ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Tuesday, February 2, 2016
ತಿಮ್ಮಿ ನೀನು ತಪ್ಪುಸ್ಕೊಂಡ್ರೆ ...................
ತಿಮ್ಮಿ ನೀನು ತಪ್ಪುಸ್ಕೊಂಡ್ರೆ
ತಿಮ್ಮಿ ನೀನು ಮುನುಸ್ಕೊಂಡ್ರೆ
ತಿಮ್ಮಿ ನೀನು ಕಾಣ್ದಂಗಾದ್ರೆ
ತಿಮ್ಮಿ ನೀನು ಮಾತಾಡ್ದಿದ್ರೆ
ಹೇಳೇ ಹೆಂಗಿರ್ತೈತೀ ಜೀವಾ!
ಹೇಳೇ ಹೆಂಗಿರ್ತೈತೀ ಜೀವಾ!
ಕೋಪುಸ್ಕೊಂಡ್ರೂ ಮುನುಸ್ಕೊಂಡ್ರೂ
ತಪ್ಪುಸ್ಕೊಳ್ದೆ ನಿನ್ ಮಾತು ಬಿಡ್ದೆ
ಜೊತ್ಯಾಗಿರೆ ಹತ್ರಾ ಇರೆ ತಿಮ್ಮಿ
ನಗ್ತಾ ನಗ್ತಾ ಗಿಲ್ಗಿಲಿ ಅಂತಾ ಇರೆ ತಿಮ್ಮಿ
ನಿನ್ನಾ ಮೊಗ್ದಾಗ್ ನಗಾ ನನ್ನ ಪ್ರಾಣಾ!
ನಿನ್ನಾ ಮೊಗ್ದಾಗ್ ನಗಾ ನನ್ನ ಪ್ರಾಣಾ!
ಬರೋ ಕಷ್ಟಾ ಎಲ್ಲಾ ಬರ್ಲಿ
ದುಡ್ಡು ಒಡ್ವೆ ವಸ್ತ್ರ ಮನೆ ಮಠ
ಎಲ್ಲಾ ಹೋಗ್ಲಿ ಬುಡೆ ತಿಮ್ಮಿ
ನೀನೊಟ್ಗಿದ್ರೆ ಸಾಕು ನಂಗೆ
ಭೂಮಿ ಸ್ವರ್ಗಾ ನೋಡೂ !
ಭೂಮಿ ಸ್ವರ್ಗಾ ನೋಡೂ !
ಭೂಮಿ ಸ್ವರ್ಗಾ ನೋಡೂ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment