Monday, July 25, 2016

ತಿಮ್ಮಿಯ ಕವನಗಳು,,,,,,,,,,,, :-)

ಎಂಥಾ ಬ್ಯಾಸ್ಗೆ ಇದ್ರೆ ಏನು
ತಿಮ್ಮಿ ಜೊತ್ಯಾಗಿದ್ರೆ ನೀನು!
ಉರಿ ಬಿಸಿಲು ಹಾಲು ಜೇನು
ಈ ಬಿಸಿಗಾಳಿ ಕಂಡ್ಯಾ ನೀನು
ಸುಡೋ ಸೂರ್ಯ ತಣ್ಣಗಾದಾನು
ಜೊತ್ಯಾಗಿದ್ರೆ ಸಾಕೇ ನೀನು!!
ಆಹಾ ತಿಮ್ಮಿ ಜೊತ್ಯಾಗಿದ್ರೆ ನೀನು
ಆಹಾ ಎಂಥಾ ಬ್ಯಾಸ್ಗೆ ಇದ್ರೆ ಏನು!
*****************************
*****************************
 
ಖಾಲಿ ಕೊಡ ಇಟಗೊಂಡು
ಕಾಲಾಗ್ ಗೆಜ್ಜೆ ಚಿಮ್ಕೊಂಡು
ಹಾದಿ ಬೀದಿ ದಾಟ್ಕೊಂಡು
ಒಸಿ ಹಂಗೆ ನಕ್ಕೊಂಡೂ
ಬರ್ತಾ ಇದ್ರೆ ತಿಮ್ಮಿ!
ಬರ್ತಾ ಇದ್ರೆ ತಿಮ್ಮಿ!!
ಹೆಂಡ ಕೈಯಾಗ ಇಟಗೊಂಡು
ಉಪ್ಪುಂಕಾಯೀ ನಂಜ್ಕೊಂಡೂ
ಕಣ್ಣಾಗ ಕನಸ ತುಂಬ್ಕೊಂಡು
ಪರಪ0ಚಾನೇ ಮರ್ತ್ಕೊಂಡೂ
ಹಂಗೇ ಕುಂತಾ ತಿಮ್ಮ!
ಹಂಗೇ ಕುಂತಾ ತಿಮ್ಮ!! 
**********************************
**********************************

ಮಲ್ಗೆ ಹುವ್ವ ಮುಡ್ಕೊ0ಡು
ಮೂತಿ ಅತ್ಲಾಗ ತಿರುವ್ಕೊ0ಡು
ಮುಸಿ ಮುಸಿ ನಗು ನಕ್ಕೊಂಡೂ
ಮನಸ್ನಾಗ ಆಸೆ ತುಂಬಕೊಂಡು
ನೀ ಇಂಗೆ ಕುಂತ್ರೇ ಹೆಂಗೆ ತಿಮ್ಮಿ
ನೀ ಇಂಗೆ ಕುಂತ್ರೇ ಹೆಂಗೆ ತಿಮ್ಮಿ!!
ದಿನವೂ ನಾನು ದುಡ್ಕೊಂಡು
ಹುಳಿ ಹೆಂಡವಾ ಕುಡಕೊಂಡು
ಮಲ್ಲೇ ಹೂವ್ವಾ ಹಿಡಕೊಂಡು
ಒಂದೆ ಉಸ್ರಾಗ ಓಡಕೊಂಡು
ನಾ ಬಂದ್ರೆ ಮನೆಗೆ ತಿಮ್ಮಿ,
ನಾ ಬಂದ್ರೆ ಮನೆಗೆ ತಿಮ್ಮಿ!
ರಾಗಿ ಮುದ್ದೆ ಉಪ್ಪೆಸರು
ಹುರುಳಿ ಹಪ್ಪಳ ಸಾಕ್ಕಣಮ್ಮಿ
ಉಪ್ಪುಂಕಾಯೀ ಜೊತ್ಗೆ ನೀನು
ನಗ್ತಾ ಇದ್ರೆ ಅಲ್ಲೇ ಸ್ವರ್ಗ ತಿಮ್ಮಿ!
ಬ್ಯಾರೆ ಏನೂ ಬ್ಯಾಡಾ ತಿಮ್ಮಿ
ಬ್ಯಾರೆ ಏನೂ ಬ್ಯಾಡಾ ತಿಮ್ಮಿ!
ನಗ್ತಾ ಜೊತ್ಯಾಗ ಇದ್ರೆ ನೀನು
ನಗ್ತಾ ಜೊತ್ಯಾಗ ಇದ್ರೆ ನೀನು!!! 
****************************
*****************************
 
