Sunday, March 8, 2015

ನಿರಾಳ ಮನವಿಂದು,,,,,,,,,,,,,!!

ನಿರಾಳ ಮನವಿಂದು ನಿರಾಶೆಯ ಭೂತವ ಬದಿಗೊತ್ತಿ 
ನಿನ್ನ ನಗುಮೊಗವದು ಸೂಜಿಗಲ್ಲಿನಂತೆ ಸೆಳೆಯುತಿರೆ!

ಬದುಕು ಸಾರ್ಥಕವೆನಿಸಿದ  ಘಳಿಗೆಯನದೆಂತು ಬಣ್ಣಿಸಲಿ
ನಿನಗೆ ಆ ನಿನ್ನ ಮುಗ್ಧ ನಗುವಿಗೆ ಬೇರೆ ಸಾಟಿಯಿಲ್ಲ  ನಲ್ಲೆ!

ಭರವಸೆಯ ಬೆಳಕು ನಿನ್ನ ಚಿಗರೆ ಕಂಗಳಲಿ ಚಿಮ್ಮುತಲಿರಲು 
                           ಕ್ಷೀಣವಾಗುತ್ತಿದ್ದ  ಎದೆ ಬಡಿತ ಮತ್ತೆ ಜೋರಾಯಿತೇಕೋ!                           

ಬತ್ತಿ  ಹೋಗುತಲಿದ್ದ ಪ್ರೀತಿಯ ಒರತೆಯಲಿ ಮತ್ತೆ ಜೀವಸೆಲೆ 
 ಇರಲಿ ಈ ಭರವಸೆ ಹೀಗೆಯೇ ಬಾಳ ಪಯಣ ಮುಗಿವವರೆಗೆ! 

ದೂರಾಗದಿರು ಮತ್ತೊಮ್ಮೆ ಸಹಿಸಲಾರದೇನೋ ಈ ಜೀವ 
ಜೊತೆಯಾಗಿರು ಒಲವ ಪಯಣದಿ ಹಾಲು ಜೇನು ಬೆರೆತಂತೆ!

No comments: