Tuesday, February 24, 2015

ಹಾಯ್ಕುಗಳು - ೬

ಮರೆಯಾದೆಯಾ 
ಕನಸಿನಲಿ ಬಂದು 
ಓಡಿ ಹೋದೆಯಾ!

ನೆನಪಾದೆಯಾ 
ಮನಸಿನಲಿ ನಿಂದು 
ಗಾಯವಾದೆಯಾ!

ಬರಲಾರೆಯಾ 
ಮನ ಬಯಸಿದಾಗ 
ನೀ ಕಲ್ಲಾದೆಯಾ!

ಉರುಳಾದೆಯಾ 
ಸುಮಧುರ ಕೊರಳಿಗೆ  
ನಿಷ್ಕರುಣಿಯಾ !

ಹೋಗಲಾರೆಯಾ 
ಮತ್ತೆ ಮತ್ತೆ  ಕಾಡದೆ 
ಮನದಾಚೆಗೆ!

No comments: