ಓ ಸಾವೇ
ನೀನೇಕೆ
ಹೀಗೆ ನಗುವೇ?
ಮುಗ್ಧ
ಅಮಾಯಕ
ಜೀವಗಳ
ಥಟ್ಟನೆ
ಹೊತ್ತೊಯ್ಯುವೆ !
ಬಲು ಗಟ್ಟಿ
ಹೃದಯಗಳನ್ನೂ
ಒಮ್ಮೆಗೇ
ಅಲ್ಲಾಡಿಸುವೆ!
ಹುಣ್ಣಿಮೆಯ
ಚಂದ್ರನನ್ನು
ಮರೆಮಾಡಿ
ಕಾಳರಾತ್ರಿಯ
ಭಯ ತರುವೆ!
ಹಾಲುಗಲ್ಲದ
ಕಂದಮ್ಮಗಳ
ಅನಾಥರ
ಮಾಡಿಬಿಡುವೆ!
ಏಕಿಂಥಾ ಆತುರ
ಅದೇಕೋ
ನೀನಿಷ್ಟು ಭೀಕರ!
ಓ ಸಾವೇ
ತುಸು ಕರುಣೆ
ತುಸು ಮರುಕ
ಮಾನವೀಯತೆ
ನಿನಗೆ ಬೇಡವೇ?
ನಿನ್ನಟ್ಟಹಾಸಕೆ
ಕೊನೆಯಿಲ್ಲವೇ?
ಅಧರ್ಮ
ಅನ್ಯಾಯದಲ್ಲೇ
ಬದುಕುವವರ
ಹೇಗೆ ಮರೆವೆ?
ಕಂಡವರ
ಮನೆಯ ಹಾಳು
ಮಾಡುವವರ
ಹೇಗೆ ಬಿಡುವೆ?
ಒಳ್ಳೆಯವರನ್ನೇ
ಏಕೆ ಹುಡುಕುವೆ?
ಸುಂದರವಾದ
ಸುಮಧುರವಾದ
ಮನಗಳನ್ನೇ ಏಕೆ
ಹುಡುಕಿ ಕೊಲ್ಲುವೆ?
ನಿನಗಿದು ತರವೇ?
ನಿನಗಿದು ತರವೇ?
ಓ ಸಾವೇ
ನೀನೇಕೆ
ಹೀಗೆ ನಗುವೇ????
(ಪಠಾಣ್ ಕೋಟ್ ಉಗ್ರರ ಧಾಳಿಯಲ್ಲಿ ಹುತಾತ್ಮರಾದ ಎಲ್ಲಾ ವೀರ ಯೋಧರಿಗೆ ಹಾಗೂ ಹಠಾತ್ತನೆ ಮರೆಯಾದ ಕನ್ನಡತಿ ಶ್ರೀಮತಿ ಹರಿಣಿಯವರಿಗೆ, ಮಣಿಪುರದ ಭೂಕಂಪದಲ್ಲಿ ಮಡಿದ ಅಮಾಯಕರಿಗೆ ಶ್ರದ್ಧಾಂಜಲಿಯೊಡನೆ, ನೊಂದ ಮನದ ಈ ಸಾಲುಗಳು.)
No comments:
Post a Comment