Tuesday, October 6, 2015

ಎಣ್ಣೆ ಮುಗಿಯುತಲಿದೆ,,,,,,,,,,,,,,

ಎಣ್ಣೆ ಮುಗಿಯುತಲಿದೆ
ಎನುವ ಕಳವಳವೇತಕೋ?
ಅದೋ,,,ಮೇಲೊಬ್ಬನಿರುವನಲ್ಲ
ಅವನೆಲ್ಲ ನೋಡುತಿಹನಲ್ಲ!

ಉರಿವುದಷ್ಟೆ ನಿನ್ನ ಕಾಯಕ
ನೀನಲ್ಲ ನಿಜದ ಗಾಯಕ
ಉರಿಯುತಲಿರು ಉರಿದು
ಸುತ್ತಲ ಜಗವನೆಲ್ಲ ಸದಾ
ಬೆಳಗುತಿರು,,ಕೊರಗದಿರು!
ಬೆಳಕ ನೀಡುವುದು ನಿನ್ನ ಧರ್ಮ
ಪಡೆದ ಬೆಳಕಿನಲಿ ನಲಿವುದು
ಪರರ ಧರ್ಮ ಬೇಡಯ್ಯ ಚಿಂತೆ!

ಎಣ್ಣೆ ಮುಗಿಯುತಲಿದೆ
ಎನುವ ಕಳವಳವೇತಕೋ?
ಅದೋ,,,ಮೇಲೊಬ್ಬನಿರುವನಲ್ಲ
ಅವನೆಲ್ಲ ನೋಡುತಿಹನಲ್ಲ!
(ಫೋಟೋ: ರೇಖಾ. ಎನ್. ಕುಮಾರ್)

No comments: