ನಲ್ಲ ಉಸಿರಾಗುವೆನೆ೦ದ ನಿನ್ನ ಮಾತ ನ೦ಬಿದೆ ನಾನು
ನಾಳೆ ಬರುವೆನೆ೦ದಾಗ ನಿನಗಾಗಿ ಕಾದೆ ಮರೆತೆಯೇನು
ಋತುಗಳು ಬದಲಾಗಿ ಸುತ್ತ ಹೊಸ ಚಿಗುರು ಮರೆಯಾಗಿ
ನಿತ್ಯ ಹಸಿರೆಲ್ಲ ಒಣಗಿ ನಿಸರ್ಗ ಸತ್ತು ಬಣ ಬಣ ಬರಡಾಗಿ!
ಏನಡ್ಡ ಬ೦ದರೂ ಎದುರಿಸಿ ಬದುಕೆವೆನೆ೦ದಿದ್ದೆ ನೀನು
ಸಹಮತ ನೀಡಿ ನಡಿ ಬರುವೆನೆ೦ದಿದ್ದೆ ನಿನ್ನೊಡನೆ ನಾನು
ಮಾತುಗಳೇ ಮುತ್ತಾಗಿ ವಾಸ್ತವದ ಕಟುಸತ್ಯ ಅರಿಯದಾಗಿ
ನಾ ಕಾದಿದ್ದೆ ನಿನಗಾಗಿ ಏ ಹುಡುಗಿ ನೀನಿದ್ದೆ ನನ್ನ ಕನಸಾಗಿ!
ಕೊನೆಗೂ ನೀ ಬರಲೇ ಇಲ್ಲ ಮಾಯವಾಗಿ ಹೋದೆ ನೀನು
ನೀ ಕನಸಾಗೆ ಉಳಿದೆ ನನಸಾಗಲಿಲ್ಲ ನಿನಗರಿಯದೇನು
ಪ್ರೀತಿ ಭರವಸೆಯ ಪ್ರೇಮ ಸಿ೦ಚನವೇ ನಮ್ಮ ಬದುಕಾಗಿ
ಸಾಕಷ್ಟು ನುಡಿದೆಯಲ್ಲ ಬೇಸರವಿಲ್ಲದೆ ನನ್ನೊಡನೆ ಒ೦ದಾಗಿ!
ಮರೆತೆಯಲ್ಲೆ ನಲ್ಲೆ ಹೃದಯದ ಮಧುರ ಪಿಸುಮಾತುಗಳನು
ನೆನೆಯಲಿಲ್ಲ ನೀನು ಅ೦ದು ನೀ ಮಾಡಿದ ವಾಗ್ದಾನಗಳನು
ನೀ ದೂರವಾದೆ ಅ೦ದಿನಿ೦ದಲೆ ಬದಲಾದೆ ನಾ ಘೋರ್ಕಲ್ಲಾಗಿ
ಮಾಡದಿಹ ಅಪರಾಧಕೆ ಸಿಕ್ಕ ಶಿಕ್ಷೆಯ ನೆನೆನೆನೆದು ಮೂಕನಾಗಿ
ದೂರವಾದೆಯಲ್ಲೆ ಸುಮ್ಮನೆ ಮು೦ದಿಟ್ಟು ಧರ್ಮದ ಮಾತನ್ನು
ಏನಾದರೇನ೦ತೆ ಆ ಧರ್ಮ ಉಳಿಸಿತೆ ನಮ್ಮೀ ಪ್ರೀತಿಯನ್ನು
ಆದರೂ ಭರವಸೆಯಿದೆ ನನಗೆ ಒಮ್ಮೆ ನೀ ಬರುವೆ ಬೆಳಕಾಗಿ
ಕಾಯುತಲಿಹೆ ನಾನಿಲ್ಲಿ ಆ ದಿನ ಬರುವುದೆ೦ದು ನಿನಗಾಗಿ!!
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Friday, July 30, 2010
Tuesday, July 27, 2010
ನಿರೀಕ್ಷೆಯ ಕ೦ಗಳೊಡನೆ !
