Sunday, May 24, 2015

ಕನಸೊಂದು,,,,,,,,,,

ಮನದ ಅಂಗಳವ 
ಗುಡಿಸಿ ಅಂದದ 
ರಂಗೋಲಿಯಿಟ್ಟಂತೆ 
ಕನಸೊಂದು ಬಿತ್ತು !
ಅಂಧಕಾರದಲಿ 
ಹಣತೆಯೊಂದ ಹಚ್ಚಿ 
ಬೆಳಕು ತಂದಂತೆ 
ಕನಸೊಂದು ಬಿತ್ತು!
ದಟ್ಟ ಕಾನನದಲಿ 
ನೀ ಬಂದು ಒಲವಿಂದ 
ಕೈ ಹಿಡಿದು ನಡೆಸಿದಂತೆ 
ಕನಸೊಂದು ಬಿತ್ತು!
ಎಚ್ಚರಾದಾಗ ಗೆಳತಿ 
ಇರುಳು ಮುಗಿದಿತ್ತು 
ಬೆಳಕು ಹರಿದಿತ್ತು 
ಕನಸು ಕರಗಿತ್ತು 
ನಿಚ್ಚಳ ಹಾದಿ ಮುಂದಿತ್ತು!

No comments: