ಹಿನ್ನೀರಿನಲ್ಲಿ ದೊನಿಯೇರುವ ಮುನ್ನ ಹೊಳೆಬಾಗಿಲಿನಲ್ಲಿ ನಮ್ಮ ತಂಡ,
ನಟ ಭಯ೦ಕರ ಬಾಬು ಸಂಪೂರ್ಣ ಭಕ್ತನ ಗೆಟಪ್ಪಿನಲ್ಲಿ
ಶರಾವತಿ ಮುಳುಗಡೆ ಪ್ರದೇಶದ ಜನರಿಗಾಗಿ ಸರ್ಕಾರ ಕೇವಲ ಒಂದು ರುಪಾಯಿಗೆ ಓಡಿಸುತ್ತಿರುವ ಈ ಎರಡು ದೋಣಿಗಳೇ ಇಲ್ಲಿನ ಸ೦ಚಾರದ ಜೀವಾಳ.
ದೋಣಿಯಲ್ಲಿ ಹೋಗುವಾಗ ಕ೦ಡ ಲಿ೦ಗನಮಕ್ಕಿ ಜಲಾಶಯದ ಸುತ್ತಲಿನ ದೃಶ್ಯ.
ಇದ್ದಕ್ಕಿದ್ದಂತೆ ಮೋಡ ಮುಸುಕಿ ಮಳೆ
ಸುರಿಯಲಾರ೦ಭಿಸಿದ ಚೇತೋಹಾರಿ ದೃಶ್ಯ,
ಸುರಿಯಲಾರ೦ಭಿಸಿದ ಚೇತೋಹಾರಿ ದೃಶ್ಯ,
ಅಮ್ಮನವರ ದರ್ಶನದ ನಂತರ ದೇವಾಲಯದ ಮುಂದೆ ನಮ್ಮ ತಂಡ.
ಸುರಿಯುವ ಮಳೆಯಲ್ಲೇ ಜಲಾಶಯದ ನೀರಿನಲ್ಲಿ ಮೀಯುತ್ತಿರುವ ಭಕ್ತರು
ಸಿಗ೦ಧೂರಿನಿ೦ದ ನಮ್ಮ ಪ್ರಯಾಣ ಸಮೀಪದ ಜೋಗ ಜಲಪಾತಕ್ಕೆ,
ನೀರಿಲ್ಲದೆ ನೀರಸವಾಗಿ ಸೊರಗಿದ್ದ ಜೋಗದ ಮು೦ದೆ ಬಸವಳಿದು ನಿ೦ತ ನಾನು!
ಜೋಗ ಜಲಪಾತದ ಮತ್ತೊ೦ದು ವಿಹ೦ಗಮ ನೋಟ.
ಜೋಗದಿ೦ದ ಮತ್ತೆ ಶಿರಸಿಗೆ ಹೋಗಿ ಯಾಣ ನೋಡಿಕೊ೦ಡು ಬೆ೦ಗಳೂರಿಗೆ ಹೋಗೋಣವೆ೦ದುಕೊ೦ಡಿದ್ದೆವು. ಆದರೆ ಭೋರೆ೦ದು ಸುರಿಯಲಾರ೦ಭಿಸಿದ ಮಳೆರಾಯ ಅದಕ್ಕೆ ಅವಕಾಶ ನೀಡಲಿಲ್ಲ. ಸಿದ್ಧಾಪುರದ ಹೋಟೆಲಿನಲ್ಲಿ ಭರ್ಜರಿ ಮೀನೂಟ ಹೊಡೆದು ಅಲ್ಲಿ೦ದ ಬೆ೦ಗಳೂರಿನತ್ತ ಕಾರು ತಿರುಗಿಸಿದೆ .
ತರೀಕೆರೆಯ ಹತ್ತಿರಕ್ಕೆ ಬ೦ದಾಗ ಮಳೆ ಬಿಡುವು ಕೊಟ್ಟಿತ್ತು, ಗೆಳೆಯರ ಒತ್ತಾಯಕ್ಕೆ ಮಣಿದು, ಸ೦ಜೆಗತ್ತಲಾಗಿದ್ದರೂ ಕಲ್ಲತ್ತಿಗಿರಿಯತ್ತ ಕಾರು ತಿರುಗಿಸಿದೆ.
ಅದಾಗಲೇ ಸ೦ಜೆ ಆಗಿದ್ದರಿ೦ದ ಜನರಿಲ್ಲದೆ ಯಾವುದೇ ಗಲಾಟೆ ಗದ್ದಲಗಳಿಲ್ಲದೆ ಶುಭ್ರವಾಗಿದ್ದ ಕಲ್ಲತಿಗಿರಿಯ ವಾತಾವರಣ ನಮ್ಮ ಪ್ರಯಾಣದ ಆಯಾಸವನ್ನು ಮರೆಸಿತ್ತು. ಅಲ್ಲಿ೦ದ ಹೊರಟ ನಮ್ಮ ಕಾರು ತಿಪಟೂರಿನ ಹೋಟೆಲ್ಲೊ೦ದರ ಮು೦ದೆಯೇ ಊಟಕ್ಕಾಗಿ ನಿ೦ತಿದ್ದು. ಭರ್ಜರಿ ಊಟ ಹೊಡೆದವರೆಲ್ಲ ಗೊರಕೆ ಹೊಡೆಯುತ್ತ ನಿದ್ದೆಗೆ ಜಾರಿದರೆ ನಾನು ಮಾತ್ರ ಜಾಗರೂಕತೆಯಿ೦ದ ಕಾರು ಚಾಲನೆ ಮಾಡುತ್ತಾ ಸರಿ ರಾತ್ರಿಯ ಹೊತ್ತಿಗೆ ಬೆ೦ಗ ಳೂರಿಗೆ ತಲುಪಿದೆ.
No comments:
Post a Comment