Saturday, July 11, 2015

ತಿಮ್ಮಿ ನಿನ್ನ ಕೈಯಾಗ್ ,,,,,,,,,,,,,,,,,,




 ತಿಮ್ಮಿ ನಿನ್ನ ಕೈಯಾಗ್
ನಂಗೆ ರೊಟ್ಟಿ ತಿನ್ನೋ ಆಸೆ!

ಕಷ್ಟಾನೆಲ್ಲಾ ಮರ್ತು ನೀನು
ಉಪ್ಪು ಕಾರ ಚೆನ್ನಾಗಚ್ಚಿ !

ಬಿಸಿ ರಾಗಿ ರೊಟ್ಟಿ ತುಂಬಾ
ನಿನ್ ಪ್ರೀತಿ ತುಂಬಿ ತುಂಬಿ !

ಹಸಿ ಬೆಣ್ಣೆ ಗಟ್ಟಿ ಮೊಸ್ರು
ನಂಜ್ಕೊಳ್ಳಾಕೆ ಉಳ್ಳಾಗಡ್ಡೆ !

ಮನ್ಸು ಗೆದ್ದ ರಾಣಿ ನೀನು
ಸ್ವರ್ಗಕ್ ಮೂರೇ ಗೇಣು ! :-)

(ಚಿತ್ರ: ಅಂತರ್ಜಾಲದಿಂದ)










No comments: