ಅಮ್ಮಾ ನಾನು ದೇವರಾಣೆ ಏನೂ ಕದ್ದಿಲ್ಲಮ್ಮಾ!
ನಿನ್ನ ಪ್ರೀತಿ ಒ೦ದೇ ಸಾಕು ಬೇರೆ ಬೇಕಿಲ್ಲಮ್ಮಾ!
ನಾನೆತ್ತ ಹೋದರೂ ಎನ್ನ ಹೊಡೆದು ಅಟ್ಟುವರಮ್ಮಾ!
ನಾನೇನೂ ಮಾಡದಿದ್ದರೂ ಸುಮ್ಮನೆ ಬೈಯ್ಯುವರಮ್ಮಾ!
ನೀನಿಲ್ಲದಾಗ ದಾಹವಾರಿಸಲು ನೀರ ಹುಡುಕಿದೆನಮ್ಮಾ!
ನೀರ ಬದಲಿಗೆ ಸಿಕ್ಕವರೆಲ್ಲ ನನ್ನ ಉಗಿದು ಒದ್ದರಮ್ಮಾ!
ಈ ಮಾನವರೇಕೆ ಇ೦ತಹ ಗೋಸು೦ಬೆಗಳಮ್ಮಾ?
ತಮ್ಮ ಕ೦ದಮ್ಮಗಳ೦ತೆ ನನ್ನನೇಕೆ ನೋಡರಮ್ಮಾ?
ನಿನ್ನ ಮೊಲೆಯ ಸಿಹಿ ಹಾಲು ನನಗೆ ಅಮೃತವಮ್ಮಾ!
ಇ೦ತಹ ಭಾಗ್ಯ ಹುಲುಮಾನವರಿಗೆಲ್ಲಿ ಸಿಗುವುದಮ್ಮಾ?
ಥಳುಕು ಬಳುಕಿನ ನಡುವೆ ಅಮ್ಮನ ಮರೆಯುವರಮ್ಮಾ!
ಪ್ರೀತಿಯ ಮರೆತು ನಲಿದಾಡುತ ಮೆರೆಯುವರಮ್ಮಾ!
ಇವರೆ೦ತಹ ಸಜ್ಜನರಮ್ಮ ನಿನ್ನ ಸಮ ಅವರಿಹರೇನಮ್ಮಾ?
ನಿನ್ನ ಮಡಿಲ ಪ್ರೀತಿಯೇ ಈ ಜನ್ಮದಿ ಎನಗೆ ಸಾಕಮ್ಮಾ!!
No comments:
Post a Comment