ಸುರಿಯುತಿದೆ ಮುಂಗಾರು ಮಳೆ ಮನೆಯ ಹೊರಗೆ
ಹರಿಯುತಿದೆ ನೆನಪುಗಳ ಹೊಳೆ ಮನದ ಒಳಗೆ ...!
ಅಂದು ನೀ ಜೊತೆಯಿರಲು ಬದುಕು ಬಲು ಸುಂದರ
ಇಂದು ನೀ ನೆನಪಾಗಿರಲು ಈ ಬದುಕು ದುಸ್ತರ ....!
ಅಬ್ಬರಿಸುತಿಹ ಮಳೆರಾಯ ಸಿಡಿಲು ಗುಡುಗು ಮಿಂಚಿನೊಡನೆ
ನಗುತಿಹಳು ಇಳೆ ಒಡಲ ದಾಹ ತಣಿಸಿದ ಇನಿಯನೊಡನೆ...!
ಜೊತೆಯಾಗಿ ನೀ ಹಿಡಿದ ಕೊಡೆಯ ನೆನಪಾಯಿತು ನನಗಿಂದು
ಭೋರ್ಗರೆವ ಮಳೆಯಬ್ಬರದಿ ಮರೆಯಾಯಿತು ಕಂಬನಿಯ ಬಿಂದು.. !
ಭುವಿಯ ಕಸ ತೊಳೆದು ಹೊಸ ಹಸಿರ ತರುವ ಮಳೆರಾಯನೀಗ
ಮನದಿ ಕವಿದ ಕತ್ತಲ ತೊಳೆಯಲಾಗದೇ ಸೋತಿದೆ ಮಲ್ಹಾರ ರಾಗ...!
2 comments:
ಮನದ ಕೊಳೆಯನು ಮನೆವೆ ತೊಳೆಯಬೇಕು !
ಪ್ರೇಮವು ಕೊಳಕು ನೀರಾಗದೆ ಹರಿವ ಅಂತರ್ಗಂಗೆಯಾಗಬೇಕು
-ಪಾರ್ಥಸಾರಥಿ
Post a Comment