡನೆ ನಿಧಾನಕ್ಕೆ ಏಟಿಎಮ್ ಕೇಂದ್ರದೊಳಕ್ಕೆ ಪ್ರವೇಶಿಸಿದ್ದೆಅಲ್ಲಿ, ಏಟಿಎಮ್ ಯಂತ್ರದ ಹಿಂಭಾಗದ ಖಾಲಿ ಜಾಗದಲ್ಲಿ ಕುಳಿತಿದ್ದಳು ನೀಳ ಕೇಶರಾಶಿಯ ಸುಂದರಿಯೊಬ್ಬಳುಅತ್ತು ಅತ್ತು ಕೆಂಪಗಾಗಿದ್ದ ಅವಳ ಕಣ್ಣುಗಳಲ್ಲಿ ನನ್ನನ್ನು ಕಂಡು ಮೂಡಿ ಬಂದ ಪ್ರಶ್ನಾರ್ಥಕ ಭಾವವನ್ನು ಹೋಗಲಾಡಿಸುವಂತೆ ನನ್ನನ್ನು ನಾನು ಪರಿಚಯಿಸಿಕೊಂಡಿದ್ದೆನೀನು ಯಾರು? ಇಲ್ಲಿ ಏಕೆ ಬಂದು ಅಡಗಿ ಕುಳಿತಿರುವೆ? ಏನು ನಿನ್ನ ಸಮಸ್ಯೆ ಎಂದು ಒಂದರ ಹಿಂದೊಂದು ನಾನು ಕೇಳಿದ ಪ್ರಶ್ನೆಗಳಿಗೆ ಅವಳ ಅಳುವೇ ಉತ್ತರವಾಗಿತ್ತು.   ಸರಿರಾತ್ರಿಯಲ್ಲಿ ಅಳುತ್ತಾ ಕುಳಿತಿದ್ದ ಹೆಣ್ಣುಮಗಳನ್ನು ಕಂಡು  ನನಗೆ ಮರುಕ ಹುಟ್ಟಿದರೂ ನಮ್ಮ ನಿಯಮಾವಳಿಗಳಂತೆ ಆಕೆ ಅಲ್ಲಿರಲು ಸಾಧ್ಯವಿರಲಿಲ್ಲ! ಅವಳನ್ನು ಅಲ್ಲಿಂದ ಹೇಗಾದರೂ ಮಾಡಿ ಕಳುಹಿಸಲೇ ಬೇಕಾಗಿತ್ತು

ಭದ್ರತಾ ರಕ್ಷಕ ಹನುಮಂತಯ್ಯ ಮನೆಯಿಂದ ತಂದಿದ್ದ ಫ್ಲಾಸ್ಕಿನಲ್ಲಿದ್ದ ಟೀಯನ್ನು ಮೂರು ಗ್ಲಾಸುಗಳಿಗೆ ಹಾಕಿ ತಂದಿದ್ದ, ಅವಳಿಗೆ ಟೀ ಕುಡಿಯುವಂತೆ ಹೇಳಿ ನಾನೂ ಟೀ ಕುಡಿಯುತ್ತಾ ಅವಳ ಮುಂದೆ ಕುಳಿತೆಚಳಿಯಿಂದ ನಡುಗುತ್ತಿದ್ದವಳಿಗೆ ಬಿಸಿಯಾದ ಅರ್ಧ ಕಪ್ ಟೀ  ಸ್ವಲ್ಪ ಸಮಾಧಾನ ನೀಡಿದಂತಿತ್ತುಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡ ಅವಳು ತನ್ನ ಕಥೆಯನ್ನು ಹೇಳಲಾರಂಭಿಸಿದಳುಅವಳೊಬ್ಬಳು ಬಿ.. ಪದವೀಧರೆ, ಆಂಧ್ರದ ಚಿತ್ತೂರಿನವಳು, ಯಾವುದೋ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸಅವಳ ಗಂಡನೂ ಸಾಪ್ಘ್ಟ್ವೇರ್ ತಂತ್ರಜ್ಞ, ಮುದ್ದಾದ ಒಂದು ಮಗುವಿದ್ದ ಸುಂದರ ಸುಖಿ ಕುಟುಂಬಆದರೆ ಇತ್ತೀಚೆಗೆ ಗಂಡ ಹೆಂಡತಿಯ ನಡುವೆ ವೈಮನಸ್ಯವುಂಟಾಗಿ, ಎಲ್ಲಾ ದುಡಿಯುವ ಹೆಂಗಸರ ಮನೆಯ ಕಥೆಯಂತೆಯೇ ಇವರದ್ದು ಆಗಿದೆ. ಪ್ರತಿನಿತ್ಯದ ಜಗಳ, ಮನಸ್ತಾಪ ಅಂದು ತಾರಕಕ್ಕೇರಿ ಗಂಡ ಇವಳನ್ನು ಹಿಡಿದು ಬಲವಾಗಿ ಚಚ್ಚಿದ್ದಾನೆ, ಅವನ ಹೊಡೆತಗಳಿಂದ ಕಂಗೆಟ್ಟ ಅವಳು ಮನೆ ಬಿಟ್ಟು ಓಡಿದ್ದಾಳೆಅವಳನ್ನು ಅಟ್ಟಿಸಿಕೊಂಡು ಹಿಂದೆಯೇ ಬಂದ ಗಂಡನಿಂದ ಅದು ಹೇಗೋ ತಪ್ಪಿಸಿಕೊಂಡು ಬಂದು ನಮ್ಮ ಭದ್ರತಾ ರಕ್ಷಕ ಹನುಮಂತಯ್ಯನ ಕೈ ಕಾಲು ಹಿಡಿದು ಏಟಿಎಮ್ ಯಂತ್ರದ ಹಿಂದೆ ಅವಿತು ಕುಳಿತು ರಕ್ಷಣೆ ಪಡೆದಿದ್ದಾಳೆಸುಂದರ ಕುಟುಂಬದ ಕಥೆ ಹಾದಿರಂಪ ಬೀದಿರಂಪವಾಗಿ ಈಗದು ನಮಗೆ ತಲೆನೋವಾಗಿತ್ತುಮುಂದೆ ಏನು ಮಾಡಬೇಕೆಂದು ಯೋಚಿಸುತ್ತಿದ್ದ ನನ್ನ ಕಣ್ಣ ಮುಂದೆ ಇದ್ದಕ್ಕಿದ್ದಂತೆ ಆಕೆ ತನ್ನ ಕೊರಳಲ್ಲಿದ್ದ ಮಾಂಗಲ್ಯದ ಸರವನ್ನು ಕಳಚಿ ಹಿಡಿದಳು

ನನ್ನನ್ನು ನಿಮ್ಮ ತಂಗಿಯೆಂದು ತಿಳಿದುಕೊಳ್ಳಿ, ಈಗ ನನ್ನ ಬಳಿ ಇರುವುದು ಸರ ಮಾತ್ರ, ಇದನ್ನು ಇಟ್ಟುಕೊಂಡು ನನಗೆ ದಯವಿಟ್ಟು ಐದುನೂರು ರೂಪಾಯಿಗಳನ್ನು ಕೊಡಿ, ನಾನು ನಾಳೆ ಬೆಳಿಗ್ಗೆಯೇ ನಮ್ಮ ಊರಿಗೆ ಹೋಗಿ ಬಿಡುತ್ತೇನೆ, ಇವರ ಸಹವಾಸವೇ ಬೇಡ ಎಂದಿದ್ದಳುಅವಳ ಮಾತುಗಳನ್ನು ಕೇಳಿ ನನಗೆ ಏನು ಹೇಳಬೇಕೆಂದೇ ತೋಚದೆ ಕ್ಷಣಕಾಲ ಮೌನವಾಗಿ ಕುಳಿತಿದ್ದೆನಂತರ ನೀನೇನೋ ಊರಿಗೆ ಹೋಗಿಬಿಡುತ್ತೀಯಾ, ಆದರೆ ನಂತರ ನಿನ್ನ ಮಗುವಿನ ಗತಿ ಏನಮ್ಮಾ ಎಂದೆಅದುವರೆಗೂ ಆಕೆ ತನ್ನ ಮಗುವಿನ ಬಗ್ಗೆ ಚಿಂತಿಸಿರಲೇ ಇಲ್ಲವೇನೋನನ್ನ ಧಿಡೀರ್ ಪ್ರಶ್ನೆಯಿಂದ ಗಲಿಬಿಲಿಗೊಳಗಾದ ಆಕೆ ಚಿಂತಾಕ್ರಾಂತಳಾಗಿ ಕುಳಿತಳುಈಗ ನನ್ನೊಳಗಿನ ಮನಃಶಾಶ್ತ್ರಜ್ಞ ಎಚ್ಚರಗೊಂಡಿದ್ದಅವಳಿಗೆ ಅವಳು ಮಾಡಿದ ತಪ್ಪುಗಳು, ಅವಳ ಮಾತುಗಳಿಂದ ಅವಳ ಗಂಡನ ಮನಸ್ಸಿನ ಮೇಲಾಗಿರಬಹುದಾದ ಪರಿಣಾಮಗಳು, ಗಂಡ ಹೆಂಡತಿಯರ ನಡುವೆ ಇರಬೇಕಾದ ಅನುಸರಣೆ, ಹೊಂದಾಣಿಕೆಯ ಬಗ್ಗೆ ಸುದೀರ್ಘವಾಗಿ ವಿವರಿಸಿ ಅವಳ ಮನಸ್ಸನ್ನು ನನ್ನ ಹಿಡಿತಕ್ಕೆ ತೆಗೆದುಕೊಂಡಿದ್ದೆ.   ನಾನು ನಿನ್ನ ಅಣ್ಣನಾಗಿ ನಿಮ್ಮ ಮನೆಗೆ ಬರುತ್ತೇನೆ, ನಿನ್ನ ಗಂಡನಿಗೆ ಎಚ್ಚರಿಕೆ ಕೊಟ್ಟು ನಿನ್ನನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಹೇಳುತ್ತೇನೆ, ನೀನು ಮತ್ತೊಮ್ಮೆ ನಗುನಗುತ್ತಾ ನಿನ್ನ ಮಗು-ಗಂಡನೊಡನೆ ಬದುಕಬೇಕು, ಆಗಲೇ ನಿನ್ನ ಜನ್ಮ ಸಾರ್ಥಕಸಣ್ಣಪುಟ್ಟ ತಪ್ಪುಗಳಿಗಾಗಿ ಜೀವನವನ್ನೇ ಹಾಳು ಮಾಡಿಕೊಳ್ಳಬಾರದು ಎಂದು ಸಮಯದಲ್ಲಿ ನಾನು ನೀಡಿದ ಆಪ್ತ ಸಲಹೆ ಅವಳ ಮನಸ್ಸಿಗೆ ನಾಟಿತ್ತುಮನಸ್ಸು ದುಃಖದಿಂದ ಕುಗ್ಗಿಹೋದ ಸಂದರ್ಭದಲ್ಲಿ ಅವಳ ಮನಸ್ಸಿಗೆ ಸಮಾಧಾನವಾಗುವಂತಹ ನಾಲ್ಕು ಮಾತನಾಡುವವರೊಬ್ಬರು ಅವಳಿಗೆ ಬೇಕಾಗಿತ್ತುಊರಿನಲ್ಲಿದ್ದ ತನ್ನ ಅಣ್ಣನನ್ನು ಅವಳು ಕ್ಷಣದಲ್ಲಿ ನನ್ನಲ್ಲಿ ಕಂಡಿದ್ದಳು.

ಯಾವುದೋ ನಿರ್ಧಾರಕ್ಕೆ ಬಂದವಳಂತೆ ಎದ್ದು ನಿಂತ ಅವಳು ನನ್ನ ಕೈಗಳನ್ನು ಹಿಡಿದು ಬನ್ನಿ ಅಣ್ಣ, ಮನೆಗೆ ಹೋಗೋಣ ಎಂದಾಗ ನನ್ನ ಮನಸ್ಸಿಗೆ ಖುಷಿಯಾಗಿತ್ತುಇದನ್ನೆಲ್ಲಾ ನೋಡುತ್ತಿದ್ದ ಭದ್ರತಾ ರಕ್ಷಕ ಹನುಮಂತಯ್ಯನ ಕಣ್ಣುಗಳೂ ತುಂಬಿ ಬಂದಿದ್ದವು. ಕೊರಳಿನಿಂದ ಕಳಚಿದ್ದ ಮಾಂಗಲ್ಯಸರವನ್ನು ಮತ್ತೆ ತೊಟ್ಟುಕೊಳ್ಳುವಂತೆ ಹೇಳಿ ಅವಳನ್ನು ನನ್ನ ರೋಡ್ ಕಿಂಗ್ ಗಾಡಿಯಲ್ಲಿ ಕೂರಿಸಿಕೊಂಡು ಜೆ.ಪಿ.ನಗರದ ಸೊಂದಿಗಳಲ್ಲಿ ಸುತ್ತಿ ಅದ್ಯಾವುದೋ ಮೂಲೆಯಲ್ಲಿದ್ದ ಅವಳ ಮನೆಯ ಮುಂದೆ ಬಂದು ನಿಂತಿದ್ದೆಅಷ್ಟು ಹೊತ್ತಿಗೆ ಇವಳನ್ನು ಎಲ್ಲೆಡೆ ಹುಡುಕಾಡಿ ಸಾಕಾಗಿ, ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದೆ ಕೈ ಕೈ ಹಿಸುಕುತ್ತಾ ಕುಳಿತಿದ್ದ ಅವಳ ಗಂಡ, ಅವನ ಮುಂದೆ ತಲೆಯ ಮೇಲೆ ಕೈ ಹೊತ್ತು ಮ್ಲಾನವದನರಾಗಿ ಕುಳಿತಿದ್ದ ಅವನ ತಾಯಿ, ಅವರ ಮಡಿಲಲ್ಲಿ ಮಲಗಿದ್ದ ಮುದ್ದಾದ ಗಂಡು ಮಗುನಿರ್ಜೀವವಾಗಿದ್ದ ಪರಿಸರದಲ್ಲಿ ನನ್ನೊಡನೆ ಬಂದ ಅವಳನ್ನು ಕಂಡೊಡನೆ ವಿದ್ಯುತ್ ಸಂಚಾರವಾದಂತಾಗಿತ್ತುಅವಳನ್ನು ಕಂಡು ಮತ್ತೆ ಕೋಪೋದ್ರಿಕ್ತನಾಗಿ ಹೊಡೆಯಲು ಬಂದವನನ್ನು ತಡೆದು