Thursday, September 3, 2015

ಆ ದರ್ಪಣವ ಮುಚ್ಚಿರುವ,,,,,,,,,,,,,,,,,,,



ಆ ದರ್ಪಣವ ಮುಚ್ಚಿರುವ ದಟ್ಟ
ದರಿದ್ರ ಧೂಳ ಕೊಡವದಿರು ಗೆಳತಿ
ಅದೆಂದೋ ತರ್ಪಣವ ಕೊಟ್ಟಿರುವ
ಮನೆಹಾಳ ನೆನಪುಗಳು ಮತ್ತೆ ಮತ್ತೆ
ಬಂದಾವು ಧುತ್ತೆಂದು ಕಣ್ಣೆದುರಲಿ!

ನಿನ್ನ ಸುಕೋಮಲ ಮನ ನೊಂದೀತು
ಇರಲಿ ಆ ಎಲ್ಲ ಬೇಗೆ ನನಗೆ ಬಿಡು!
ಎಷ್ಟಾದರೂ ನಾ ಗಂಡಲ್ಲವೇ ಸಹಿಸುವೆ
ಎದೆ ಗಟ್ಟಿಯಿದೆ ಹುಟ್ಟಿನಿಂದಲೇ ನೀ ಬಲ್ಲೆ!
ಅಲ್ಲಾಡುವ ಜಾಯಮಾನವಲ್ಲ ಸುಲಭದಿ! 

ಸುಕೋಮಲೆ ನೀನು ನಗುವೊಂದೇ ಬಲ್ಲೆ
ಕಿಂಚಿತ್ತು ನೋವ ನೀ ಸಹಿಸಲೊಲ್ಲೆ ಮಲ್ಲೆ
ಒಲಿದವಗೆ ನೋವ ದಾಟಿಸುವುದ ನೀ ಬಲ್ಲೆ!
ನನ್ನೆದೆಯ ನೋವನರಿವ ಮತಿ ನಿನಗೆಲ್ಲಿ?
ಅಳುವ ನುಂಗಿ ನಗುವುದನು ನಾ ಬಲ್ಲೆ! 😊

2 comments:

ಜಲನಯನ said...

ಎಷ್ಟಾದರೂ ನಾ ಗಂಡಲ್ಲವೇ ಸಹಿಸುವೆ
ಎದೆ ಗಟ್ಟಿಯಿದೆ ಹುಟ್ಟಿನಿಂದಲೇ ನೀ ಬಲ್ಲೆ!
ಅಲ್ಲಾಡುವ ಜಾಯಮಾನವಲ್ಲ ಸುಲಭದಿ! ...
ವಾಹ್...ಬಹಳ ಚನ್ನಾಗಿದೆ.

ಜಲನಯನ said...

ಎಷ್ಟಾದರೂ ನಾ ಗಂಡಲ್ಲವೇ ಸಹಿಸುವೆ
ಎದೆ ಗಟ್ಟಿಯಿದೆ ಹುಟ್ಟಿನಿಂದಲೇ ನೀ ಬಲ್ಲೆ!
ಅಲ್ಲಾಡುವ ಜಾಯಮಾನವಲ್ಲ ಸುಲಭದಿ! ....
......ತುಂಬಾ ಅರ್ಥಪೂರ್ಣ ಭಾವಮಂಥನ...ಈ ಸಾಲುಗಳಂತೂ,,ಸೂಪರ್