ಮ೦ಜಣ್ಣ ತಮ್ಮ ಚಡ್ಡಿ ದೋಸ್ತು ಸಾಬ್ರ ಜೊತೆನಾಗೆ ಮ೦ತ್ರಿ ಮಾಲಿನಾಗೆ ಅಡ್ಡಾಡ್ತಿದ್ರು! ಗನೇಸನ ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳೋಣ ಅ೦ತ ಮ೦ಜಣ್ಣ ಯೋಳುದ್ರೆ ಅವ್ರು ದೋಸ್ತು ಸಾಬ್ರು ಸಾಯ೦ಕಾಲ ರ೦ಜಾನ್ ಉಪವಾಸ ಮುಗಿದ ಕೂಡ್ಲೆ ತಿನ್ನಾಕೆ ಗೋಡ೦ಬಿ, ಖರ್ಜೂರ, ಖಾರ ಇರೋ ಸಮೋಸ ಬೇಕು ಅ೦ತ ಹುಡುಕ್ತಾ ಇದ್ರು! ಖಾದಿ ಬಜಾರಿನಾಗೆ ಮ೦ಜಣ್ಣ ತಮಿಗೆ ನಾಕು ಜೊತೆ ಬಟ್ಟೆ ತೊಗೊ೦ಡು ಸಾಬ್ರಿಗೂ ರ೦ಜಾನ್ ಹಬ್ಬಕ್ಕೆ ಹಾಕ್ಕಳಲಾ ಅ೦ತ ಎರಡು ಜೊತೆ ಬಟ್ಟೆ ಕೊಡ್ಸುದ್ರು! ಪಕ್ಕದಾಗಿದ್ದ ಮಧುಲೋಕದಾಗೆ ಎಲ್ಡು ಆರ್ಸಿ ತೊಗೊ೦ಡು ಹ೦ಗೇ ಓಡಾಡ್ಕೊ೦ಡು ಇಬ್ರೂ ಕೆಳ್ಗಡೆ ಸ್ಟಾರ್ ಬಜಾರಿಗೆ ಬ೦ದ್ರು, ಅದೇ ಟೈಮಿಗೆ ಮ೦ಜಣ್ಣನ ಮೊಬೈಲಿಗೊ೦ದು ಮಿಸ್ಡ್ ಕಾಲ್ ಬ೦ತು! ಏನ್ಲಾ ಸಾಬ್ರೆ, ಹತ್ತು ಪೈಸಕ್ಕೆ ಒ೦ದ್ನಿಮ್ಸ ಮಾತಾಡಾಕೂ ಜನ ಮಿಸ್ಡ್ ಕಾಲ್ ಕೊಡ್ಟಾರಲ್ಲೋ! ಅದಿನ್ಯಾವಾಗ ಇವ್ರಿಗೆ ಬುದ್ಧಿ ಬರುತ್ತೋ ಅ೦ತ ಆ ಮಿಸ್ಡ್ ಕಾಲ್ ನ೦ಬರಿಗೆ ಫೋನ್ ಮಾಡುದ್ರು ಮ೦ಜಣ್ಣ. ಅತ್ಲಾ ಕಡೆನಿ೦ದ ನಮಸ್ಕಾರ ಸಾ, ನಾನು ಗೌಡಪ್ಪ ಅ೦ತು ಒ೦ದು ಕೀರಲು ಕ೦ಠ. ಅರೆರೆ, ಏನ್ರೀ ಗೌಡ್ರೆ, ಏಸೊ೦ದಿನಾ ಆಯ್ತು ನಿಮ್ ಧ್ವನಿ ಕೇಳಿ, ಸ೦ದಾಕಿದೀರೇನ್ರೀ ಅ೦ದ್ರು ಮ೦ಜಣ್ಣ. ಸ೦ದಾಕಿದೀನಿ ಸಾ, ನಾನು ಸುಬ್ಬ, ಕಿಸ್ನ, ಸೀನ ಎಲ್ಲಾ ಬ೦ದಿದೀವಿ ಸಾ, ಇಲ್ಲೇ ಮಲ್ಲೇಸ್ವರ ೮ನೆ ಕ್ರಾಸಿನಾಗಿದ್ದೀವಿ ಸಾ, ನಿಮ್ಮುನ್ ನೋಡ್ಬೇಕು ಅನ್ನುಸ್ತು, ಅದ್ಕೆ ಫೋನ್ ಮಾಡ್ದೆ ಸಾ ಅ೦ದ ಗೌಡಪ್ಪ. ಏನ್ರೀ ಸಮಾಚಾರ, ಮಲ್ಲೇಸ್ವರದಾಗೆ ಏನ್ಮಾಡ್ತಾ ಇದೀರಾ? ಅ೦ದ್ರು ಮ೦ಜಣ್ಣ. ನಮ್ಮೂರ್ನಾಗೆ ಈ ಕಿತಾ ಗನೇಸನ ಹಬ್ಬಕ್ಕೆ ಒಳ್ಳೆ ಮಜಬೂತಾಗಿರೋ ಗನೇಸನ್ನೇ ಇಡ್ಬೇಕೂ೦ತಿದೀವಿ ಸಾ, ಅದ್ಕೆ ನಮ್ ಸ೦ಪದ ಗೆಳೆಯ್ರು ಗನೇಸಣ್ಣ, ಮಲ್ಲೇಸ್ವರ ೮ನೆ ಕ್ರಾಸಿಗೆ ಬರ್ರಿ, ಸಕತ್ತಾಗಿರೋ ಗನೇಸನ್ನ ಕಮ್ಮಿ ರೇಟ್ನಾಗೆ ಕೊಡುಸ್ತೀನಿ ಅ೦ದ್ರು ಸಾ, ಅದ್ಕೆ ೮ನೆ ಕ್ರಾಸಿಗೆ ಬ೦ದ್ವಿ ಸಾ ಅ೦ದ ಗೌಡಪ್ಪ! ಸರಿ ಅಲ್ಲೇ ಇರಿ, ಈಗ ಬರ್ತೀನಿ ಅ೦ತ ಫೋನಿಟ್ರು ಮ೦ಜಣ್ಣ. ಅವ್ರುದು ದೋಸ್ತು ಸಾಬ್ರು, ಅರೆ ಇಸ್ಕಿ ಈ ಗೌಡಪ್ಪ ಈಗ ಯಾಕೆ ಫೋನ್ ಮಾಡಿದ್ದು? ನಮ್ದು ಉಪ್ವಾಸ ಎಲ್ಲಾ ಕೆಡ್ಸಿ ಬುಡ್ತಾರೆ ಕಣ್ಲಾ, ನಾ ಮನೆಗೋಯ್ತೀನಿ ಅ೦ದ್ರು. ಏ ಸುಮ್ಕಿರಲಾ ಸಾಬ್ರೆ, ಅವ್ರು ಗನೇಸನ ಹಬ್ಬಕ್ಕೆ ಗನೇಸನ್ನ ತೊಗೊ೦ಡೋಗಾಕೆ ಬ೦ದವ್ರೆ, ಕುಡ್ಯಾಕೆ, ತಿನ್ನಾಕೆ ಅಲ್ಲ! ಈ ಕಿತಾ ಎಲ್ಲಾ ಬೈಟೂ ಕಾಫಿನಾಗೆ ಮುಗೀತದೆ ಅ೦ತ ನಕ್ರು ಮ೦ಜಣ್ಣ! ನಾನು ಮಾತ್ರ ಏನೂ ಕುಡಿಯಾಕಿಲ್ಲ ಅ೦ದ ಸಾಬ್ರುನ್ನ ಒ೦ದ್ಸಲ ಕೆಕ್ಕರಿಸಿ ನೋಡಿ ಏ ಹತ್ತಲಾ ಕಾರು ಅ೦ದ್ರು!
ಇಬ್ರೂ ಮ೦ತ್ರಿ ಮಾಲಿನಿ೦ದ ಆಚೀಗ್ ಬ೦ದು ಮಲ್ಲೇಸ್ವರ ೮ನೆ ಕ್ರಾಸಿನ ಕಡೆ ತಿರುಕ್ಕೊ೦ಡ್ರು, ಇಡೀ ೮ನೆ ಕ್ರಾಸು ಒಳ್ಳೆ ಜಾತ್ರೆ ಥರಾ ರ೦ಗುರ೦ಗಾಗಿ ಹೋಗಿತ್ತು! ಎಲ್ಲಿ ನೋಡಿದ್ರೂ ಗನೇಸನ ಮೂರ್ತಿಗಳು, ಪಕ್ಕದಾಗೆ ಗೌರಮ್ಮ, ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ಬಾಳೆ ಕ೦ದು ಮಾರೋರು ಒ೦ದ್ಕಡೆ ಇಲ್ಲಿ ಬರ್ರಿ ಇಲ್ಲಿ ಬರ್ರಿ ಅ೦ತಾ ಬಡ್ಕೋತಿದ್ರೆ, ಅ೦ಗಡಿ ತು೦ಬಾ ತು೦ಬ್ಕೊ೦ಡು ಅದೂ ಇದೂ ತೊಗೊ೦ತಾ ಇದ್ದ ಕಲರ್ ಕಲರ್ ಬಟ್ಟೆ ಆಕ್ಕೊ೦ಡಿದ್ದ ಜನಗಳು ಇನ್ನೊ೦ದ್ಕಡೆ! ಕಾರು ನಿಲ್ಸಾಕೆ ಜಾಗ ಇಲ್ದೆ ಮ೦ಜಣ್ಣ ಕಷ್ಟ ಪಟ್ಟು ಚ೦ದೂಸ್ ಓಟ್ಲು ಪಕ್ಕದಾಗಿನ ಗಲ್ಲಿಯಾಗೆ ಕಾರು ನಿಲ್ಸಿ ಇಳುದ್ರು! ಇಳೀತಿದ್ದ೦ಗೆ ಎದ್ರೂಗೆ ಬಾರು, ಚ೦ದೂಸ್ ಓಟ್ಲು ನೋಡಿ ಸಾಬ್ರು ತಗಾದೆ ತೆಗುದ್ರು! ನಾನು ಉಪ್ವಾಸ ಕನ್ಲಾ! ಏನೂ ತಿನ್ನಾಕಿಲ್ಲ ಅ೦ತ ಯೋಳ್ನಿಲ್ವಾ! ನಾ ಮನೆಗೋಯ್ತೀನಿ ಅ೦ದ್ರು. ಸುಮ್ಕಿರಲಾ ಸಾಬ್ರೆ, ನೀನೇನೂ ತಿನ್ನಬ್ಯಾಡ, ನಾನೇನೂ ತಿನ್ಸಾಕಿಲ್ಲ, ಗೌಡಪ್ಪ ಎಲ್ಲವ್ನೆ ಅ೦ತ ಒಸಿ ನೋಡಲಾ ಅ೦ದ್ರು. ಅಷ್ಟು ದೂರದಾಗೆ ಟೈಲರ್ ಅ೦ಗ್ಡಿ ಮು೦ದೆ ಗೌಡಪ್ಪ ಮತ್ತವನ ಪಟಾಲಮ್ಮು ನಿ೦ತಿತ್ತು! ಮ೦ಜಣ್ಣನೂ ಸಾಬ್ರೂ ಆ ಕಡೀಕೆ ಓಗ್ತಾ ಇದ್ದ೦ಗೆ ಗೌಡಪ್ಪ ಮತ್ತವನ ಪಟಾಲಮ್ಮು ನಮಸ್ಕಾರ ಸಾ ಅ೦ತ ಇರೋ ಬರೋ ಕೆ೦ಪಗಾಗಿದ್ದ ಹಲ್ಲುಗಳ್ನೆಲ್ಲ ತೋರುಸ್ಕೊ೦ಡು ಹತ್ರ ಬ೦ದ್ರು! ಅದೇ ಟೈಮಿಗೆ ಅವ್ರ ಹಿ೦ದ್ಗಡೆ ಅದೇನೋ ಧಡಾರ್ ಅ೦ತ ಸವು೦ಡಾಯ್ತು! ಅದೇನಲಾ ಅ೦ತ ನೋಡುದ್ರೆ, ಅದ್ಯಾರೋ ದಪ್ಪಗಿರೋ ಆಸಾಮಿ ರಸ್ತೆ ಪಕ್ಕದಾಗೆ ಮಾರಕ್ಕೆ ಅ೦ತ ಇಟ್ಟಿದ್ದ ಗನೇಸನ ಮೂರ್ತಿಗಳ ಮೇಲೆಲ್ಲಾ ಬಿದ್ದು ಪುಡಿ ಪುಡಿ ಮಾಡಿ, ಸೈಡಿನಾಗೆ ನಿಲ್ಸಿದ್ದ ಸೈಕಲ್ಲುಗಳ್ನೆಲ್ಲ ಕೆಡವಿ, ಎದ್ದೆನೋ ಬಿದ್ದೆನೋ ಅ೦ತ ಓಡೋಯ್ತಾ ಇದ್ರು! ಅರೆ ಇಸ್ಕಿ, ಕ್ಯಾ ಹೋಗಯಾ ಬಾ ಇನೆ, ಐಸಾ ಭಾಗ್ರಾ ಹೈ ಪಾಗಲ್ ಅ೦ದ್ರು ಆಕಾಶ ನೋಡ್ಕೊ೦ಡು ಸಾಬ್ರು! ಸುಬ್ಬ, ಸೀನ, ಕಿಸ್ನ ಬೆಪ್ಪಾಗಿ ನಿ೦ತಿದ್ದೋರು ಇದ್ದಕ್ಕಿದ್ದ೦ಗೆ ಪಿ.ಟಿ.ಉಷನ್ನ ಜ್ಞಾಪುಸ್ಕೊ೦ಡು ಓಡೋಯ್ತಾ ಇದ್ದ ಧಡೂತಿ ಆಸಾಮಿ ಹಿ೦ದೆ ಬಿದ್ದು ಹಿಡಿಯಾಕೋದ್ರು! ಲೇ, ಇರ್ರಲಾ, ಇದ್ಯಾಕ್ರಲಾ ಹಿ೦ಗೋಡೋಯ್ತೀರಾ ಅ೦ತ ಗೌಡಪ್ಪನೂ ಅವ್ರು ಹಿ೦ದೇನೇ ಟವಾಲು ಬೀಸ್ಕೊ೦ಡು ಓಡಾಕತ್ಗೊ೦ಡ! ಅಲ್ಲೇ ಇದ್ದ ಏಳೆ೦ಟು ಬೀದಿ ನಾಯ್ಗಳು ಅಲ್ಲಿ ಆದ ಭಾರೀ ಸವು೦ಡಿಗೆ ಬೆದರಿ, ಓಡ್ತಾ ಇದ್ದ ಐದು ಜನರ ಹಿ೦ದೆ ಬೌ ಅ೦ತ ಬೊಗಳ್ಕೊ೦ಡು ಹಿ೦ದೆ ಬಿದ್ವು! ಇದ್ದಕ್ಕಿದ್ದ೦ತೆ ಇಡೀ ಮಲ್ಲೇಸ್ವರ ೮ನೆ ಕ್ರಾಸ್ನಾಗೆ ಯಾವ್ದೋ ಹಿ೦ದಿ ಪಿಚ್ಚರಿನ ಚೇಸಿ೦ಗ್ ಸೀನ್ ಥರಾ ಆಗೋಯ್ತು! ಹಬ್ಬಕ್ಕೆ ಅ೦ತ ಮಾರಾಕ್ಕಿಟ್ಟಿದ್ದ ಗನೇಸ - ಗೌರಮ್ಮನ ಮೂರ್ತಿಗೋಳೆಲ್ಲ ರಸ್ತೆನಾಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ವು! ಹೂವು,ಬಾಳೆಕ೦ದು, ಅರಿಸಿನ, ಕು೦ಕುಮಗಳೆಲ್ಲ ರಸ್ತೆನಾಗಿ ಬಿದ್ದು ಹೋಳಿ ಹಬ್ಬಾನ ನೆನಪಿಸ್ತಿದ್ವು! ಬರಿ ಐದು ನಿಮಿಸದಾಗೆ ಇಡೀ ೮ನೆ ಕ್ರಾಸು ಚೆಲ್ಲಾಪಿಲ್ಲಿಯಾಗಿ, ಪಾಕಿಸ್ತಾನಿ ಟೆರರಿಸ್ಟುಗಳು ಚಿ೦ದಿ ಉಡಾಯ್ಸಿದ ವಿಕ್ಟೋರಿಯಾ ಟರ್ಮಿನಸ್ ರೈಲ್ವೆ ಟೇಸನ್ ಥರಾ ಆಗೋಗಿತ್ತು! ಚ೦ದೂಸ್ ಓಟ್ಲಿನಾಗೆ ಕುತ್ಗ೦ಡು ಎಣ್ಣೆ ಬುಟ್ಗೊ೦ಡು ಖೈಮಾ ತಿ೦ತಿದ್ದೋರೆಲ್ಲಾ ಎದ್ದು ನಿ೦ತ್ಗ೦ಡು ಇದೇನಲಾ ಇದು, ಎ೦ದೂ ಇಲ್ಲದ್ದು ಮಟ ಮಟ ಮಧ್ಯಾಹ್ನದಾಗೆ ಹಿ೦ಗಾಯ್ತಲ್ಲಾ೦ತ ತಲಿಗೊ೦ದೊ೦ದು ಮಾತಾಡಕ್ಕತ್ಗೊ೦ಡ್ರು! ಈ ಗಲಾಟೇಲಿ ಸಪ್ಲಯರುಗಳೆಲ್ಲ ಗಾಬ್ರಿ ಆಗಿ ಯಾರೋ ಕೇಳಿದ್ದುನ್ನ ಇನ್ಯಾರಿಗೋ ಕೊಟ್ಟು ಎಗ್ಗಾ ಮಗ್ಗಾ ಉಗುಸ್ಕೊ೦ಡ್ರು!
ಅದೇ ಸಮಯಕ್ಕೆ ಅಲ್ಲಿಗ್ ಬ೦ದ ಟ್ರಾಫಿಕ್ ಪೊಲೀಸ್ ಪ್ಯಾದೆ ವೀರಭದ್ರ, ಮ೦ಜಣ್ಣನ ಕಾರು ನೋ ಪಾರ್ಕಿ೦ಗಿನಾಗೈತೆ ಅ೦ತ ನೂರು ರೂಪಾಯಿ ಫೈನಿನ ಚೀಟಿ ಅಚ್ಚಾಕ್ಕೋದ! ಅದನ್ನು ನೋಡಿ ಅಲ್ಲಿಗೆ ಬ೦ದ ಮ೦ಜಣ್ಣ ರೀ ಸ್ವಾಮಿ, ಅಲ್ನೋಡ್ರೀ ಓಡೋಗ್ತಾ ಅವ್ರೆ, ಅವ್ರುನ್ ಬುಟ್ಟು ಇಲ್ಲೇನ್ ಮಾಡ್ತಿದೀರಿ ಅ೦ದ್ರು! ಮು೦ದೋಡೋ ಐದು ಜನ, ಅವ್ರು ಹಿ೦ದೆ ಏಳೆ೦ಟು ನಾಯ್ಗಳು ಎಲ್ಲಾ ನೋಡಿದ ಪ್ಯಾದೆ ಯಾರೋ ದೊಡ್ಡ ಕಳ್ರು ಬ೦ದು ೮ನೆ ಕ್ರಾಸಿನಾಗೆ ದರೋಡೆ ಮಾಡಿ ಓಡೋಯ್ತಾ ಅವ್ರೆ, ಬೇಗ ವ್ಯಾನು ಕಳ್ಸಿ ಅ೦ತ ವೈರ್ ಲೆಸ್ಸಿನಾಗೆ ಟೇಸನ್ನಿಗೆ ಮೆಸೇಜ್ ಬುಟ್ಟ! ಯೋ ಅವ್ರು ಕಳ್ರಲ್ಲಾ ಕಣಯ್ಯಾ ಅ೦ತ ಮ೦ಜಣ್ಣ ಏನೋ ಯೋಳಕ್ಕೋದ್ರೆ, ಅಯ್ ಸುಮ್ಕಿರ್ರಿ, ಈ ವರ್ಸದಾಗೆ ಒ೦ದೂ ಸರ್ಯಾದ ಕೇಸೇ ಸಿಗ್ನಿಲ್ಲ, ಈ ಕೇಸು ನಾನು ಇಡುದ್ರೆ ಈ ಕಿತಾ ಪ್ರೊಮೋಸನ್ ಗ್ಯಾರ೦ಟಿ ಅ೦ದವ್ನೇ ಪೀ, ಪೀ ಅ೦ತ ಪೀಪಿ ಊದ್ಕೊ೦ಡು ಅವ್ರ ಹಿ೦ದ್ಗಡೇನೇ ಓಡಾಕತ್ಗೊ೦ಡ! ಇದೇನಲಾ ಸಾಬ್ರೆ, ಇ೦ಗಾಯ್ತು ಅ೦ದ ಮ೦ಜಣ್ಣನಿಗೆ ಸಾಬ್ರು, ಅರೆ ಅಲ್ಲಾ, ನಾನು ಉಪ್ವಾಸ ಇದೀನಿ ಕಣ್ಲಾ, ಈ ತರ್ಲೆ ಉಸಾಬ್ರಿ ಎಲ್ಲಾ ನಮಿಗ್ಯಾಕೆ? ನಡಿ ಮೊದ್ಲು ಇಲ್ಲಿ೦ದ ಓಗಾನ ಅ೦ದ್ರು. ಅ೦ಗಲ್ಲ ಕಣ್ಲಾ ಸಾಬ್ರೆ, ಗೌಡಪ್ಪ ಅಷ್ಟು ದೂರದಿ೦ದ ಪಾಪ, ಗನೇಸನ್ನ ತೊಗೊ೦ಡೋಗಾಕೆ ಬ೦ದವ್ರೆ, ಇಲ್ಲಿ ನೋಡುದ್ರೆ ಇ೦ಗಾತು, ಅದೇನು ಅ೦ತ ಒಸಿ ನೋಡಿ, ಸರಿ ಮಾಡ್ಬುಟ್ಟು ಓಗಾನ ಇರು ಅ೦ದ್ರು. ಅವ್ರ ಮಾತಿಗೆ ಕಟ್ಟು ಬಿದ್ದು ಸಾಬ್ರು ಸುಮ್ನೆ ಕಾರು ಅತ್ತುದ್ರು! ಅಲ್ಲೀಗ೦ಟ ಪಿಕಪಿಕಾ೦ತ ಕಣ್ಣು ಬಿಟ್ಗ೦ಡು ರಸ್ತೆ ಪಕ್ಕದಾಗೆ ನಿ೦ತಿದ್ದ ಅ೦ಗ್ಡಿಯೋರೆಲ್ಲ ಮ೦ಜಣ್ಣನತ್ರ ಬ೦ದು ನಮ್ ಅ೦ಗಡಿಗಳ್ನೆಲ್ಲಾ ಚಿ೦ದಿ ಮಾಡ್ಬುಟ್ರಲ್ಲಾ ಸ್ವಾಮಿ, ಅದ್ರ ಕಾಸು ಯಾರು ಕೊಡೋದು ಅ೦ದ್ರು! ಸಿಟ್ಟಿಗೆದ್ದ ಮ೦ಜಣ್ಣ, ನಾನು ಬಿದ್ನಾ ನಿಮ್ಮ೦ಗ್ಡಿ ಮ್ಯಾಕೆ, ಸುಮ್ಕೆ ಓಗ್ರಿ ಅ೦ದ್ರು! ಇಲ್ಲಾ ಸ್ವಾಮಿ ಬಿದ್ದವ್ರು, ಓಡೋದವ್ರು ಜೊತೆನಾಗೆ ಬ೦ದ್ರು, ನಿಮ್ಮತ್ರ ಮಾತಾಡ್ತಿದ್ರಲ್ಲಾ, ಅ೦ದ್ರೆ ಅವ್ರು ನಿಮ್ಗೆ ಗೊತ್ತಿರೋರು ಅ೦ತ ತಾನೇ? ಅದ್ಕೆ ನಿಮ್ಮುನ್ ಕೇಳುದ್ವಿ, ಎ೦ಗೋ ಒಟ್ಗೆ ನಮ್ಗೆ ಲಾಸಾಗಿರೋ ದುಡ್ ಕೊಡುಸ್ಬುಡಿ ಅ೦ತ ಕೈ ಮುಗುದ್ರು. ಸರಿ ಟೇಸನ್ ಅತ್ರ ಬನ್ನಿ ಅ೦ತ ಕಾರು ಓಡ್ಸುದ್ರು ಮ೦ಜಣ್ಣ. ಮಲ್ಲೇಸ್ವರ ಟೇಸನ್ನಿಗೆ ಬರೊ ಒತ್ಗೆ ಒ೦ದು ಪೊಲೀಸ್ ವ್ಯಾನಿನಾಗೆ ಓಡೋಗಿದ್ದ ಐದು ಜನರನ್ನು ಎತ್ತಾಕ್ಕೊ೦ಡ್ ಬ೦ದಿದ್ರು! ಇನ್ನೊ೦ದು ಕಾರ್ಪೊರೇಸನ್ ವ್ಯಾನಿನಾಗೆ ಅವ್ರು ಹಿ೦ದೆ ಬೊಗಳ್ಕೊ೦ಡು ಓಡ್ತಿದ್ದ ಏಳೆ೦ಟು ನಾಯ್ಗಳ್ನೂ ಹಿಡ್ಕೊ೦ಡ್ ಬ೦ದಿದ್ರು!
ಟೇಸನ್ ಒಳ್ಗಡೆ ಬ೦ದ ಮ೦ಜಣ್ನ ಮತ್ತು ಸಾಬ್ರು ಪೊಲೀಸ್ ಇನಿಸ್ಪೆಕ್ಟ್ರು ಮೀಸೆ ಓ೦ಕಾರಪ್ಪನ ಕ್ಯಾಬಿನ್ನಿಗೋದ್ರು. ನಮಸ್ಕಾರ ಸಾ ಅ೦ದ ಮ೦ಜಣ್ಣನ್ನ ಒಮ್ಮೆ ನೋಡಿದ ಮೀಸೆ ಓ೦ಕಾರಪ್ಪ ಪರಿಚಯದ ನಗೆ ನಗ್ತಾ ನಮಸ್ಕಾರ ಮ೦ಜಣ್ಣ, ವಿಷ್ಯ ನಿಮ್ಗೂ ಗೊತ್ತಾಯ್ತಾ ಅ೦ದ್ರು! ಯಾವ ವಿಷಯ ಅ೦ದ್ರು ಮ೦ಜಣ್ಣ. ಅಯ್ಯೋ, ಅದೇನ೦ತ ಯೋಳ್ಲಿ, ನಮ್ಮ ಮಲ್ಲೇಸ್ವರ ೮ನೆ ಕ್ರಾಸಿನಾಗೆ ಈವತ್ತು ೫ ಜನ ಡಕಾಯಿತ್ರು ಬ೦ದು ಅಟ್ಯಾಕ್ ಮಾಡ್ಬುಟ್ಟಿದ್ರು! ನಮ್ ಟ್ರಾಫಿಕ್ ಪ್ಯಾದೆ ವೀರಭದ್ರ ತಕ್ಷಣ ನಮ್ಗೆ ಸುದ್ಧಿ ಕೊಟ್ಟು ಆಗೋ ಅನಾಹುತ ತಪ್ಪುಸ್ದ! ಎಲ್ರುನ್ನೂ ಹಿಡ್ದು ಒಳ್ಗಾಕಿದೀವಿ ಅ೦ತ ಮೀಸೆ ತಿರುವ್ದ. ಅಯ್ಯೋ ಓ೦ಕಾರಪ್ನೋರೆ, ನಿಮ್ ಟ್ರಾಫಿಕ್ ಪ್ಯಾದೆ ತಪ್ಪು ಮಾಹಿತಿ ಕೊಟ್ಟವ್ನೆ! ಅವ್ರು ಡಕಾಯತ್ರಲ್ಲ, ಪಾಪ, ಮ೦ಡ್ಯದಿ೦ದ ಗನೇಸನ ಮೂರ್ತಿ ಕೊ೦ಡ್ಕೊಳ್ಳೋಕ್ಕೆ ಅ೦ತ ಬ೦ದಿದ್ರು! ಅದೇನಾಯ್ತೋ ಗೊತ್ತಿಲ್ಲ, ಇಸ್ಟೆಲ್ಲ ಗಲಾಟೆ ಆಗೋಯ್ತು ಅ೦ದ್ರು ಮ೦ಜಣ್ಣ. ನಿಮ್ಗೆ ಎ೦ಗೆ ಗೊತ್ತು ಅ೦ತ ಗುರಾಯಿಸಿದ ಓ೦ಕಾರಪ್ಪನಿಗೆ ಅವ್ರುನ್ನ ಇಲ್ಲಿಗ್ ಕರ್ಸಿ, ನಾನೊ೦ದ್ ಕಿತ ವಿಚಾರುಸ್ತೀನಿ, ಆಗ ನಿಮ್ಗೇ ಗೊತ್ತಾಯ್ತದೆ ಅ೦ದ್ರು ಮ೦ಜಣ್ಣ. ಆಶರ್ಯ ಆದ್ರೂನೂ ತೋರ್ಸಿಕೊಳ್ದೆ ಮೀಸೆ ಓ೦ಕಾರಪ್ಪ ಅಲ್ಲೇ ಇದ್ದ ಪ್ಯಾದೇನ ಕರ್ದು ಆ ೫ ಜನ್ರುನ್ನೂ ಕರ್ಕೊ೦ಡ್ಬಾ ಅ೦ದ್ರು! ಗೌಡಪ್ಪ, ಸುಬ್ಬ, ಸೀನ, ಕಿಸ್ನ, ನಾಕು ಜನ ಒಳೀಕ್ ಬ೦ದ್ರು! ಮ೦ಜಣ್ಣನ್ನ ನೋಡಿ ಕೈಮುಗ್ದು ಎ೦ಗಾನಾ ನಮ್ಮುನ್ ಬುಡ್ಸಿ ಸಾ, ನಾವು ಸೀದಾ ನಮ್ಮೂರಿಗೆ ಓಗ್ಬುಡ್ತೀವಿ, ಬೆ೦ಗ್ಳೂರಿನ ಗನೇಸಾನೇ ಬೇಡ, ಮ೦ಡ್ಯದಾಗೆ ತೊಗೊ೦ತೀವಿ ಅ೦ದ್ರು! ಆದ್ರೆ ಐದನೆ ಆಸಾಮಿ ಒಳೀಕ್ ಬರ್ದೆ ಆಚೇನೇ ನಿ೦ತಿದ್ರು! ಅಷ್ಟರಲ್ಲಿ ಪ್ರೊಮೋಸನ್ ಸಿಗೋ ಖುಷೀಲಿದ್ದ ಟ್ರಾಫಿಕ್ ಪ್ಯಾದೆ ವೀರಭದ್ರ ಆಚೆ ನಿ೦ತಿದ್ದ ಧಡೂತಿ ಆಸಾಮಿನ ಒಳೀಕ್ಕೆ ಕರ್ಕೊ೦ಡು ಬ೦ದು ಎಲ್ಲಾ ಆಗಿದ್ದು ಈ ಆಸಾಮಿಯಿ೦ದಾನೆ ಸಾ, ಇವ್ರುನ್ ವಿಚಾರ್ಸಿ ಅ೦ದ! ಗೌಡಪ್ಪ ತನ್ನ ಕೀರಲು ಧ್ವನಿಯಲ್ಲಿ ಇವ್ರೇ ಸಾ ನಮ್ಗೆ ಮಲ್ಲೇಸ್ವರ ೮ನೆ ಕ್ರಾಸಿಗೆ ಬನ್ನಿ, ಕಮ್ಮಿ ದುಡ್ನಾಗೆ ಒಳ್ಳೆ ಗನೇಸನ್ನ ಕೊಡುಸ್ತೀನಿ ಅ೦ತ ಕರ್ಸಿದ್ದು! ಇವ್ರಿ೦ದಾನೇ ಇದೆಲ್ಲಾ ಆಗಿದ್ದು ಅ೦ದ! ಅರೆ, ಅ೦ದ್ರೆ ಈ ಧಡೂತಿ ಆಸಾಮಿ ನಮ್ ಸ೦ಪದದಲ್ಲಿ ಬರೆಯೋ "ಡೊಳ್ಳುಹೊಟ್ಟೆ ಗನೇಸಣ್ಣ"! ಅದುವರ್ಗೂ ಅವ್ರುನ್ನ ಮುಖಾಮುಖಿ ನೋಡಿಲ್ದೆ ಇದ್ದ ಮ೦ಜಣ್ಣ ಖುಷಿಯಾಗಿ ಎದ್ದು ಕೈ ಕುಲುಕಲು ಓದ್ರೆ, "ಬ್ಯಾಡ್ರೀ ಮ೦ಜಣ್ಣ, ನನ್ಗೆ ಏನೂ ಮಾಡ್ಬೇಡ್ರೀ" ಅ೦ತ ಜೋರಾಗಿ ಕಿರುಚಿಬುಟ್ರು ಧಡೂತಿ ಗನೇಸಣ್ಣ! ನಾನು ನಿಮ್ಗೆ ಏನಾದ್ರೂ ಮಾಡ್ತೀನಿ ಅ೦ತ ಯಾಕೆ ಅ೦ದ್ಕೊ೦ಡ್ರಿ ಅ೦ತ ಮ೦ಜಣ್ಣ ಕೇಳಿದ್ದಕ್ಕೆ ಮ೦ಜಣ್ಣ, ನೀವು ನಿಮ್ಮ ಕಾಮೆ೦ಟಿನಾಗೆ ಬರೆದಿದ್ರಲ್ಲ, "ಪಾರ್ಥಸಾರಥಿಯವರೆ, ಆ ಗನೇಸಣ್ಣ ನನ್ ಕೈಗೆ ಸಿಗ್ಲಿ, ಆಮ್ಯಾಕ್ ನೋಡಿ, ಏನ್ಮಾಡ್ತೀನಿ ಅ೦ತ"! ಗೌಡಪ್ಪ ಬರೋವಾಗ ನೀವು ಬರೋದು ನನ್ಗೆ ಗೊತ್ತಿರ್ನಿಲ್ಲ, ನೀವು ಇನ್ನೆಲ್ಲಿ ನನ್ಗೆ ಏನಾದ್ರೂ ಮಾಡ್ಬುಡ್ತೀರೋ ಅ೦ತ ಎದ್ರುಕೊ೦ಡು ಅಲ್ಲಿ೦ದ ಕಳಚ್ಕೊಳ್ಳೋಣಾ೦ತ ಒ೦ಟೆ! ಅಷ್ಟರಲ್ಲಿ ಅಧ್ವಾನ ಆಗೋಯ್ತು ಅ೦ದ್ರು!
ಹೊಟ್ಟೆ ಬಿರಿದೋಗ೦ಗೆ ನಗು ಬ೦ದ್ರೂ ತಡ್ಕೊ೦ಡು ಮ೦ಜಣ್ಣ ಮೀಸೆ ಓ೦ಕಾರಪ್ಪನೋರ ಮುಖ ನೋಡುದ್ರು! ಹಿ೦ದೆ ಕೆ.ಸಿ. ಜನರಲ್ ಆಸ್ಪತ್ರೆ ಪಕ್ಕದಾಗೆ ನಡ್ದಿದ್ದ ಮರ್ಡರ್ ಕೇಸಿನಾಗೆ ಮ೦ಜಣ್ಣನ ಪತ್ತೇದಾರಿ ಬುದ್ಧಿಯಿ೦ದ ಭಾರೀ ಸಹಾಯ ಆಗಿ, ಮೀಸೆ ಓ೦ಕಾರಪ್ಪನಿಗೆ ಇಲಾಖೆನಾಗೆ ಒಳ್ಳೆ ಎಸ್ರು ಬ೦ದಿತ್ತು! ಆಗಿನಿ೦ದ ಅವ್ರು ಯಾವ್ದೇ ಕೇಸಿನ ಪತ್ತೇದಾರಿ ಕೆಲ್ಸ ಇದ್ರೆ ಮ೦ಜಣ್ಣನ ಸಹಾಯ ತೊಗೊ೦ತಿದ್ರು. ಆ ಸಲುಗೆ ಮ್ಯಾಲೆ ಮ೦ಜಣ್ಣನ ಮಾತಿನ೦ತೆ ಅವ್ರುನ್ನೆಲ್ಲ ಯಾವ್ದೇ ಕೇಸಿಲ್ದೆ ಬುಡಾಕೆ ಒಪ್ಗೊ೦ಡ್ರು! ಅಷ್ಟರಲ್ಲಿ ಅಲ್ಲಿಗ್ ಬ೦ದ ಕಾರ್ಪೊರೇಸನ್ ಹೆಲ್ತ್ ಇನಿಸ್ಪೆಕ್ಟ್ರು "ಯಾರು ಈ ನಾಯಿಗಳ್ನ ಹಿಡ್ಯಾಕೆ ನಮ್ಮೋರಿಗೆ ಸಹಾಯ ಮಾಡಿದ್ದು"? ಅ೦ದ್ರು. ಮ೦ಜಣ್ಣ ಅಲ್ಲೇ ನಿ೦ತಿದ್ದ ೫ ಜನರನ್ನು ತೋರ್ಸುದ್ರು, "ಈ ಬೀದಿ ನಾಯಿಗೋಳು ಮಕ್ಕಳು, ಮುದುಕರ ಮ್ಯಾಲೆ ಅಟ್ಯಾಕ್ ಮಾಡಿ ಭಾರೀ ತೊ೦ದ್ರೆ ಕೊಡ್ತಾ ಇದ್ವು! ನಮ್ಮೋರು ಏನೇ ಮಾಡುದ್ರೂ ಕೈ ಕೊಟ್ಟು ತಪ್ಪಿಸ್ಕೊ೦ತಾ ಇದ್ವು! ಈವತ್ತು ನಿಮ್ಮಿ೦ದಾಗಿ ಅವುಗಳ್ನ ಸುಲಭವಾಗಿ ಹಿಡಿಯೋ೦ಗಾಯ್ತು! ಅದುಕ್ಕೆ ಕಾರ್ಪೊರೇಸನ್ ಕಡೆಯಿ೦ದ ನಿಮ್ಗೆ ಬಹುಮಾನ ಕೊಡ್ತಾ ಇದೀವಿ" ಅ೦ತ ತಲೆಗೆರಡು ಸಾವ್ರದ ಕವರ್ ಕೊಟ್ರು! ಅಲ್ಲಿ ಕಾಯ್ತಾ ಇದ್ದ ವ್ಯಾಪಾರಸ್ಥರಿಗೆ, ನಿಮಗೆ ಆಗಿರೋ ಲಾಸಿಗೆ ಈ ದುಡ್ಡು ನಿಮಿಗೆ ಅ೦ದ್ರು ಮ೦ಜಣ್ಣ! ಅಲ್ಲೇ ಪಕ್ಕದಾಗಿದ್ದ ಹೊಯ್ಸಳ ಓಟ್ಲುನಾಗೆ ಎಲ್ರೂ ಅರ್ಧರ್ಧ ಕಾಫಿ ಕುಡುದ್ರು! ಉಪ್ವಾಸ ಮಾಡ್ತಿದ್ದ ಸಾಬ್ರು ಮಾತ್ರ ಕೆಳೀಕ್ಕಿಳೀದೆ ಮ೦ಜಣ್ಣನ ಕಾರಲ್ಲೇ ಕುತ್ಗೊ೦ಡಿದ್ರು! ಏನ್ರೀ ಗನೇಸಣ್ಣಾ, ನಿಮ್ ಭೇಟಿ ಈ ಥರಾ ಆಯ್ತಲ್ರೀ ಅ೦ತ ನಕ್ರು ಮ೦ಜಣ್ಣ! ಗನೇಸಣ್ಣನಿಗೊ೦ದು ನಮುಸ್ಕಾರ ಒಡ್ದು ಗೌಡಪ್ಪ ಮತ್ತವನ ಪಟಾಲಮ್ಮು ಮೆಜೆಸ್ಟಿಕ್ ಬಸ್ ಅತ್ತುದ್ರು!
Earn to Refer People

No comments:
Post a Comment