Monday, May 18, 2015

ಎಲ್ಲಿ ಹೋದೆ ಚಂದ್ರಮ,,,,,,,,,,,,,ಎಲ್ಲಿ ಹೋದೆ ಚಂದ್ರಮ 
ಮರೆತು ನಿನ್ನ ಸಂಭ್ರಮ! 
ಮರಳುಗಾಡಿನ ರಾತ್ರಿ 
ವಿರಹದುರಿಯು ಖಾತ್ರಿ! 
ನೀನಿರಲು ಆ ಆಗಸದೆ 
ಬಲು ತಂಪು ಈ ನನ್ನೆದೆ! 
ಸುಳಿವ ತುಂಟ ತಂಗಾಳಿ
ಮರಳಿ ತರಲು ಕಚಗುಳಿ! 
ಮಧುರ ಕಂಪು ಅವಳದೆ 
ಅಮರ ನೆನಪು ತಂದಿದೆ!
ದುಡಿದು ಸೋತ ತನುವು         
ಬರಿದು ಭಾವ ಮನವು !  
ಎಲ್ಲಿ ಹೋದೆ ಚಂದ್ರಮ 
ಮರೆತು ನಿನ್ನ ಸಂಭ್ರಮ! 

No comments: