Sunday, January 1, 2017

ತಿಮ್ಮಿ ಬಂದ್ಲು ತಿಮ್ಮಿ ಬಂದ್ಲು,,,,,,,,,,,,,,,,,,,,,

ತಿಮ್ಮಿ ಬಂದ್ಲು ತಿಮ್ಮಿ ಬಂದ್ಲು
ಬುಲ್ಡೇ ತುಂಬಾ ಹುಳಿ ಹೆಂಡ
ಮನ್ಸಿನ್ ತುಂಬಾ ಪಿರೀತಿ
ತುಂಬ್ಕೊಂಡ್ ತಂದ್ಳು ತಿಮ್ಮಿ !
ಹಳೆ ವರ್ಸಾ ಓಯ್ತು ತಿಮ್ಮಿ
ಹೊಸಾ ವರ್ಸಾ ಬಂತು ತಿಮ್ಮಿ
ಹೋಗ್ಲಿ ಹಳೆ ನೋವು ಬ್ಯಾಸ್ರ
ಬರ್ಲಿ ಬಾಳಾಗ್ ಹೊಸ ನೇಸ್ರಾ
ನಗ್ತಾ ನಗ್ತಾ ಬಾರೆ ತಿಮ್ಮಿ
ಕಷ್ಟ ನಷ್ಟ ಇರೊದೇನೆ
ಸುಖ ದುಃಖ ಬರೋದೇನೆ
ಹಗ್ಲು ರಾತ್ರಿ ಇರೊದೇನೆ
ನಾನು ನೀನು ಸಂದಾಕಿದ್ರೆ
ಲೋಕ ನಗತೈತೆ ತಿಮ್ಮಿ
ಮುನುಸ್ಕೊಂಡ್ರೆ ಆಡ್ಕೊಂಡ್
ನಗ್ತಾ ಮೂತಿ ತಿವೀತಾರ್ ತಿಮ್ಮಿ!
ಯಾರೇನಂದ್ರೇನು ನೀನಿದ್ರೆ ಸಾಕು
ನಿನ್ನ ಕೈಯ್ಯ ರಾಗಿ ಮುದ್ದೆ ಬೇಕು
ನಿನ್ನ ಪ್ರೀತಿ ಕೋಳಿ ಸಾರ್ನಾಗಿರಬೇಕು
ಲೋಕ ನಮ್ಮನ್ ನೋಡಿ ನಗ್ತಾ ಇರ್ಬೇಕು!
ತಿಮ್ಮಿ ಬಂದ್ಲು ತಿಮ್ಮಿ ಬಂದ್ಲು
ಬುಲ್ಡೇ ತುಂಬಾ ಹುಳಿ ಹೆಂಡ
ಮನ್ಸಿನ್ ತುಂಬಾ ಪಿರೀತಿ
ತುಂಬ್ಕೊಂಡ್ ತಂದ್ಳು ತಿಮ್ಮಿ !

No comments: