Sunday, August 9, 2015

ನಿದಿರೆ ಬರದ ರಾತ್ರಿಯಲ್ಲಿ ,,,,,,,,,,,,,,,ನಿದಿರೆ ಬರದ ರಾತ್ರಿಯಲ್ಲಿ  
ದೇವತೆಯಾಗಿ ಇಳಿದು ಬಾರೆಯಾ!

ನೊಂದ ಹೃದಯ ಬೆಂದ ಮನವ 
ಲಾಲಿ ಹಾಡಿ ತಣಿಸಲಾರೆಯಾ!

ರೋಸಿ ಅಳುತ ರಚ್ಚೆ ಹಿಡಿವ  
ಮನಕೆ ತಾಯಿ ನೀನಾಗೆಯಾ!

ಬಾಳ ಯಾನ ಜಟಿಲ ಪಥದಿ 
ಪ್ರೀತಿ ಸುಮವ ಅರಳಿಸೆಯಾ!

ಕಠಿಣ ಹಾದಿ ಸಾಗುವಲ್ಲಿ 
ಕೊಳಲ ಗಾನ ನೀನಾಗೆಯಾ!  

No comments: