Sunday, February 22, 2015

ನಗುವ ಹೂವು :-)

ನೀನೇಕೆ ಅರಿಯದಾದೆ ಗೆಳೆಯ
ನಾನೊಂದು ನಗುವ ಹೂವು
ದೇವನ ಅಡಿಯಲಿಟ್ಟರೆ ಮಾತ್ರ
ಹೆಣ್ಣಿನ ಮುಡಿಯನೇರಿದರೆ ಮಾತ್ರ
ನನಗೊಂದು ಬದುಕೆನ್ನುವೆಯಾ?
ನನ್ನೆದೆಯಾಳದ ಮಾತ ನೀನರಿಯೆಯಾ?
ತಪ್ಪು ಗೆಳೆಯ ನಿನ್ನ ಈ ಮಾತು
ನನಗಿಲ್ಲವೇ ನನ್ನದೇ ಆದ ಮನಸು
ನನಗಿಲ್ಲವೇ ನನ್ನ ಸ್ವಂತ ಅಸ್ತಿತ್ವ
ನನಗಿಲ್ಲವೇ ನನ್ನದೇ ಆದ ಗುರಿ
ಅರಿಯುವವರಾರಿಲ್ಲ ಈ ಮೃದು ಹೃದಯದಿ
ಅವಿತ ಆರ್ದ್ರ ಭಾವನೆಗಳಸಿಹಿ ಕನಸುಗಳ!
ನಗುವ ಹೂವು ನಿಜದಿ ನಾನು ನೀ ಬಲ್ಲೆಯಾ
ಜನ್ಮವೆತ್ತಿದ್ದು ಗುಡಿಯ ಸೇರಲಂತೂ ಅಲ್ಲ
ಕಾದಿರುವೆ ನಾ ಹಾರಿ ಬರುವ ದುಂಬಿಗಾಗಿ
ದುಂಬಿಯ ಝ್ಹೇಂಕಾರದ ಒಲವ ನಾದಕಾಗಿ
ಮಿಲನಸುಖದ ಸವಿಯನುಭವದ ಗಾನಕಾಗಿ
ಒಡಲಲಿ ಕುಡಿಯೊಡೆವ ಆ ಗರ್ಭಕಾಗಿ!!

No comments: