Wednesday, July 1, 2015

ಎಲ್ಲಿದ್ದೀಯೇ ಎಂಗಿದ್ದೀಯೇ ತಿಮ್ಮಿ! :-) :-)
ಕುಂತ್ರೂ ನಿಂತ್ರೂ ಎಲ್ಲೇ ಓದ್ರೂ
ನಿನ್ನುಡ್ಗಾಟಾನೇ ನೆನಪಾಯ್ತದೆ 
ಉಂಡ್ರೂ ಬುಟ್ರೂ ಕ್ಯಾಮೆ ಇದ್ರೂ 
ನಿನ್ ಪಿರೀತೀನೇ ನೆನಪಾಯ್ತದೆ 
ಎಲ್ಲಿದ್ದೀಯೇ ಎಂಗಿದ್ದೀಯೇ ತಿಮ್ಮಿ! 

ವಾಟ್ಸಪ್ನಾಗೆ ಫೇಸ್ಬುಕ್ನಾಗೆ ಚಾಟ್ನಾಗೆ 
ಇಮೇಯ್ಲಿನಾಗೆ ಆಮೇಯ್ಲಿನಾಗೆ 
ಸ್ಮಾರ್ಟು ಫೋನು ಲ್ಯಾಪ್ ಟಾಪ್ನಾಗೆ 
ನಿನ್ದೇ ಮುದ್ದಾದ್ ರೂಪು ಕಾಣ್ತೈತಲ್ಲೇ
ಎಲ್ಲಿದ್ದೀಯೇ ಎಂಗಿದ್ದೀಯೇ ತಿಮ್ಮಿ! 

ಏರ್ ಪೋರ್ಟಿನಾಗೆ ವಿಮಾನ್ದಾಗೆ 
ಮೆಟ್ರೋ ರೈಲಿನ್ ಸ್ಟೇಶನ್ನಾಗೆ  
ತಣ್ಗಿರೋ ಟ್ಯಾಕ್ಸಿನಾಗೆ ಬಸ್ಸಿನಾಗೆ 
ನೀರಲ್ ತೇಲೋ ದೋಣೀನಾಗೆ 
ಎಲ್ಲೆಲ್ಲೂ ನೀನೇ ಇದ್ದಂಗೈತಲ್ಲೇ 
           ಎಲ್ಲಿದ್ದೀಯೇ ಎಂಗಿದ್ದೀಯೇ ತಿಮ್ಮಿ!  :-) :-) 

(ಚಿತ್ರಗಳು: ಸನ್ಮಾನ್ಯ ಶ್ರೀ ಸುರೇಶ್ ಕುಮಾರ್ ಅವರ ಗೋಡೆಯಿಂದ ಕದ್ದಿದ್ದು) :-)  ಕವನ ಮಾತ್ರ ನಂದು :-) 

No comments: