ಕೆಲವರ ಜೀವನ
ಬಸ್ ನಿಲ್ದಾಣದಂತೆ ಇನ್ನು ಕೆಲವರದು
ರೈಲು ನಿಲ್ದಾಣದಂತೆ
ಅಲ್ಲಿ ಬರುವವರು
ಬರುತ್ತಿರುತ್ತಾರೆ
ಹೋಗುವವರು
ಹೋಗುತ್ತಿರುತ್ತಾರೆ
ಅಪರಿಚಿತರಾದರೂ
ಅಲ್ಲಿ ತುಸು ಗದ್ದಲ
ಅಳು ನಗು ಸಂತೋಷ
ಕೋಪ ವಿಷಾದ ಉನ್ಮಾದ
ಸಣ್ಸಣ್ಣ ಆಕ್ರೋಶ
ಒಂದಷ್ಟು ಆತ್ಮೀಯತೆ
ಎಲ್ಲವೂ ಇರುತ್ತದೆ!
ಆದರೆ ನನ್ನದು ಮಾತ್ರ
ದೊಡ್ಡ ವಿಮಾನ ನಿಲ್ದಾಣ
ಅಲ್ಲಿ ಯಾವಾಗಲೂ
ಸದಾ ಮೌನದ್ದೇ ರಾಜ್ಯ
ಬರುವವರು ಭರ್ರೆಂದು
ಬಂದಿಳಿದೇ ಬಿಡುತ್ತಾರೆ
ಕೆಲವಷ್ಟು ನೆನಪುಳಿಸಿ
ಪುರ್ರೆಂದು ಹಾರಿ
ಹೋಗಿಯೇ ಬಿಡುತ್ತಾರೆ
ಮತ್ತೆಂದೂ ಬಾರದಂತೆ
ಕಣ್ಣಿಗೇ ಕಾಣದಂತೆ
ದಿವ್ಯ ವೇಗದಲ್ಲಿ!!!!
1 comment:
ಹೇಗಿದ್ದೀರಿ ಮಂಜಣ್ಣ? ಎಲ್ಲಿದ್ದೀರಿ ಈಗ?
Post a Comment