ಮೋಡ ಮುಚ್ಚಿದ ಆಗಸ ಉತ್ಸವದ ಸಮಯಕ್ಕೆ ಎಲ್ಲಿ ಮಳೆ ಬರುವುದೋ ಎ೦ದು ಭಯ ಹುಟ್ಟಿಸಿತ್ತು |
ಊರು ತು೦ಬಾ ಹಬ್ಬದ ಗದ್ದಲವಿದ್ದರೂ ತನಗೇನೂ ಸ೦ಬ೦ಧವಿಲ್ಲವೆ೦ಬ೦ತೆ ತನ್ನಷ್ಟಕ್ಕೆ ತಾನು ರಸ್ತೆಯ ಮೇಲೆ ಹರಿದಾಡುತ್ತಿದ್ದ ಶ೦ಖದ ಹುಳು! |
ಉತ್ಸವಕ್ಕೆ ಸಿದ್ಧಳಾಗಿ ಬ೦ದ ಹೊ೦ಗೆ ಲಕ್ಷ್ಮಿ, |
ಉತ್ಸವಕ್ಕೆ ಸಿದ್ಧರಾಗಿ ಬ೦ದ ಗದ್ದೆ ಕೆ೦ಪಮ್ಮ ಮತ್ತು ಬಿದರಕೆರೆ ಅಮ್ಮ೦ದಿರು, |
ಶ್ರದ್ಧಾಳುಗಳ ಹೆಗಲ ಮೇಲೆ ಉತ್ಸವ ಹೊರಟ ಅಮ್ಮ೦ದಿರು. |
ತೋಟದಲ್ಲಿ ಸಿದ್ಧಪಡಿಸಿದ್ದ ಹಸಿಗರಿಯ ಚಪ್ಪರದಡಿಯಲ್ಲಿ ಆಸೀನರಾಗಿ "ಮಹಾ ಪೂಜೆ" ಸ್ವೀಕರಿಸಿದ ದೇವತೆಯರು. |
ಆಗಮಿಸಿದ ಅತಿಥಿಗಳ ಹಸಿವು ತಣಿಸಲು ಸಿದ್ಧವಾಗುತ್ತಿರುವ ರಾಗಿಮುದ್ದೆಗಳ ರಾಶಿ! |
ರಾಗಿ ಮುದ್ದೆ ಕಟ್ಟುವುದರಲ್ಲಿ ನಾವೇನು ಕಡಿಮೆ ಎ೦ದು ಹೆ೦ಗಸರು-ಗ೦ಡಸರ ನಡುವೆ ಪೈಪೋಟಿಯೇ? |
ಇತ್ತ ರಾಗಿ ಮುದ್ದೆ ಸಿದ್ಧವಾದರೆ ಅತ್ತ ಘಮಘಮಿಸುವ ಮಾ೦ಸದಡಿಗೆ ಸಿದ್ಧವಾಗುತ್ತಿದೆ. |
ಕೊನೆಗೂ ಸಿದ್ಧವಾದ ಭರ್ಜರಿ ಬಾಡೂಟ! |
ಮಳೆಯ ಭಯದಲ್ಲೇ ಬಾಡೂಟ ಮಾಡಿಸಿದ ನಿರ್ದಯಿ ಮೋಡಗಳು! |
Earn to Refer People
2 comments:
super sir baynalli neere banthu
Thanks Sanju,
Post a Comment