Monday, September 7, 2015

ಕ್ಷಮಿಸಿಬಿಡು ಕಂದಯ್ಯ,,,,,,,,,,



ಕ್ಷಮಿಸಿಬಿಡು ಕಂದಯ್ಯ
ಈ ಕ್ರೂರ ಜಗವನ್ನು
ಇಲ್ಲಿರುವ ಮೃಗಗಳನ್ನು
ಇಲ್ಲಿ ಮಾನವೀಯತೆಯಿಲ್ಲ!
ಕಿಂಚಿತ್ತೂ ಕರುಣೆ ಇಲ್ಲಿಲ್ಲ!
ಇಲ್ಲಿ ಮತ ಧರ್ಮಗಳಿವೆ
ಇಲ್ಲಿ ಜಾತಿ ಪಂಗಡಗಳಿವೆ
ಇಲ್ಲಿ ಬಹಳ ಮಂದಿರಗಳಿವೆ
ಇಲ್ಲಿ ನೂರಾರು ಮಸೀದಿಗಳಿವೆ
ಇಲ್ಲಿ ನೂರಾರು ಚರ್ಚುಗಳಿವೆ
ಕರುಣೆಯ ಬೆಳಕು ಮಾತ್ರ ಇಲ್ಲಿಲ್ಲ!
ಕ್ಷಮಿಸಿಬಿಡು ಮತ್ತೊಮ್ಮೆ ಕಂದಯ್ಯ
ಮತ್ತೆಂದೂ ಬರದಿರು ದಮ್ಮಯ್ಯ
ಈ ಕಟುಕರ ಲೋಕಕ್ಕೆ ಅಂಬೆಗಾಲಿಡುತ!
ಇರಲಿ ಹೀಗೇ ಮರುಳರು ಮುಟ್ಠಾಳರು
ಕೆಲಸಕ್ಕೆ ಬಾರದ ಪುಸ್ತಕಗಳನೋದುತ!
ಶಾಂತಿ ಕೋರುವೆ ನಿನ್ನಾತ್ಮಕನವರತ!

1 comment:

Veena said...

Soulful write up.. :( :(