Tuesday, January 10, 2012

ಇದಾರ ಕನಸೋ......!


ಮುರುಕಲು ಗುಡಿಸಲು
ಹರಕಲು ಬಟ್ಟೆ
ಸಣಕಲು ದೇಹ
ಒಣಕಲು ಕೈಕಾಲು
ಬಡಕಲು ಹೊಟ್ಟೆ
ತಡಕಲು ಕೈಯಿ
ಹುಡುಕಲು ಮಾಯೆ
ತಿಕ್ಕಲು ಮನಸು
ಕಕ್ಕಲು ಕನಸು
ನೆಕ್ಕಲು ನಾಲಿಗೆ
ಬಿಕ್ಕಲು ಗ೦ಟಲು
ಸವಕಲು ನಾಣ್ಯ
ಹಳಸಲು ಅನ್ನ!
ಕೊಳಕಲು ಸಾ೦ಬಾರು
ಇದಾರ ಕನಸೋ!
ಅದಾರ ನನಸೋ!


Earn to Refer People

2 comments:

Swarna said...

ಬಹುಶಃ ಇದು ಯಾರ ಕನಸಲ್ಲ ಆದರೆ ಹಲವರ ನನಸು.
ಪ್ರಾಸ ಇಷ್ಟವಾಯಿತು.
ಸ್ವರ್ಣಾ

manju said...

ತಮ್ಮ ಸದಾಶಯಭರಿತ ಪ್ರತಿಕ್ರಿಯೆಗೆ ಧನ್ಯವಾದಗಳು, ಹಲವೊಮ್ಮೆ ಕೇವಲ ಎರಡು ಮೂರು ಪದಗಳ ಸಾಲುಗಳೇ ಧುಮ್ಮಿಕ್ಕಿ ಭೋರ್ಗರೆವ ಜಲಪಾತದ೦ತೆ ಭಾವಗಳನ್ನು ಸುರಿಸಬಲ್ಲವು.