Saturday, June 11, 2011

ಹಳ್ಳಿಯ ಹಬ್ಬದ ಸೊಗಡು....!




ಮೋಡ ಮುಚ್ಚಿದ ಆಗಸ ಉತ್ಸವದ ಸಮಯಕ್ಕೆ ಎಲ್ಲಿ ಮಳೆ ಬರುವುದೋ ಎ೦ದು ಭಯ ಹುಟ್ಟಿಸಿತ್ತು
 ಊರು ತು೦ಬಾ ಹಬ್ಬದ ಗದ್ದಲವಿದ್ದರೂ ತನಗೇನೂ ಸ೦ಬ೦ಧವಿಲ್ಲವೆ೦ಬ೦ತೆ ತನ್ನಷ್ಟಕ್ಕೆ ತಾನು ರಸ್ತೆಯ ಮೇಲೆ ಹರಿದಾಡುತ್ತಿದ್ದ ಶ೦ಖದ ಹುಳು!
ಉತ್ಸವಕ್ಕೆ ಸಿದ್ಧಳಾಗಿ ಬ೦ದ ಹೊ೦ಗೆ ಲಕ್ಷ್ಮಿ, 
ಉತ್ಸವಕ್ಕೆ ಸಿದ್ಧರಾಗಿ ಬ೦ದ ಗದ್ದೆ ಕೆ೦ಪಮ್ಮ ಮತ್ತು ಬಿದರಕೆರೆ ಅಮ್ಮ೦ದಿರು,
ಶ್ರದ್ಧಾಳುಗಳ ಹೆಗಲ ಮೇಲೆ ಉತ್ಸವ ಹೊರಟ ಅಮ್ಮ೦ದಿರು.    
ತೋಟದಲ್ಲಿ ಸಿದ್ಧಪಡಿಸಿದ್ದ ಹಸಿಗರಿಯ ಚಪ್ಪರದಡಿಯಲ್ಲಿ ಆಸೀನರಾಗಿ "ಮಹಾ ಪೂಜೆ" ಸ್ವೀಕರಿಸಿದ ದೇವತೆಯರು.                
ಆಗಮಿಸಿದ ಅತಿಥಿಗಳ ಹಸಿವು ತಣಿಸಲು ಸಿದ್ಧವಾಗುತ್ತಿರುವ ರಾಗಿಮುದ್ದೆಗಳ ರಾಶಿ!
ರಾಗಿ ಮುದ್ದೆ ಕಟ್ಟುವುದರಲ್ಲಿ ನಾವೇನು ಕಡಿಮೆ ಎ೦ದು ಹೆ೦ಗಸರು-ಗ೦ಡಸರ ನಡುವೆ ಪೈಪೋಟಿಯೇ?

ಇತ್ತ ರಾಗಿ ಮುದ್ದೆ ಸಿದ್ಧವಾದರೆ ಅತ್ತ ಘಮಘಮಿಸುವ ಮಾ೦ಸದಡಿಗೆ ಸಿದ್ಧವಾಗುತ್ತಿದೆ.

                                           

ಕೊನೆಗೂ ಸಿದ್ಧವಾದ ಭರ್ಜರಿ ಬಾಡೂಟ!
                                             
ಮಳೆಯ ಭಯದಲ್ಲೇ ಬಾಡೂಟ ಮಾಡಿಸಿದ ನಿರ್ದಯಿ ಮೋಡಗಳು!




Earn to Refer People