ಕೂರಿಸಿದೆ, ನನ್ನನ್ನು ಪರಿಚಯಿಸಿಕೊಂಡು ಮಾತಿಗೆ ಕುಳಿತೆನಡೆದದ್ದನ್ನೆಲ್ಲಾ ವಿವರಿಸಿ, ಅವನಿಗೂ ಸಾಕಷ್ಟು ಆಪ್ತಸಲಹೆ ನೀಡಿದ ಮೇಲೆ ಅವರ ತಾಯಿಯೂ ನನ್ನ ಜೊತೆಗೆ ಧ್ವನಿಗೂಡಿಸಿದರುಮುಂಗೋಪಿಯಾಗಿದ್ದ ಅವನ ತಪ್ಪುಗಳನ್ನು, ಅದರಿಂದ ಅವನ ಹೆಂಡತಿಯ ಮನಸ್ಸಿನ ಮೇಲಾಗಿದ್ದ ದುಷ್ಪರಿಣಾಮಗಳನ್ನು ವಿವರಿಸಿ, ಒಂದೊಮ್ಮೆ ಅವರಿಬ್ಬರೂ ಪರಸ್ಪರ ಬೇರೆಯಾದರೆ ಮುಂದೆ ಮಗುವಿನ ಮೇಲಾಗಬಹುದಾದ ಪರಿಣಾಮಗಳ ಬಗ್ಗೆ ವಿವರಿಸಿ, ಕುಟುಂಬದಲ್ಲಿ ಹೊಂದಾಣಿಕೆಯ ಮಹತ್ವವನ್ನು ವಿವರಿಸಿದಾಗ ಆತ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದ, ತಾನು ದುಡುಕಿ ಆಕೆಯ ಮೇಲೆ ಕೈ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಅಸಮಾಧಾನದ ಬೆಂಕಿ ಭುಗಿಲೆದ್ದಿದ್ದ ಮನೆಯಲ್ಲೀಗ ಸಮಾಧಾನದ, ಸಂತಸದ ಮುಗುಳ್ನಗೆಯ ತಂಗಾಳಿ ಬೀಸುತ್ತಿತ್ತು.

ಅವರೆಲ್ಲರಿಗೂ ವಂದಿಸಿ ಮನೆಯಿಂದ ಹೊರಬಂದಾಗ ಉದ್ಯಾನ ನಗರಿಯನ್ನು ಬಾಲ ಸೂರ್ಯನ ಎಳೆಯ ರಶ್ಮಿಗಳು ಚುಂಬಿಸುತ್ತಿದ್ದವುನನಗೇ ಅರಿವಿಲ್ಲದ ಅದ್ಯಾವುದೋ ಆತ್ಮಸಂತೃಪ್ತಿಯಿಂದ ನನ್ನ ರೋಡ್ ಕಿಂಗನ್ನು ಮನೆಯತ್ತ ಎಂದಿಗಿಂತಲೂ ತುಸು ಹೆಚ್ಚೇ ವೇಗವಾಗಿ ಚಲಾಯಿಸಿದ್ದೆ ಘಟನೆ ನಡೆದು ಸುಮಾರು ಇಪ್ಪತ್ತು  ವರ್ಷಗಳಾಗಿರಬಹುದು, ಹೆಣ್ಣು ಮಗಳು ಯಾರೋ, ಈಗ ಎಲ್ಲಿದ್ದಾಳೋ, ಹೇಗಿದ್ದಾಳೋ ಗೊತ್ತಿಲ್ಲಆದರೆ ತನ್ನ ನೀಳ ಕೇಶರಾಶಿಯನ್ನು ಬೆನ್ನ ಮೇಲೆ ಹರಡಿಕೊಂಡು, ಮೊಣಕಾಲಿನ ಮೇಲೆ ತನ್ನ ಮೊಗವನ್ನೂರಿ ದುಃಖದಿಂದ ರೋದಿಸುತ್ತಿದ್ದ ಅವಳ ಮುಖ ಮಾತ್ರ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆಎಲ್ಲೇ ಇರಲಿ, ಅವಳು ಸುಖವಾಗಿರಲಿ ಎಂದೇ ಮನಸ್ಸು ಬಯಸುತ್ತದೆ.






Tuesday, February 2, 2016

ತಿಮ್ಮಿ ನೀನು ತಪ್ಪುಸ್ಕೊಂಡ್ರೆ ...................