Friday, October 14, 2016

ಮಧುಶಾಲೆಯ ಮೂಲೆಯಲ್ಲಿ,,,,,,,,,,,,,,,,,,,


ಮಧುಶಾಲೆಯ ಮೂಲೆಯಲ್ಲಿ 
ಇಂದು ಆ ಹಳೆಯ ತಂಪಿಲ್ಲ ಗೆಳತಿ !

ಮಧುಬಟ್ಟಲೊಳಗಿನ ತಂಪಿನಲಿ 
ಆ ಮಧುರ ನಶೆ ಏರುತಿಲ್ಲ ಗೆಳತಿ! 

ಎತ್ತೆತ್ತ ತಿರುಗಿ ನೋಡಿದರೂ
ನಿನ್ನ ರೂಪ ಕಾಣುತಿಲ್ಲ ಗೆಳತಿ!

ತಲೆಕೆರೆದು ನಾ ಯೋಚಿಸಲು
ಅರ್ಥವಾಯಿತು ನಿಜವೇನೆಂದು !

ನಿನ್ನ ಉಪಸ್ಥಿತಿಯಿಲ್ಲದ ಭುವಿಯು
ಆಗಿದೆ ನೋಡು ಬರಡು ಬೆಂಗಾಡು!

ಬೀಸುತಿಹ ಈ ಸುಡುಗಾಳಿಯಲೂ
ನಿನ್ನೆದೆಯಾಳದ ಒಲವ ನಿಟ್ಟುಸಿರು!

ನೀ ಬರುವವರೆಗೂ ಮದಿರೆಯ ನಿಶೆ
ಹರತಾಳ ಹೂಡಿದೆ ಮುನಿದು ಗೆಳತಿ !

(ಚಿತ್ರ: ಅಂತರ್ಜಾಲದಿಂದ)

ಅಕ್ಟೊಬರ್ ತಿಂಗಳ "ನಿಮ್ಮೆಲ್ಲರ ಮಾನಸ" ಪತ್ರಿಕೆಯಲ್ಲಿ ನನ್ನ ಅಂಕಣ,,,ನಿಮ್ಮ ಓದಿಗಾಗಿ ಗೆಳೆಯರೆ! :-)


Thursday, September 29, 2016

ತುಂಡು ಕಡೀರೋ ,,,, ಗುಂಡು ಹೊಡೀರೋ ....................



ತುಂಡು ಕಡೀರೋ ,,,,
ಗುಂಡು ಹೊಡೀರೋ 
ತುಂಡು ಕಡೀರೋ ,,,,
ಗುಂಡು ಹೊಡೀರೋ,,,,, 

ನಮ್ಮ  ಗಡಿ ದಾಟಿ ಬರೋರನ್ನ 
ಸುಮ್ನೆ ತಂಟೆ ಮಾಡೋರನ್ನ 
ಗನ್ನು ಬಾಂಬು ಹಿಡಿದು ಬಂದು
ಆತಂಕ ಸೃಷ್ಟಿ ಮಾಡೋರನ್ನ,,,,,,

ಹಿಂದೆ ಮುಂದೆ ನೋಡಬ್ಯಾಡಿ 
ದಯಾ ಸ್ವಲ್ಪ ತೋರ್ಸಬ್ಯಾಡಿ 
ಮನುಷ್ಯತ್ವ ಮರತೋರನ್ನ 
ಸಿಕ್ದೊರ್ನೆಲ್ಲಾ ಕೊಲ್ಲೋರನ್ನಾ 

ಅಡ್ಡಡ್ಡ ಸಿಗದು ತುಂಡು ಹೊಯ್ದು 
ಅವರ ಮೈಯಾಗಿನ ರಕ್ತ ಬಸಿದು 
ಭಾರತಮ್ಮಂಗೆ ಅಭಿಷೇಕ ಮಾಡ್ಸಿ 
ಭಾರತೀಯರ ಕಂಬನಿ ಅಳಿಸಿ 

 ತುಂಡು ಕಡೀರೋ ,,,,
ಗುಂಡು ಹೊಡೀರೋ 
ತುಂಡು ಕಡೀರೋ ,,,,
ಗುಂಡು ಹೊಡೀರೋ,,,,, 

ನುಗ್ಗಿ ಹೊಡೀರೋ,,,,ಬಗ್ಗಿ ಹೊಡೀರೋ...................



ನುಗ್ಗಿ ಹೊಡೀರೋ,,,,ಬಗ್ಗಿ ಹೊಡೀರೋ 
ನುಗ್ಗಿ ಹೊಡೀರೋ ,,,ಬಗ್ಗಿ ಹೊಡೀರೋ 
ಪಾಪಿ  ಪಾತಕಿಗಳ್ನ ನುಗ್ಗಿ ಹೊಡೀರೋ!

ಊರಿಗೆ ನುಗ್ಗುವಾ  ಆತಂಕವಾದಿಗಳ್ನಾ,,,,,,,,,,, 
ತಾಯಿಯ ಸೆರಗಿಗೆ ಕೈಯಿಟ್ಟ ದುರುಳರ್ನಾ,,,,
ಮಲಗಿರುವ ಸೈನಿಕರ ರಾತ್ರೀಲಿ ಕೊಂದವರ್ನಾ 
ನಿರಪರಾಧಿಗಳ ಕುತ್ತಿಗೆನಾ ಕೊಯ್ದವರ್ನಾ ,,,,,, 

ನುಗ್ಗಿ ಹೊಡೀರೋ,,,,ಬಗ್ಗಿ ಹೊಡೀರೋ 
ನುಗ್ಗಿ ಹೊಡೀರೋ ,,,ಬಗ್ಗಿ ಹೊಡೀರೋ 
ಪಾಪಿ  ಪಾತಕಿಗಳ್ನ ನುಗ್ಗಿ ಹೊಡೀರೋ!
                                                                                                                             
ಕಣ್ಮುಚ್ಚಿ  ಕಾಶ್ಮೀರ ನಮ್ದು ಅನ್ನೋರ್ನಾ,,,,,,,,,,,,,,,
ಶಾಂತಿ ಮಂತ್ರಕ್ಕೆ ಬೆಲೆ ಕೊಡದೆ ಇರೋರ್ನಾ,,,,,,,,,, 
ದೇಶ ಕಾಯೋ ಸೈನಿಕರಿಗೆ ಕಲ್ಲು ಹೊಡೆಯೋರ್ನಾ,, 
ಉಂಡಾ ಮನೇಗೆ ಎರಡು ಬಗೆಯೋರ್ನಾ ,,,,,,,,,,,,,,

ನುಗ್ಗಿ ಹೊಡೀರೋ,,,,ಬಗ್ಗಿ ಹೊಡೀರೋ 
ನುಗ್ಗಿ ಹೊಡೀರೋ ,,,ಬಗ್ಗಿ ಹೊಡೀರೋ 
ಪಾಪಿ  ಪಾತಕಿಗಳ್ನ ನುಗ್ಗಿ ಹೊಡೀರೋ! 

Saturday, August 27, 2016

ಅದೇಕೋ ಗೊತ್ತಿಲ್ಲ ,,,,,,,,,,,,,,,,,,,,,,,,





ಅದೇಕೋ ಗೊತ್ತಿಲ್ಲ 
ಇತ್ತೀಚೆಗೆ ಬರೆಯಲು 
ಮನಸ್ಸೇ ಬರುತ್ತಿಲ್ಲ!
ತಲೆಯ ತುಂಬಾ ಸರಕು 
ಸಾಕಷ್ಟು ಇದೆಯಲ್ಲಾ 
ಆದರೂ ಬರೆಯಲಾಗುತ್ತಿಲ್ಲ!
ಏನಿದರ ಮರ್ಮ 
ಅದೇನಿದು ಈ ಕರ್ಮ 
ಎಷ್ಟು ಯೋಚಿಸಿದರು 
ಅರ್ಥವೇ ಆಗುತ್ತಿಲ್ಲ!
ಮನಸ್ಸು ಅಶಾಂತಿಯ 
ಸುಡು ಸುಡು ಅಗ್ನಿಕುಂಡ 
ಮೆದುಳು ಕೊತಕೊತನೆ 
ಕುದಿವ ಜ್ವಾಲಾಮುಖಿ
ಯಾವಾಗಲೋ ಆಸ್ಫೋಟ!
ಪರಿಣಾಮವೆಂಥದೋ 
ಘೋರವೋ ಭೀಕರವೋ 
ಊಹಿಸಲೇ ಆಗುತ್ತಿಲ್ಲ!!!