ನನಗೆ ಗೊತ್ತೋ ಮಹಾದೇವ ನೀ ಕೋಪಗಾರನೆಂದು
ನೀ ಮೂರನೆ ಕಣ್ಣ ತೆರೆದರೆ ಲೋಕವ ಸುಡುವೆಯೆಂದು
ನನಗೆ ಗೊತ್ತೋ ಮಹಾದೇವ ನೀ ಕೋಪಗಾರನೆಂದು
ಬ್ರಹ್ಮ ಸೃಷ್ಟಿಸುವ ವಿಷ್ಣು ಹಗಲಿರುಳೆನ್ನದೆ ಕಾಯುವವ
ನನಗೆ ಗೊತ್ತೋ ಮಹಾದೇವ ನೀ ಲಯಕಾರಕನೆಂದು
ಪ್ರಶ್ನೆಯಿದು ಮನದಲಿಂದು ನೀ ಕುರುಡನೇಕಾದೆಯೆಂದು ?
ನಿನಗೆ ಕಾಣಲಿಲ್ಲವೇ ಭಯೋತ್ಪಾದಕರು ಭ್ರಷ್ಟ ರಾಜಕಾರಣಿಗಳು
ಅಬಲೆಯರ ಮಾನಭಂಗವ ಮಾಡುವ ನೀಚ ಕಾಮುಕರು....!
ನಿನ್ನ ಪ್ರಳಯತಾಂಡವಕೆ ಮೋಕ್ಷವನರಸಿ ಬಂದವರೆ ಕಂಡರೆ?
ಕೊಂದೆಯಲ್ಲೋ ಮಹಾದೇವ ನಿನ್ನನರಸಿ ನಿನ್ನ ಕಾಣಲು ಬಂದವರ
ನಿನಗೆಲ್ಲಿದೆಯೋ ಮತಿ ಮಹಾದೇವ ನನಗೇ ಇಷ್ಟಿಹುದು ದುಃಖವು
ಅವರ ರಕ್ತಬಂದುಗಳ ನೆನೆಯೋ ನೀ ಆ ಆಕ್ರಂದನವ ಆ ನೋವ
ನೀ ನಿಷ್ಕರುಣಿಯಾದೆಯೆಂದು ಜಿಗುಪ್ಸೆಗೊಂಡಿದೆಯೀ ಮನವಿಂದು
ನನಗೆ ಗೊತ್ತೋ ಮಹಾದೇವ ನೀ ಬಲು ಕೋಪಗಾರನೆಂದು ..... !
ತೋರಲೇಕೆಯೋ ಈ ಕೋಪವ ನೀ ಭ್ರಷ್ಟ ಕಾಮುಕರ ಮೇಲಿಂದು?????
No comments:
Post a Comment