ಅ೦ದು ನೀ ಬರಬೇಕಿತ್ತು ಹರ್ಷದ ತೇರಿನೊಡನೆ
ನಾ ಕಾಯುತ್ತಲೇ ಇದ್ದೆ ನಿರೀಕ್ಷೆಯ ಕ೦ಗಳೊಡನೆ
ಕಾದು ಕಾದು ಕಳೆದವು ದಿನ ವಾರ ಮಾಸಗಳು
ಉರುಳಿ ಹೋದವು ನಿನ್ನ ನೆನಪಿನಲ್ಲೆ ವರ್ಷಗಳು
ನೀ ಬರುವೆ ನೀ ಬರುವೆ ಬ೦ದೇ ಬರುವೆಯೆ೦ದು
ಕಾಯುತಲೇ ಇದ್ದೆ ನಾನು ಹಾ ಬೆಳಕಾಗುವುದೆ೦ದು
ಕೊನೆಗೂ ಇಲ್ಲಿ ಅದೇಕೋ ಬೆಳಕು ಕಾಣಲೇ ಇಲ್ಲವಲ್ಲ
ಈ ಎದೆಯಲ್ಲಿ ಬರಿ ಉರಿ ಉರಿ ನೋವೇ ಉಳಿಯಿತಲ್ಲ
ದೇವರೆ ನಿನಗೆ ಸಲ್ಲಿಸಿದ ಪೂಜೆಯೆಲ್ಲ ವ್ಯರ್ಥವಾಯಿತಲ್ಲ
ಇದೇಕೆ ನೀನಿನ್ನೂ ಗುಡಿಯಲ್ಲಿ ಕಲ್ಲಾಗೆ ಕುಳಿತಿರುವೆಯಲ್ಲ!

Sunday, July 25, 2010
ಮಾಯಾವಿ ನೆನಪುಗಳು!
ಏಕಾ೦ತದಿ ಮಧುರ ಅನುಭೂತಿ ನೀಡುವ,
ಕಚಗುಳಿಯಿಡುತ ದಿನವು ಮನವ ಮರೆಸುವ,
ಯಾರಿಲ್ಲದಿರಲು ನಗುತ ನಿತ್ಯ ಜೊತೆಯಿರುವ,
ಸುಮಗಳು....................ಈ ನೆನಪುಗಳು!
ಉರಿವ ಬಿಸಿಲಿನಲೂ ಶೀತಲ ತ೦ಪನೆರೆಯುವ,
ಕೊರೆವ ಛಳಿಯಲೂ ಮನವ ಬೆಚ್ಚಗಾಗಿಸುವ,
ಕ೦ಬನಿಯ ಬಿ೦ದುವ ಹಾಗೇ ಹೆಪ್ಪುಗಟ್ಟಿಸುವ,
ಮಾಯಾವಿಗಳು..............ಈ ನೆನಪುಗಳು!
ಬೇಕೆ೦ದಾಗ ಬರದ ಬೇಕಿಲ್ಲದಾಗ ಬ೦ದೇ ಬಿಡುವ,
ಮೊಗದ ಮ೦ದಸ್ಮಿತವ ತಣ್ಣಗೆ ಕೊ೦ದು ಬಿಡುವ,
ನೀ ತೃಣವೆ೦ದು ಥಟ್ಟನೆ ತೋರಿ ವಿಜೃ೦ಭಿಸುವ,
ನಿರ್ದಯಿಗಳು..................ಈ ನೆನಪುಗಳು!
ಕಚಗುಳಿಯಿಡುತ ದಿನವು ಮನವ ಮರೆಸುವ,
ಯಾರಿಲ್ಲದಿರಲು ನಗುತ ನಿತ್ಯ ಜೊತೆಯಿರುವ,
ಸುಮಗಳು....................ಈ ನೆನಪುಗಳು!
ಉರಿವ ಬಿಸಿಲಿನಲೂ ಶೀತಲ ತ೦ಪನೆರೆಯುವ,
ಕೊರೆವ ಛಳಿಯಲೂ ಮನವ ಬೆಚ್ಚಗಾಗಿಸುವ,
ಕ೦ಬನಿಯ ಬಿ೦ದುವ ಹಾಗೇ ಹೆಪ್ಪುಗಟ್ಟಿಸುವ,
ಮಾಯಾವಿಗಳು..............ಈ ನೆನಪುಗಳು!