ಆ ಚಿನ್ನಯಾಕೆ ನಿಂಗೆ ತಿಮ್ಮಿ
ನಿನ್ ನಗುವೇ ಸಾಕೇ ತಿಮ್ಮಿ!
ಆ ಮುತ್ತು ರತ್ನ ಯಾಕೇ ನಿಂಗೆ
ನೀನೇ ಒಳ್ಳೆ ಕಡಲ ಮುತ್ತು ತಿಮ್ಮಿ!
ನಿನ್ ಕೆನ್ನೆ ತುಟಿ ಕಣ್ಣು ಮೂಗು
ಎಲ್ಲಾ ಮುತ್ತು ರತ್ನ ಹವಳ ತಿಮ್ಮಿ!
ನೀ ನಗ್ತಾ ನಗ್ತಾ ಇದ್ರೆ ಸಾಕು ತಿಮ್ಮಿ
ಅಲ್ಲಿ ಮುತ್ತಿನ ಮಳೆ ಸುರಿದಂಗೆ!
ನೀ ಪ್ರೀತಿ ಮಾತ್ನ ಆಡ್ತಿದ್ರೆ ಸಾಕು
ಅಲ್ಲಿ ಬಂಗಾರದಂಗಡಿ ತೆಗೆದಂಗೆ!
ಸುಡೋ ಬಿಸಲು ಬಿಸಿ ಬಿಸಿ ಗಾಳಿ
ನಿನ್ ನಗುವಾ ನೋಡಿ ತಣ್ಣಗಾಯ್ತಲ್ಲೇ!
ತಿಮ್ಮ೦ಗಿದು ಲೆಕ್ಕಕ್ಕಿಲ್ಲ ನೋಡೇ ತಿಮ್ಮಿ
ನಿನ್ ಪ್ರೀತಿ ಇದ್ರೆ ಇನ್ನೇನೆ ಕಮ್ಮಿ! 
**************************************
***************************************

ತಿಮ್ಮಿ ನಿಂಗೆ ವಿಶೇಷ ಏನಂತ ಗೊತ್ತಾ ಇವತ್ತು
ತುಂಬೇ ಹೋಯ್ತು ನೋಡೇ ನಿನ್ನ ತಿಮ್ಮ೦ಗೈವತ್ತು!
ಕಷ್ಟ ನಷ್ಟ ಸುಖ ದುಃಖ ಎಲ್ಲಾ ಜೊತ್ಯಾಗಿತ್ತು
ಆದ್ರೆ ನಿನ್ನ ಸಂಗ ತಿಮ್ಮ೦ಗೆಲ್ಲಾ ಮರ್ಸಾಕಿತ್ತು!
ಬಾಳ ಹಾದ್ಯಾಗ್ ಸುಂಟರಗಾಳಿ ಬೀಸ್ತಾನೇ ಇತ್ತು
ಏನೇ ಬಂದ್ರು ಎದ್ರಿಸೋ ಕೆಚ್ಚು ತಿಮ್ಮನೆದ್ಯಾಗಿತ್ತು!
ಕೂಡಿ ಬಾಳೋ ಕನಸು ತಿಮ್ಮನ್ ಮನಸಾಗಿದ್ದೆ ಇತ್ತು
ಆದ್ರೆ ಆ ಮಾದೇವನ್ ಲೆಕ್ಕಾಚಾರ ಬ್ಯಾರೇನೇ ಇತ್ತು!
ಮಾಡೋದೇನು ನಮ್ ಕೈಯ್ಯಾಗಿಲ್ಲಾ ಏನೂ ಇವತ್ತು
ಎಲ್ಲಾ ಅವ್ನು ಆಡ್ಸಿದಂಗೆ ಆಟ ನೋಡು ಯಾವತ್ತೂ!
ನೀನೊಂದ್ಕಡೆ ನಾನೊಂದ್ಕಡೆ ಬಾಳು ಹೋಳಾಗೋಯ್ತು
ಒಂದಿಲ್ಲೊಂದಿನ ಒಂದಾಗ್ತೀವಿ ಅಂತೈತೆ ತಿಮ್ಮನ್ ಮನ್ಸು!
ತಿಮ್ಮಿ ನಿಂಗೆ ವಿಶೇಷ ಏನಂತ ಗೊತ್ತಾ ಇವತ್ತು
ತುಂಬೇ ಹೋಯ್ತು ನೋಡೇ ನಿನ್ನ ತಿಮ್ಮ೦ಗೈವತ್ತು!
***************************************
****************************************
 

ಮಾರ್ಕಜ್ಞ ಚೌಪದಿ‬ :-)

ಸ್ಮಾರ್ಟ್ ಫೋನು ಕೈಲಿರಲು
ಡಾಟಾ ಪ್ಯಾಕು ಜೊತೆಗಿರಲು
ಅತ್ತ ಹುಡುಗಿ ಚಾಟಿಸುತ್ತಿರಲು
೪ಜಿ ಸ್ಪೀಡ್ ಹೋಗಿ ೨ಜಿ ಆಯ್ತಲ್ಲೋ ಮಾರ್ಕಜ್ಞ!

ದಿನವೂ ಬೆಳಗಾಗ ಕಣ್ಬಿಡಲು
ಹಲ್ಲುಜ್ಜದೆ ಮೊಗ ತೊಳೆಯದೆ
ದೇವರ ಪಟದತ್ತ ತಿರುಗಿಯೂ ನೋಡದೆ
ಸ್ಮಾರ್ಟ್ ಫೋನ್ ನೋಡಂಗಾಯ್ತಲ್ಲೋ ಮಾರ್ಕಜ್ಞ !
ಮುಖಪುಟದಿ ದೊರಕಿದಾ ಮುತ್ತಿನಂಥಾ ಗೆಳೆಯರು
ಅದು ಬರಿ ಇದು ಬರಿ ಎಂದು ಬರೆಸುತಲಿರಲು
ಮಸ್ತಕವ ಕೆರೆಯುತ ಕೀ ಬೋರ್ಡ ಕುಟ್ಟುತ್ತಲೇ
ಈ ನರಜನ್ಮ ಪರಮ ವಾವನವನೆಂದ ಮಾರ್ಕಜ್ಞ !