Sunday, July 12, 2015

ಭೋರ್ಗರೆದು ಸುರಿವ ಮಳೆಯಲ್ಲಿ,,,,,,,,,,,,,,,,,,,,,,,,,,,,,,,,,,,,,,



ಭೋರ್ಗರೆದು ಸುರಿವ ಮಳೆಯಲ್ಲಿ 
ಕಣ್ತುಂಬಿ ಹರಿವ ಕಂಬನಿ ಕಾಣದಲ್ಲಿ
ಜೀವ ಅದುರುತಿರೆ ಅಭದ್ರತೆಯಲ್ಲಿ
ನೊಂದ ಹೃದಯಗಳ ಸಂಗಮವಲ್ಲಿ 
ಇಳೆ ವರುಣರ ಪ್ರಣಯದಾಟದಲ್ಲಿ 
ಭರವಸೆಯ ಕಿರಣವದು ಮೂಡಿತ್ತಲ್ಲಿ! 

ನೂರೆಂಟು ಭಾವಗಳು ಎದೆಯಲ್ಲಿ
ಪ್ರೀತಿಯ ಝಲಕಿನ ಕೋಲ್ಮಿಂಚಿನಲ್ಲಿ 
ದೂರ ತೀರದ ಬಾಳ ಯಾನದಲ್ಲಿ 
ಪ್ರೀತಿ ತುಂಬಿಹ ಪುಟ್ಟ ಗೂಡಿನಲ್ಲಿ
ಹರಿವ ನಿರ್ಮಲ ಜಲಧಾರೆಯಲ್ಲಿ 
ಒಲವಿನ ಮೌನ ಸಂಭಾಷಣೆಯಲ್ಲಿ!

ನಗು ತುಂಬಿಹ ನಿನ್ನ ಮೊಗದಲ್ಲಿ 
ಎಲ್ಲ ಸಂಕಟ ಮರೆವಾಸೆ ನನ್ನಲ್ಲಿ
ಹಸಿರು  ಹಾದಿಯು ಕಾದಿಹುದಿಲ್ಲಿ 
ಗಮ್ಯ ಸೇರುವಾಸೆ ಚಿಗುರಿಹುದಲ್ಲಿ
ನಾ ನಿನಗೆ ನೀ ನನಗೆ ಜೊತೆಯಲ್ಲಿ 
ಸಾಗುತಿರೆ ಬದುಕು ಸುಂದರವಿಲ್ಲಿ! 

No comments: