ಎದೆಯ ಕುಲುಮೆಯೊಳು ತಕತಕನೆ ಕುದಿಯುತಿವೆ ಭಾವಗಳು
ಕಣ್ಣ ಮು೦ದಿವೆ ಹಲವು ಅಸಹಾಯಕ ತೊದಲು ನುಡಿಗಳು
ಎಲ್ಲವನೂ ಗಳಿಸಿದ ಎಲ್ಲವನೂ ಗೆಲಿಸಿದ ಮನದ ಗೀತಗಳು,
ಗೆದ್ದಿದ್ದೇನಿಲ್ಲ ಸೋತದ್ದೇ ಎಲ್ಲವೆನ್ನುತಿರುವ ಲೌಕಿಕ ಜನಗಳು
ಇವೆಲ್ಲದರ ನಡುವೆಯೂ ಮತ್ತೆ ಮತ್ತೆ ಬರುತಿವೆ, ಈ ದಿನಗಳು
ಬರುತಲೇ ಇವೆ ಅರ್ಥವೇ ಇಲ್ಲದ ಈ ಜನುಮ ದಿನಗಳು....!!
Earn to Refer People
No comments:
Post a Comment