Wednesday, March 4, 2015

ಹಾಯ್ಕುಗಳು - ೭

ಸುದ್ಧಿಯಾಗಿದೆ 
ನೀ ಬರದ ಘಳಿಗೆ 
ಕಾಡ್ಗಿಚ್ಚಿನಂತೆ! 

ದಗ್ಧವಾಗಿದೆ 
ಮುಗ್ಧ ಎಳೆ ಹೃದಯ 
ನಿಶ್ಯಬ್ಧವಾಗಿ!

ನಿರೀಕ್ಷೆಯಿದೆ 
ಕಣ್ಣು ಮುಚ್ಚುವ ಮುನ್ನ 
ಬರುವೆಯೆಂದು! 

ಕೇಳುತಿಹುದೆ 
ಇಗೋ ಮನದ ಕೂಗು 
ಸಶಬ್ಧವಾಗಿ!

ನಿರಾಕರಣೆ 
ತರವಲ್ಲ ತರಳೆ 
ತುಂಟಿ ನೀ ಬಲ್ಲೆ! 

ತಂಗಾಳಿಯಂತೆ 
ಸುಳಿದು ಬಳಿಗೆ ಬಾ 
ತಂಪುಹೃದಯ! 

ನೀ ಬರದಿರೆ 
ಬಾಳು ಮರಳುಗಾಡು 
ನೀನರಿಯೆಯಾ! 

No comments: