Tuesday, January 24, 2017

ಎಂಥಾ ಗಾಳಿ ತಿಮ್ಮಿ,,,,,,,,,,,,,,,,,,,,

ಎಂಥಾ ಗಾಳಿ ತಿಮ್ಮಿ  ಅದೆಂಥಾ ಕೆಟ್ಗಾಳಿ ಕೇಳೇ ತಿಮ್ಮಿ
ಕಡಲಿನ್ ನೀರು  ಊರಿಗ್ ನುಗ್ಗಿ ಗಬ್ಬೆಬ್ಸೋ ಗಾಳಿ ತಿಮ್ಮಿ 
ನಿನ್ನಾ ನೆನ್ಪು ಉಬ್ರಿಸ್ಕೊಂಡ್ಬರೋ ಕೆಟ್ಗಾಳಿ ಕಣೆ ತಿಮ್ಮಿ!

ಮೈಯ್ಯಾಗ ನುಗ್ಗಿ ಮೂಳೆನೆಲ್ಲಾ ಅಲ್ಲಾಡ್ಸಿ
ಬಿಸಿ ರಕ್ತ ತಣ್ಣಗ್ ಮಾಡೋ ಚಳಿಗಾಳಿ ತಿಮ್ಮಿ 
ಕಾಲಿಂದ ತಲೆಗಂಟ ಗಡಗಡ ನಡುಗ್ಸೊ ಗಾಳಿ ತಿಮ್ಮಿ!

ಎದ್ಯಾಗಿದ್ದ ಬೆಚ್ಚಗಿನ್ ನಿನ್ನ ನೆನ್ಪು ಕೆದ್ಕೋ ಗಾಳಿ ತಿಮ್ಮಿ 
ಮರೀಬೇಕಂದ ನಿನ್ನಾ ಮಾತ್ನ ಮತ್ತೆ ನೆಪ್ಪಿಗ್ ತಂತು ತಿಮ್ಮಿ
ಕೊರಿಯೋ ಚಳಿನಾಗೂ ಎದ್ಯಾಗ್ ನೋವು ತಂತು ತಿಮ್ಮಿ!

ಎಂಥಾ ಗಾಳಿ ತಿಮ್ಮಿ ಅದೆಂಥಾ  ಕೆಟ್ಗಾಳಿ ಕೇಳೇ ತಿಮ್ಮಿ
ಕಡಲಿನ್ ತೀರ್ದಾಗ್ ನಡೀತಿದ್ರೆ ಮೈಮ್ಯಾಲ್ನೀರು ತಿಮ್ಮಿ
ಕಣ್ಣಾಗುದ್ರಿದ್ ಕಣ್ಣೀರ್ ಅಂಗೇ ಒಣಗೋಯ್ತಲ್ಲೇ ತಿಮ್ಮಿ!

ಎಂಥಾ ಗಾಳಿ ತಿಮ್ಮಿ  ಅದೆಂಥಾ ಕೆಟ್ಗಾಳಿ ಕೇಳೇ ತಿಮ್ಮಿ
ಕಡಲಿನ್ ನೀರು  ಊರಿಗ್ ನುಗ್ಗಿ ಗಬ್ಬೆಬ್ಸೋ ಗಾಳಿ ತಿಮ್ಮಿ 
ನಿನ್ನಾ ನೆನ್ಪು ಉಬ್ರಿಸ್ಕೊಂಡ್ಬರೋ ಕೆಟ್ಗಾಳಿ ಕಣೆ ತಿಮ್ಮಿ!