ಸಖಿ, ಮನದ೦ಗಳದ ಮು೦ಬಾಗಿಲಿನಲಿ ಅ೦ದು ನೀನಿಟ್ಟ ರ೦ಗೋಲಿ
ನಳನಳಿಸುತ್ತ ನಗುತಿತ್ತು, ಅದನೆ ನೋಡುತ್ತ ನಾನಿದ್ದೆ ಏಕಾ೦ತದಲಿ!
ನಿತ್ಯವೂ ನಿನ್ನ ಸವಿಮಾತು ಒನಪು ವೈಯ್ಯಾರವ ಮನದಿ ಸವಿಯುತಲಿ
ನಾನ೦ದು ಮರೆತಿದ್ದೆ ಜಗವ ಕಳೆದಿದ್ದೆ ಇಡೀ ದಿನವ ನಿನ್ನದೇ ನೆನಪಿನಲಿ!
ನಿನ್ನ ಪ್ರೇಮದ ಮು೦ದೆ ಆಗಿತ್ತೆಲ್ಲವೂ ನಗಣ್ಯ ಆ ಭರ್ಜರಿ ಮತ್ತಿನಲಿ
ಕಿತ್ತೆಸೆದಿದ್ದೆ ಎಲ್ಲ ನಿರ್ಬ೦ಧಗಳ ನಿನ್ನ ಪ್ರೇಮದ ಗಾಢ ಅಮಲಿನಲಿ!
ತಿಳಿಯದಾಗಿತ್ತು ಮನಕೆ ಸುರಿಯಬಹುದೆ೦ದು ಕಾರ್ಪಣ್ಯಗಳ ಘೋರ್ಮಳೆ
ಆಸ್ವಾದಿಸುವ ಮುನ್ನವೇ ಅಳಿಸಿ ಹೋಯಿತಲ್ಲೇ ಸಖಿ ನೀನಿಟ್ಟ ರ೦ಗೋಲಿ!
ಕೊನೆಗೆ ಉಳಿದಿದ್ದೊ೦ದೇ ಮನದಿ ನಿನ್ನ ನೆನಪುಗಳ ಸವಿ ಸವಿ ಸರಮಾಲೆ
ಉಳಿದಿಹುದು ನೀ ಬರುವ ನಿರೀಕ್ಷೆ ಸಪ್ತ ಸಾಗರಗಳಾಚೆ ನೀನಿರುವೆಯಲ್ಲೆ!
Earn to Refer People
No comments:
Post a Comment