Sunday, February 22, 2015

ಹಾಯ್ಕುಗಳು - ೫

ಕ್ರಿಕೆಟ್ ಜ್ವರ 
ದೇಶ ವಿದೇಶ ದಾಟಿ 
ದುಬೈಗೂ ಬಂತು!

ಟಿವಿಯ ಮುಂದೆ 
ಮಧ್ಯಾಹ್ನದವರೆಗೂ 
ಕುಳ್ಳಿರಿಸಿತು!

ದೇಶಾಭಿಮಾನ 
ದೇಶ ಬಿಟ್ಟು ಬಂದರೂ 
ಉಸಿರಾಡಿತು!

ಭಾರತಕ್ಕಾಗಿ 
ಕೆಲಸ ಕಾರ್ಯ ಬಿಟ್ಟು 
ನೋಡುವಂತಾಯ್ತು!

ಮನರಂಜನೆ 
ಜೊತೆಗೆ ದೇಶಪ್ರೇಮ 
ಜಾಗೃತವಾಯ್ತು!

No comments: