Friday, October 14, 2016

ಬ್ಯಾಗಾ ಬಾರೇ ತಿಮ್ಮಿ,,,,,,,,,,,,,,,


ತಿಮ್ಮಿ ಎಲ್ಲಿ,,,,,ನಿನ್ ತಿಮ್ಮಿ ಎಲ್ಲಿ 
ಆಂತಾವ್ರೆ ಇಲ್ಲಿ ಜನ ಕಣೆ ತಿಮ್ಮಿ!

ಕಾಣದಂಗ್ ನೀ ಹೋದೆ ಎಲ್ಲಿ 
ಬರದಂಗ್ ಇಲ್ಲಿ ನೀನಿದ್ದಿ ಎಲ್ಲಿ

ಯಾಕಿಂಗಾಡ್ತಿಯೇ ಅದ್ಯಾಕಿಂಗಾಡ್ತೀಯೇ
ಧಿಢೀರಂತ ಅದೆಲ್ಲಿ ಮಾಯಾ ಆಗ್ತೀಯೇ

ನೀನಿಲ್ದೆ ತಿಮ್ಮ ಇಲ್ಲಾ ಈ ಜೀವ ನಿಲ್ಲಾಕಿಲ್ಲಾ 
ಬ್ಯಾಗ ಬಾರೇ ತಿಮ್ಮಿ ಬ್ಯಾಗಾ ಬಾರೇ ತಿಮ್ಮಿ

ರಾಗಿಮುದ್ದೆ ಉಪ್ಪಿನೆಸ್ರು ಬಿಸಿ ಹಪ್ಪಳ ಒಸಿ ತುಪ್ಪ 
ಮಾಡಿಟ್ರೆ ನೀನು ಸ್ವರ್ಗಾ ಇಲ್ಲೇ ನೋಡೇ ತಿಮ್ಮೀ

ಮುನ್ಸೂ ಗಿನ್ಸೂ ಬುಡೇ ನೀನು ನಗ್ತಾ ನಗ್ತಾ ಬಾರೆ 
ನಿನ್ನಾ ಕಂಡು ನಗ್ತಾವ್ ಬಾನಾಗಿರೋ ಚಂದ್ರ ತಾರೆ

No comments: