Saturday, September 19, 2015

ರಾಧೆ ಮರೆತ ಕೃಷ್ಣ ನಾನು,,,,,,,,,,,,,,,ರಾಧೆ ಮರೆತ ಕೃಷ್ಣ ನಾನು
ಕೊಳಲು ಮೂಕವಾಗಿದೆ!
ಯಮುನೆ ತೊರೆದ ಶಿಶುವು ನಾನು 
ಅಳಲು ಬರದಾಗಿದೆ!
ರುಕ್ಮಿಣಿಯ ಮನದ ಹೂವು ನಾನು 
ಚೈತ್ರ  ಗ್ರೀಷ್ಮವಾಗಿದೆ!
ಭಾಮೆಯೊಡಲ ಗಾನ ನಾನು 
ರಾಗ ತಾಳ ತಪ್ಪಿದೆ!
ಹುಚ್ಚು ಮನದ ಒಡೆಯ ನಾನು 
ಭಾವಲಹರಿ ಬತ್ತಿದೆ!
ದೂರತೀರದ ಸಂಚಾರಿ ನಾನು 
ದಾರಿ ದಿಕ್ಕು ತಪ್ಪಿದೆ!
ಹುಚ್ಚುಕಡಲ ನಾವೆ ನಾನು 
ಬದುಕು ಹೊಯ್ದಾಡಿದೆ!
ಗಾಡಾಂಧಕಾರದಲ್ಲಿಹೆನು ನಾನು 
ಹೃದಯ ಸ್ತಬ್ಧವಾಗಿದೆ!

No comments: