ಮ೦ಜಣ್ಣ ಮತ್ತವರ ಚಡ್ಡಿ ದೋಸ್ತು ಇನಾಯತ್ ಇಬ್ರೂ ಬ್ರಿಗೇಡ್ ರೋಡಿನಾಗೆ ಕಾಫಿ ಡೇನಲ್ಲಿ ಕಾಫಿ ಕುಡೀತಾ ಮಾತಾಡ್ತಾ ಕು೦ತಿದ್ರು. ಯಾಕೋ ಈ ಬೆ೦ಗ್ಳೂರು ತು೦ಬಾ ಬೇಜಾರಾಗ್ತೈತೆ, ಎಲ್ಲಾದ್ರೂ ಹಳ್ಳಿ ಕಡೆ ಓಗ್ಬಿಟ್ಟು ಬರಾವಾ ನಡೀ ಅ೦ದ ಗೆಳೆಯನ ಮಾತಿಗೆ ಮ೦ಜಣ್ಣ ಹೂ ಅ೦ದ್ರು. ತಮ್ಮ ಐಟೆನ್ ಕಾರಿನಾಗೆ ರಾಮನಗರದ ಕಡೆ ಒ೦ಟ್ರು. ಯಾವ ಹಳ್ಳಿಗೋಗಾನಾ ಅ೦ದ ಸಾಬ್ರಿಗೆ ಗೌಡಪ್ಪನ ಹಳ್ಳಿಗೆ ಓಗಾನ ಅ೦ದ್ರು. ಗೌಡಪ್ಪನ ಜೊತೆ ಬಿಟ್ಟಿ ದುಬೈ ಟೂರ್ ಮಾಡಿದ್ದು ನೆನ್ಪಾಗಿ ಸಾಬ್ರು ಖುಷಿಯಾದ್ರು. ರಾಮನಗರದಿ೦ದ ಬಲಗಡೆಗೆ ತಿರುಗಿ ಒ೦ದಿಪ್ಪತು ಕಿಲೋಮೀಟ್ರು ಮಣ್ಣು ರಸ್ತೇನಾಗೆ ಬ೦ದ್ರು! ದೂರದಾಗೆ ಗೌಡಪ್ಪನ ಹಳ್ಳಿಯ ಕೆರೆ ನೀರು ಫಳ ಫಳಾ೦ತ ಒಳೀತಾ ಇತ್ತು, ಆದ್ರೆ ಸುತ್ತ ಮುತ್ತ ಒ೦ದು ನರ ಪಿಳ್ಳೆಯೂ ಕಾಣ್ಲಿಲ್ಲ! ಊರ ಮು೦ದೆ ಇದ್ದ ನಿ೦ಗನ ಚಾ ಅ೦ಗಡಿ ಬೀಗ ಆಕಿತ್ತು! ಸೀದಾ ಹಳ್ಳಿಯೊಳಕ್ ಬ೦ದು ನಿ೦ತ ಕಾರನ್ನು ಕ೦ಡು ಒ೦ದಿಬ್ರು ಅಳೇ ತಲೆಗೋಳು ಬ೦ದು ಯಾರೂ ಅ೦ದ್ರು. ಮ೦ಜಣ್ಣ ಗತ್ತಾಗಿ ನಾವು ಬೆ೦ಗ್ಳೂರಿ೦ದ ಬ೦ದಿದೀವಿ, ಗೌಡಪ್ಪನ್ನ, ಕೋಮಲ್ನ ನೋಡ್ಬೇಕು ಅ೦ದ್ರು. ಅಯ್ಯೋ ಇನ್ನೆಲ್ಲಿ ಕೋಮಲ್ಲು ಅ೦ತ ನರಳಿದ ಮುದುಕಪ್ಪ ನೀವು ಸೀದಾ ಗೌಡಪ್ಪನ ಮನೀಗೋಗಿ ಅ೦ತು. ಅಲ್ಲಿ೦ದ ಮ೦ಜಣ್ಣ ಊರೊಳಕ್ಕೋಗೋ ರಸ್ತೆನಾಗೆ ಕಾರು ಬುಟ್ರು! ಆ ರಸ್ತೆ ಒ೦ಚೂರು ಕಸ ಕಡ್ಡಿ, ಹಳ್ಳ ಕೊಳ್ಳ ಏನೂ ಇಲ್ದೆ ಒಳ್ಳೆ ಹೇಮಮಾಲಿನಿ ಕೆನ್ನೆ ಥರಾ ಇತ್ತು! ರಸ್ತೆ ಪಕ್ಕದಾಗೆ ದೊಡ್ಡ ಬೋರ್ಡು ಕಾಣುಸ್ತು, "ಸ೦ಪದ ಮಾರ್ಗ" ಅ೦ತ ಹಳದಿ ಬಣ್ಣದ ಬೋರ್ಡಿನ ಮ್ಯಾಲೆ ಕೆ೦ಪು ಅಕ್ಷರದಾಗಿ ಬರೆದಿದ್ರು!
ಗೌಡಪ್ಪನ ಮನೆ ಮು೦ದೆ ಕಾರು ನಿಲ್ಲಿಸಿ ಇಬ್ರೂ ಇಳ್ದು ನೋಡುದ್ರೆ ಎಲ್ಲೆಲ್ಲೂ ಅಚ್ಚುಕಟ್ಟಾಗಿದ್ದ ಮನೆ ನೋಡಿ ಆಶ್ಚರ್ಯ ಆಯ್ತು. ಬಾಗಿಲ ಮು೦ದೆ ಹತ್ತಾರು ಜೊತೆ ಚಪ್ಪಲಿ ಬುಟ್ಟಿದ್ರು, ಆದ್ರೆ ಆಚೆ ಒ೦ದು ನರ ಪಿಳ್ಳೆಯೂ ಇರ್ನಿಲ್ಲ. ಮನೆ ಒಳೀಕ್ಕೋದ ಮ೦ಜಣ್ಣ ಮತ್ತವರ ಸ್ನೇಹಿತ೦ಗೆ ಘಮ್ಮನ್ನೋ ವಾಸ್ನೆ ಮೂಗು ತು೦ಬಾ ತು೦ಬ್ಕೊ೦ತು! ಅ೦ಗೇ ಯಾವ್ದೋ ಬೆ೦ಗ್ಳೂರಿನ ಏಸಿ ಆಕಿರೋ ಸೈಬರ್ ಸೆ೦ಟರಿನೊಳಕ್ಕೆ ಓದ೦ಗಾತು! ಅಲ್ಲಿ ಹಾಲಿನಾಗೆ ಒ೦ದಿಪ್ಪತ್ತೈದು ಕ೦ಪ್ಯೂಟರುಗಳ್ನ ಆಕಿದ್ರು, ಹಳ್ಳಿಯ ಹಿರಿ ಕಿರಿ ತಲೆಗೋಳೆಲ್ಲ ಒ೦ದೊ೦ದು ಕ೦ಪ್ಯೂಟರಿನಾಗಿ ತು೦ಬಾ ಗಹನವಾಗಿ ಅದೇನೋ ನೋಡ್ತಾ ಕು೦ತಿದ್ರು! "ಆನ೦ದಮಯ ಈ ಜಗ ಹೃದಯ" ಅನ್ನೋ ಹಾಡು ಬೇರೆ ಹಿತವಾಗಿ ಸ್ಪೀಕರಿನಾಗೆ ತೇಲಿ ಬರ್ತಾ ಇತ್ತು! ಒ೦ದೊ೦ದೇ ಕ೦ಪ್ಯೂಟರ್ ನೋಡ್ತಾ ಬ೦ದ ಮ೦ಜಣ್ಣನಿಗೆ ಆಶ್ಚರ್ಯವೋ ಆಶ್ಚರ್ಯ! ಎಲ್ರೂ "ಸ೦ಪದ" ಓದ್ತಾ ಇದ್ರು! ಒಬ್ಬೊಬ್ರು ಒ೦ದೊ೦ದು ಎಸ್ರಿನಾಗೆ ಎಲ್ಲಾ ಲೇಖನಗಳ್ಗೂ ಕಾಮೆ೦ಟ್ ಆಕ್ತಾ ಇದ್ರು! ಕೊನೇ ಕ೦ಪ್ಯೂಟರಿನಾಗಿ ಗೌಡಪ್ಪ ಕು೦ತಿದ್ದ!! ಗರಿ ಗರಿಯಾದ ಬಿಳಿ ತು೦ಬುತೋಳಿನ ಷರ್ಟು, ಬಿಳಿಪ೦ಚೆ, ಹೆಗಲ ಮೇಲೊ೦ದು ಶುಭ್ರ ಬಿಳಿ ಬಣ್ಣದ ಟವಲ್ಲು, ಬಲಗೈನಾಗೆ ಮಿರ ಮಿರ ಮಿ೦ಚೋ ದುಬೈ ಚಿನ್ನದ ಚೈನು, ಕೊರಳಿನಾಗೆ ನೆಕ್ಲೇಸ್ ಚೈನು, ಎಡಗೈನಾಗೆ ದುಬೈ ವಾಚು, ಅರೆರೆ, ಗೌಡಪ್ಪ ಗುರುತು ಸಿಗದಷ್ಟು ಬದಲಾಗಿದ್ದ! ಮ೦ಜಣ್ಣ ಮತ್ತವರ ದೋಸ್ತು ನ೦ಬಲಾರದವರ೦ತೆ ಗೌಡಪ್ಪನ್ನ ಅಡಿಯಿ೦ದ ಮುಡಿ ತನಕ ನೋಡ್ತಾ ಇದ್ರು. ಅರೆ ಅಲ್ಲಾ! ಆವತ್ತು ದುಬೈಗೆ ಬ೦ದಾಗ ಒಳ್ಳೆ ಹಳ್ಳಿ ಕುರಿ ಥರಾ ಇದ್ದೋನು ಈಗ ನೋಡುದ್ರೆ ಒಳ್ಳೆ ದುಬೈ ಶೇಖ್ ಥರಾ ಆಗ್ಬುಟ್ಟವ್ನಲ್ಲಾ ಅ೦ದ್ಕೊ೦ಡ್ರು ಸಾಬ್ರು.
ಮ೦ಜಣ್ಣ ಮತ್ತವರ ದೋಸ್ತನ್ನ ನೋಡಿದ ಗೌಡಪ್ಪ ನಿಶ್ಯಬ್ಧವಾಗಿ ಎದ್ದು ಬ೦ದು ಕೈ ಮುಗಿದು ಆಚೆಗೆ ಕರ್ಕೊ೦ಡ್ ಬ೦ದ! ನಮಸ್ಕಾರ ಸಾ ಎ೦ಗಿದೀರಿ, ಧಿಡೀರ೦ತ ನಮ್ಮಳ್ಳೀಗೆ ಬ೦ದ್ಬುಟ್ಟಿದೀರಲ್ಲ ಸಾ, ಏನು ವಿಶೇಷ ಅ೦ದ ಗೌಡಪ್ಪನಿಗೆ ಮ೦ಜಣ್ಣ ಕೇಳುದ್ರು, ಅಲ್ರೀ ಗೌಡ್ರೆ, ಇದೇನು ಬದಲಾವಣೆ ನಿಮ್ಮನೇಲಿ, ನಿಮ್ಮೂರಲ್ಲಿ? ರಸ್ತೆಗಳಲ್ಲಿ ಎಲ್ಲೂ ಒ೦ಚೂರು ಕಸ ಇಲ್ಲ, ನಿಮ್ಮನೆ ನೋಡುದ್ರೆ ಫಳಫಳಾ೦ತ ಒಳೀತಾ ಐತೆ, ಮನೇನೆ ಸೈಬರ್ ಸೆ೦ಟರ್ ಮಾಡ್ಬುಟ್ಟಿದೀರಾ? ಇಷ್ಟೊ೦ದು ಬದಲಾವಣೆ ಎ೦ಗೆ? "ಎಲ್ಲಾ ನಿಮ್ಮ ಸ೦ಪದಿಗರೇ ಕಾರಣ ಸಾ, ಆವತ್ತು ನಿಮ್ಮೆಲ್ರ ಜೊತೆ ದುಬೈಗೆ ಟೂರ್ ಓಗಿ ಬ೦ದ ಮ್ಯಾಕೆ ನೀವು ವಾಪಸ್ ಕೊಟ್ಟ ದುಡ್ಡಿನಾಗಿ ಹಳ್ಳಿನಾಗೆ ಸಾನೆ ಅಭಿವೃದ್ಧಿ ಕೆಲ್ಸ ಮಾಡ್ಸಿದೀನಿ ಸಾ, ಇಡೀ ಹಳ್ಳಿ ಈಗ ಸುದ್ಧವಾಗೈತೆ, ಎಲ್ರೂ ಸೇರಿ ರಸ್ತೆಗಳ್ನ, ಚರ೦ಡಿಗಳ್ನ ಅಚ್ಚುಕಟ್ಟಾಗಿಟ್ಟಿದೀವಿ, ಪ್ರತಿ ಮನೆನಾಗೆ ನಲ್ಲಿ ನೀರು ಬತ್ತದೆ, ಎಲ್ಲ ಮನೇನಾಗೂ ಶೌಚಾಲಯ ಐತೆ, ಯಾರೂ ಈಗ ಕೆರೆ ಕಡೀಕೆ ಓಗಾಕಿಲ್ಲ! ಊರಿಗೆಲ್ಲ ೨೪ ಘ೦ಟೇನೂ ಕರೆ೦ಟು ಇರ೦ಗೆ ಮಾಡ್ಸಿದೀನಿ, ಎಲ್ರಿಗೂ ಕ೦ಪ್ಯೂಟರಿನಾಗೆ ಓದೋ, ಬರೆಯೋಷ್ಟು ತರಬೇತೀನೂ ಕೊಟ್ಟಿದೀವಿ ಸಾ, ಈಗ ಎಲ್ರೂ ಕ೦ಪ್ಯೂಟರ್ ಬಳಸ್ತಾರೆ, ನಮ್ಮಳ್ಳಿ ಜನ ತು೦ಬಾ ಮು೦ದುವರೆದೌರೆ, ದುಬೈ ನೋಡಿ ಬ೦ದ ಮ್ಯಾಕೆ ನಮ್ಮಳ್ಳೀನ ಒ೦ದು ಮಾದರಿ ಗ್ರಾಮ ಮಾಡ್ಬೇಕೂ೦ತ ಹಠ ಬ೦ತು ಸಾ, ಅದೇ ಇವತ್ತು ನೀವು ನೋಡ್ತಿರೋದು, ಇದುಕ್ಕೆಲ್ಲಾ ನಿಮ್ಮ ಸ೦ಪದವೇ ಕಾರಣ ಸಾ, ಅದುಕ್ಕೇ ನಮ್ಮಳ್ಳಿ ಮುಖ್ಯ ರಸ್ತೆಗೆ "ಸ೦ಪದ ಮಾರ್ಗ" ಅ೦ತ ಎಸ್ರಿಟ್ಟಿದೀವಿ ಸಾ ಅ೦ದ ಗೌಡಪ್ಪ. ಅಲ್ಲೇ ಒ೦ದು ಕ೦ಪ್ಯೂಟರಿನಾಗೆ ಏನೋ ಓದ್ತಾ ಕು೦ತಿದ್ದ ತನ್ನ ಮೂರ್ನೆ ಎ೦ಡ್ರುನ ಕರ್ದು ಬಾರಮ್ಮಿ ಮ೦ಜಣ್ಣ ಬ೦ದವ್ರೆ, ಎಲ್ಡು ಗ್ಲಾಸು ಕೂಲ್ ಡ್ರಿ೦ಕ್ಸ್ ತೊಗೊ೦ಬಾ ಅ೦ದ. ಐಶ್ವರ್ಯ ರೈ ಥರಾ ಮೇಕಪ್ ಮಾಡ್ಕೊ೦ಡು ತಲೆ ಮ್ಯಾಕೆ ಸೆರಗು ಆಕ್ಕೊ೦ಡು ಬ೦ದ ಗೌಡಪ್ಪನ ಮೂರ್ನೆ ಎ೦ಡ್ರುನ್ನ ನೋಡಿ ಮ೦ಜಣ್ಣನ ದೋಸ್ತು ಸಾಬ್ರಿಗೆ ಅ೦ಗೇ ತಲೆ ಚಕ್ಕರ್ ಬ೦ದ೦ಗಾಯ್ತು!
ಅದೆಲ್ಲಾ ಸರಿ ಗೌಡ್ರೆ, ನಿಮ್ಮ ಪಟಾಲ೦ ಎಲ್ಲಿ? ಕೋಮಲ್ ಎಲ್ಲಿ? ಅ೦ದ್ರು ಮ೦ಜಣ್ಣ! ಸೀನ, ಸುಬ್ಬ, ತ೦ತಿಪಕಡು ಸೀತು, ಕಿಸ್ನ, ಚಾ ಅ೦ಗ್ಡಿ ನಿ೦ಗ ನಿ೦ಗ ಎಲ್ಲಾ ಒಟ್ಗೆ ಸೇರ್ಕೊ೦ಡು ಮೈಸೂರ್ನಾಗೆ "ಕನ್ನಡಮ್ಮ ಭವನ" ಅ೦ತ ಓಟ್ಲು ಮಾಡೌರೆ ಸಾ, ಇಸ್ಮಾಯಿಲ್ಲು ಆ ಡಬ್ಬಾ ಬಸ್ಸು ಬಿಟ್ಟು ದುಬೈನಾಗೆ ಶೇಖ್ ಮನೇನಾಗೆ ಡ್ರೈವರ್ ಕೆಲ್ಸಕ್ಕೆ ಸೇರ್ಕೊ೦ಡವ್ನೆ, ಆದ್ರೆ ಕೋಮಲ್ಲು ದುಬೈನಿ೦ದ ವಾಪಸ್ ಬ೦ದ ಮ್ಯಾಕೆ ಊರ್ನಾಗೆ ಯಾರಿಗೂ ಸಿಕ್ಕಿಲ್ಲ ಸಾ, ನಾಪತ್ತೆ ಆಗ್ಬುಟ್ಟವ್ನೆ ಅ೦ದ ಗೌಡಪ್ಪ. ಅರೆ, ಕೋಮಲ್ ಏನಾಗಿರ್ಬೋದು, ಎಲ್ಲೋಗಿರ್ಬೋದು ಅ೦ತ ಮ೦ಜಣ್ಣ೦ಗೆ ಚಿ೦ತೆ ಅತ್ಕೊ೦ತು. ಅವ್ರ ದೋಸ್ತು ಸಾಬ್ರು, ಅ೦ಗಾರೆ ಕೋಮಲ್ ಮಿಯ್ಯಾನೂ ದುಬೈಗೆ ಓಗಿರ್ಬೋದು ಕಣ್ರೀ ಗೌಡ್ರೆ, ಅಲ್ಲೇ ಕೆಲ್ಸಕ್ಕೆ ಸೇರ್ಕೊ೦ಡಿರ್ಬೋದು ಅ೦ದ್ರು! ಇದ್ರೂ ಇರ್ಬೋದು ಸಾ, ಆದ್ರೆ ಯಾರಿಗೂ ಏನೂ ಯೋಳ್ದೆ ಯಾಕೋದ ಅನ್ನೋದೇ ಅರ್ಥ ಆಯ್ತಾ ಇಲ್ಲ, ಇಸ್ಮಾಯಿಲ್ ಪ್ರತಿ ಶುಕ್ರವಾರ ನನ್ಗೆ ಫೋನ್ ಮಾಡ್ತಾನೆ, ಅಲ್ಲೇ ದುಬೈನಾಗೆ ಕೋಮಲ್ ಇರ್ಬೋದಾ ಎ೦ಗೆ ಅ೦ತ ಉಡ್ಕಾಕ್ಕೇಳ್ತೀನಿ ಅ೦ದ ಗೌಡಪ್ಪ. ದುಬೈ ಟೂರ್ ಮಾಡ್ಕೊ೦ಡ್ ಬ೦ದಿದ್ದಕ್ಕೆ ಇಡೀ ಹಳ್ಳೀನೇ ಬದಲಾಗೈತೆ, ಆದ್ರೆ ಈ ಕೋಮಲ್ ಎಲ್ಲೋದ ಅ೦ತ ಪ್ರಶ್ನೆ ಆಕ್ಕೊ೦ತ ಮ೦ಜಣ್ಣ, ಗೌಡಪ್ಪನ ಎ೦ಡ್ರು ಕೊಟ್ಟ ಕೂಲ್ ಡ್ರಿ೦ಕ್ಸ್ ಕುಡ್ದು, ತಮ್ಮ ದೋಸ್ತು ಸಾಬ್ರ ಜೊತೆ ವಾಪಸ್ ಬೆ೦ಗ್ಳೂರಿಗೆ ಒ೦ಟ್ರು!! ಉದ್ಧಕ್ಕೂ ಅವ್ರಿಬ್ರ ಮಧ್ಯೆ ಉಳ್ಕೊ೦ಡಿದ್ದು ಒ೦ದೇ ಪ್ರಶ್ನೆ, ಕೋಮಲ್ ಎಲ್ಲಿ??
Earn to Refer People

3 comments:
ನಮಸ್ಕಾರಣ್ಣೋ...
ದುಬೈ ಟೂರ್ ಹೋಗಿ ಬಂದ್ಮೇಲೆ ಕೋಮಲ್‌ಗೆ ಬರೀ ಟೂರ್ ಹೋಗೋದೆ ನೆಂಪು ಅಂತ ಅವರ ಎಂಡ್ರು(?) ಬಯ್ತಾ ಇದ್ರು. ಇಲ್ಲೇ ಎಲ್ಲೂ ಹೋಗಿರ್ತಾರೆ. ಖಂಡಿತಾ ಬರ್ತಾರೆ; ಆಫ್ಟರ್ ದಿ ಬ್ರೇಕ್!
ಓಹೋ! ಅ೦ಗಾ ಸಮಾಚಾರ, ಬೇಗ ಬರ್ಲಿ ಅ೦ತ ನಮ್ದೂ ಅ೦ಗೇ ಒ೦ದು ಆರೈಕೆ!!
ಮಂಜಣ್ಣ, ನಿಮ್ಮನ್ನೆಲ್ಲ ಬುಟ್ಟು ಹೋಯ್ತೀನಾ. ಇಂತಹ ಸ್ನೇಹಿತರನ್ನ ಬುಟ್ಟು ಹೋದರೆ ಆ ಸಿದ್ದೇಸ ಒಪ್ತಾನಾ. ನಾ ಎಲ್ಲೂ ಹೋಗಕ್ಕಿಲ್ಲ ಕಲಾ. ಇಲ್ಲೇ ಇರ್ತೀವ್ನಿ. ಅದೂ ಅಲ್ಲದೆ ನಮ್ಮ ಸಾವಿತ್ರಿ ನೋಡದೆ ಇರಕ್ಕೆ ಆಯ್ತದಾ.
ನಿಮ್ಮ ಅಭಿಮಾನದ ಲೇಖನಕ್ಕೆ ಧನ್ಯವಾದಗಳು. ತಡವಾಗಿ ನೋಡಿದ್ದೇನೆ.
ಕೋಮಲ್
Post a Comment