ಮೊದಲ ಮಳೆಯ ಮಣ್ಣ ಈ ಘಮಲಿನಲಿ
ನಿನ್ನ ಮೊದಲ ನೋಟದ ಸೆಳೆತ ಕಂಡೆನಲ್ಲೆ!
ಆಗಸದಿ ಫಳಾರನೆ ಹೊಳೆದ ಆ ಮಿಂಚಿನಲ್ಲಿ
ನಿನ್ನಾ ಕಪಟ ನಾಟಕದ ಸಂಚ ಕಂಡೆನಲ್ಲೆ!
ಕಿವಿಗಡಚಿಕ್ಕುವ ಗುಡು ಗುಡು ಗುಡುಗಿನಲ್ಲಿ
ನಿನ್ನ ಕೋಪ ತಾಪದ ಆರ್ಭಟವ ಕಂಡೆನಲ್ಲೆ!
ಭೋರೆಂದು ಸುರಿವ ಈ ಮುಸಲಧಾರೆಯಲ್ಲಿ
ನಿನ್ನ ಪ್ರೀತಿಯ ವರ್ಷಧಾರೆಯನೇ ಕಂಡೆನಲ್ಲೆ!
ನೀನೇಕೆ ಹೀಗೆ ನೀನೇಕೆ ಹೀಗೆ ಚೆಂಡು ಮಲ್ಲೆ
ನನ್ನ ಬಿಡದೆ ಕಾಡುವೆ ಓ ನನ್ನಾ ಮುದ್ದು ನಲ್ಲೆ!
(ಮಳೆಯ ಚಿತ್ರ: Ramesh Bhadravathi, ಸುಂದರಿಯ ಚಿತ್ರ: ಅಂತರ್ಜಾಲದಿಂದ)
No comments:
Post a Comment