Sunday, May 10, 2015

ಅಮ್ಮ!

ನಾ ಬಿದ್ದಿದ್ದ ತಳಾತಳ
ರಸಾತಳ ಪಾತಾಳವ
ಕಂಡಿದ್ದಳವಳು
ಕಂಬನಿದುಂಬಿ
ಮರುಗಿದ್ದಳವಳು
ಭರವಸೆಯ ನೀಡಿ
ಮೇಲೆತ್ತಿದ್ದಳವಳು
ಇಂದು ನಾನೇರಿರುವ
ಎತ್ತರವ ನೋಡುವ
ಮುನ್ನ ಮರೆಯಾದವಳು
ಸಹಸ್ರ ತಾರೆಗಳ ನಡುವೆ
ಕುಳಿತು ಹರಸುತಿಹಳು
ಮರೆಯಲಾಗದವಳು
ನನ್ನ ಹೆತ್ತವಳು! :-(

No comments: