Friday, October 22, 2010

ಮುದುಡಿ ಮಲಗಿದ ನಗು ಮತ್ತೆ ಬರುವುದೇ??

ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆ
ಮು೦ಜಾವಿನ ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆ

ಹರುಷವೆ೦ಬ ಅಮೃತಧಾರೆ ಇ೦ದೇಕೋ ಅರಿಯೆ ವಿಷವಾಗಿದೆ
ಗೃಹಲಕ್ಷ್ಮಿಯ ಮೊಗದಲಿದ್ದ ನಗು ಅದೇಕೋ ಮಾಯವಾಗಿದೆ

ಸುಖ ಸಮೃದ್ಧಿಯ ಐರಾವತ ಬಾಡಿ ಇ೦ದು ಬೇಗೆಯಲಿ ಬಸವಳಿದಿದೆ
ನಲಿಯುತ ಸಾಗುತಲಿದ್ದ ಜೀವನರಥದ ಗಾಲಿ ಏಕೋ ಸ್ತಬ್ಧವಾಗಿದೆ

ಅರಿಯದ ಮಾಯೆಯ ಮುಸುಕು ಮನವ ಕವಿದು ಕಾಡುತಲಿದೆ
ಪರಿಹರಿಸುವ ದಾರಿ ಕಾಣದೆ ಮನ ನೊ೦ದು ಇ೦ದು ಮೂಕವಾಗಿದೆ

ಮಧುರ ದೈನ೦ದಿನ ಮ೦ದಸ್ಮಿತ ಕಮಲ ಮತ್ತೆ ಅರಳುವುದೇ??
ವಿಷಾದದ ಛಾಯೆಯಡಿ ಮುದುಡಿ ಮಲಗಿದ ನಗು ಮತ್ತೆ ಬರುವುದೇ??

4 comments:

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ನಿಮ್ಮ ಈ ಬ್ಲಾಗ್ ಗೆ ಮೊದಲ ಭೇಟಿ.ಚೆನ್ನಾಗಿ ಮೂಡಿಬ೦ದಿದೆ ಕವನ.ಸಕಾರಾತ್ಮಕ ಚಿ೦ತನೆ ಸಮೃದ್ಧಿಯನ್ನೇ ಕೊಡುತ್ತದೆ.ಸ೦ಶಯ ಬೇಡ ನಗು ಮತ್ತೆ ಬರುವುದು.

manju said...

ನನ್ನ ಬ್ಲಾಗ್ ಲೋಕಕ್ಕೆ ಸುಸ್ವಾಗತ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

kavinagaraj said...

ಆತ್ಮೀಯ ಮಂಜು, ನಿಮ್ಮ ಬ್ಲಾಗಿನಲ್ಲಿ ಹಣಿಕಿದೆ.ಖುಷಿಯಾಯಿತು.ನಿಮ್ಮ ಬರಹಗಳು ಚೆನ್ನಾಗಿವೆ.

manju said...

ಕವಿ ನಾಗರಾಜರೆ, ತಮ್ಮ ಮೆಚ್ಚುಗೆಯ ನುಡಿಗಳಿಗೆ ವ೦ದನೆಗಳು.