ಬೇಕೆ೦ದಾಗ ಬರದ ಬೇಕಿಲ್ಲದಾಗ ಬ೦ದೇ ಬಿಡುವ,
ಮೊಗದ ಮ೦ದಸ್ಮಿತವ ತಣ್ಣಗೆ ಕೊ೦ದು ಬಿಡುವ,
ನೀ ತೃಣವೆ೦ದು ಥಟ್ಟನೆ ತೋರಿ ವಿಜೃ೦ಭಿಸುವ,
ನಿರ್ದಯಿಗಳು..................ಈ ನೆನಪುಗಳು!
Monday, July 19, 2010
ಕವಲುದಾರಿಯಲ್ಲೊ೦ದು ಗಟ್ಟಿ ನಿರ್ಧಾರ. "ಚಿರ೦ಜೀವಿ ಸಾವಿತ್ರಿ".
ಒ೦ದು ತಿ೦ಗಳು ಭಾರತವಾಸದ ನ೦ತರ ಮತ್ತೆ ದುಬೈಗೆ ಹಿ೦ದಿರುಗಿ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದೇನೆ. ಆದರೆ ಅ೦ದು, ಬೆ೦ಗಳೂರಿನಲ್ಲಿ ನನ್ನ ಮುದ್ದಿನ ಮಗಳ ಮನದ ಮಾತು ಕೇಳಿ, ಸ್ನೇಹಿತರ, ಹಿತೈಷಿಗಳ ಮಾತಿಗೆ ಬೆಲೆ ಕೊಟ್ಟು ತೆಗೆದುಕೊ೦ಡ ಒ೦ದು ನಿರ್ಧಾರ, ಅದು ಸರಿಯೋ ತಪ್ಪೋ, ಮು೦ದೇನೋ ಎ೦ಬ ಆತ೦ಕದ ಜೊತೆಗೆ ಮನದ ಮೂಲೆಯಲ್ಲಿ ಏನಾದರೂ ತಪ್ಪು ಮಾಡಿಬಿಟ್ಟೆನಾ ಎ೦ಬ ಅಪರಾಧಿ ಭಾವ ಕಾಡುತ್ತಲೆ ಇದೆ, ಅದನ್ನಿ೦ದು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ.
ಚಿಕ್ಕ೦ದಿನಿ೦ದಲೂ ಓದಿನಲ್ಲಿ ಮು೦ದಿದ್ದ ಮಗಳು ಹತ್ತನೆಯ ತರಗತಿಯಲ್ಲಿ ಅತ್ಯುತ್ತಮ ಅ೦ಕ ಗಳಿಸಿ ಪ್ರಶಸ್ತಿ ಪುರಸ್ಕೃತಳಾದಾಗ ಎಲ್ಲ ಅಪ್ಪ-ಅಮ್ಮ೦ದಿರ೦ತೆ ನಾನೂ ನನ್ನವಳೂ ಸ೦ತೋಷದ ಅಲೆಗಳ ಮೇಲೆ ತೇಲಿ ಹೋಗಿದ್ದೆವು. ನಮ್ಮ ಮಗಳೂ ಮು೦ದೆ ಎಲ್ಲರ೦ತೆ ಡಾಕ್ಟರೋ(!), ಇ೦ಜಿನಿಯರೋ(!) ಅಥವಾ ನನ್ನ ಕೈಗೆಟುಕದಿದ್ದ ಐ.ಎ.ಎಸ್.ಆಫೀಸರೋ ಆಗುತ್ತಾಳೆ, ಹಾಗೆ ಹೀಗೆ೦ದು ಕನಸು ಕಾಣುತ್ತಾ ಬೀಗುತ್ತಿದ್ದೆವು. ಆದರೆ ದಿನಗಳೆದ೦ತೆ ಅವಳ ಆಸಕ್ತಿ ಬಣ್ಣದ ತೆರೆಯತ್ತ ತಿರುಗಿತು. ಮೊದಲ ಪಿ.ಯು.ಸಿ. ಓದುವಾಗಲೇ ಹಲವಾರು ದೂರದರ್ಶನ ಚಾನಲ್ಲುಗಳಲ್ಲಿ ನಿರೂಪಕಿಯಾಗಿ, ಕೆಲವು ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಕಡಿಮೆ ಅ೦ಕಗಳೊ೦ದಿಗೆ ಮೊದಲ ಪಿ.ಯು.ಸಿ ಮುಗಿಸಿದಾಗ ನನ್ನ ಕೋಪ ತಾರಕಕ್ಕೇರಿ ಕೆ೦ಡಾಮ೦ಡಲವಾಗಿದ್ದೆ, ಮನೆಯಲ್ಲಿ ನನ್ನ ಮಡದಿ, ಮಗಳಿಬ್ಬರ ಮೇಲೂ ದುಬೈನಿ೦ದ ಫೋನಿನಲ್ಲೇ ಆರ್ಭಟಿಸಿ, ಇದೆಲ್ಲವನ್ನೂ ಬಿಟ್ಟು ಕೇವಲ ಓದಿನ ಬಗ್ಗೆ ಮಾತ್ರ ಗಮನ ಹರಿಸಬೇಕೆ೦ದು, ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆ೦ದು ಗುಟುರು ಹಾಕಿದ್ದೆ. ಒಬ್ಬ ಜವಾಬ್ಧಾರಿಯುತ ಅಪ್ಪನಾಗಿ ಮಗಳ ವಿದ್ಯಾಭ್ಯಾಸ ಯಶಸ್ವಿಯಾಗಿ ಮುಗಿದು ಅವಳು ಸಮಾಜದಲ್ಲಿ ಒ೦ದು ಉತ್ತಮ ಸ್ಥಾನದಲ್ಲಿ ನಿಲ್ಲಬೇಕೆ೦ಬುದು ನನ್ನ ಮನದಾಸೆಯಾಗಿತ್ತು. ಅದೇ ನನ್ನ ಕೋಪಕ್ಕೂ ಮೂಲ ಕಾರಣವಾಗಿತ್ತು.
ಮತ್ತೆ ಎಲ್ಲವನ್ನೂ ನಿಲ್ಲಿಸಿ ಓದಿನ ಬಗ್ಗೆ ಗಮನ ಹರಿಸಿದ ಮಗಳು ಎರಡನೆ ಪಿ.ಯು.ಸಿಯಲ್ಲಿ ಉತ್ತಮ ಅ೦ಕಗಳೊ೦ದಿಗೆ ಉತ್ತೀರ್ಣಳಾಗಿ ಅವಳಿಗೆ ಸಿಇಟಿ ಮೂಲಕ ಇ೦ಜಿನಿಯರಿ೦ಗ್ ಸೀಟು ಸಿಕ್ಕಿದಾಗ ನಮಗ೦ತೂ ತು೦ಬಾ ಖುಷಿಯಾಗಿತ್ತು. ದುಬೈನಲ್ಲಿ ಕುಳಿತೇ ಅವಳ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಅವಳಿಗೆ ಯಶಸ್ಸು ಸಿಗಲೆ೦ದು ಮನದು೦ಬಿ ಹರಸಿದ್ದೆ, ಹಾರೈಸಿದ್ದೆ. ಈಗ ಮೊದಲ ವರ್ಷ ಮುಗಿಸಿ ಎರಡನೆಯ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಹಾಗೆಯೇ ಜೀವನದ ಹಾದಿಯಲ್ಲಿ ಇನ್ನೊ೦ದು ಕವಲುದಾರಿಯಲ್ಲಿ ನಿ೦ತಿದ್ದಾಳೆ.
ಕಳೆದ ತಿ೦ಗಳು ನಾನು ಬೆ೦ಗಳೂರಿನಲ್ಲಿದ್ದಾಗ ನನ್ನನ್ನು ಕಾಡಿ ಅನುಮತಿ ಪಡೆದು ಒ೦ದು ಧಾರಾವಾಹಿಯ ಚಿತ್ರೀಕರಣದಲ್ಲಿ ಭಾಗವಹಿಸಲು ತಮ್ಮನೊ೦ದಿಗೆ ಮಡಿಕೇರಿಗೆ ತೆರಳಿದ ಮಗಳು ಅದನ್ನು ಯಶಸ್ವಿಯಾಗಿ ಮುಗಿಸಿ ಬ೦ದಾಗ ಅದೇನೋ ಒ೦ದು ಹೊಸ ಆತ್ಮವಿಶ್ವಾಸದ ಅಲೆಯ ಮೇಲೆ ತೇಲುತ್ತಿದ್ದಳು. ಅವಳಲ್ಲಿನ ಬದಲಾವಣೆಗಳನ್ನು ನಾನು ನನ್ನ ಪತ್ತೇದಾರಿ ಕಣ್ಣುಗಳಿ೦ದ ಅವಲೋಕಿಸುತ್ತಿದ್ದೆ. ಸಾಕಷ್ಟು ಮೊಬೈಲ್ ಸ೦ಭಾಷಣೆಗಳು ನಡೆಯುತ್ತಿದ್ದವು, ನನಗೆ ಗೊತ್ತಿಲ್ಲದ೦ತೆ ಸಾಕಷ್ಟು ಚರ್ಚೆಗಳೂ ಅವಳ ಮೊಬೈಲಿನಲ್ಲೇ ಆಗುತ್ತಿದ್ದವು. ಕೊನೆಗೊ೦ದು ದಿನ ನನ್ನ ಬಳಿ ಬ೦ದು, ಅಪ್ಪ, ನಾವು ಬನಶ೦ಕರಿಗೆ ಹೋಗಿ ಬರೋಣ ಬರ್ತೀಯ ಅ೦ದವಳನ್ನು ಸ೦ಶಯಾತ್ಮಕವಾಗಿ ನೋಡಿ ಏಕೆ ಅ೦ದರೆ ಧಾರಾವಾಹಿಯ ನಿರ್ದೇಶಕರೊಬ್ಬರು ಬರ ಹೇಳಿದ್ದಾರೆ ಅ೦ದಾಗ ಕೋಪದಿ೦ದ ಇಲ್ಲ ಎ೦ದಿದ್ದೆ. "ನಾನು ಖ೦ಡಿತ ನನ್ನ ವಿದ್ಯಾಭ್ಯಾಸವನ್ನೂ ಮು೦ದುವರೆಸುತ್ತೇನಪ್ಪ, ನಿನ್ನ ಹೆಸರಿಗೆ ನಾನು ಯಾವತ್ತೂ ಕಳ೦ಕ ತರುವುದಿಲ್ಲ, ಹಾಗೆಯೇ ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕೆ೦ಬ ನಿನ್ನ ಆಸೆಗೂ ನಾನು ಮೋಸ ಮಾಡುವುದಿಲ್ಲ. ನಿನ್ನಿಚ್ಛೆಯ೦ತೆ ನಡೆಯುತ್ತೇನೆ, ಆದರೆ ನನಗೆ ಈ ಧಾರಾವಾಹಿಯಲ್ಲಿ ಅಭಿನಯಿಸಲು ಅವಕಾಶ ಕೊಡಪ್ಪಾ" ಎ೦ದು ದೈನ್ಯವಾಗಿ ಕೇಳಿದವಳ ಮುಖವನ್ನೇ ನೋಡುತ್ತಾ ಸುಮ್ಮನೆ ಕುಳಿತೆ. ನನ್ನ ಮನದಲ್ಲಿ ಭಾವನೆಗಳ ಭಯ೦ಕರ ಸ೦ಘರ್ಷವೇ ನಡೆಯುತ್ತಿತ್ತು. ಅರೆ, ಓದಿ ವಿದ್ಯಾವ೦ತಳಾಗಿ ಮು೦ದುವರೆಯಲಿ ಅ೦ದರೆ ಇವಳು ಮತ್ತೆ ಕಿರುತೆರೆಗೆ ಹೋಗ್ತೀನಿ ಅ೦ತಾಳಲ್ಲಾ, ಏನು ಮಾಡುವುದು, ಒಪ್ಪಿಗೆ ಕೊಡಲಾ, ಬೇಡವಾ, ಆ ಕ್ಷಣದಲ್ಲಿ ಏನೊ೦ದೂ ನಿರ್ಧರಿಸಲಾರದಾಗಿದ್ದೆ.
ಮರುದಿನ ನನ್ನ ಮೊಬೈಲಿಗೊ೦ದು ಕರೆ ಬ೦ದು ಮಾತಾಡಿದರೆ ಅದು "ಶೃತಿ ನಾಯ್ಡು", ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ನಮ್ಮಮ್ಮ ಶಾರದೆ"ಯ ಶಾರು ಪಾತ್ರಧಾರಿ. ಸ್ವಚ್ಛ ಕನ್ನಡದಲ್ಲಿ ನನಗೆ ಅರ್ಥವಾಗುವ೦ತೆ ನನ್ನ ಮಗಳಿಗೆ ಸಿಗುತ್ತಿರುವ ಪಾತ್ರ, ಅದರ ಸಾಧಕ ಬಾಧಕಗಳನ್ನು ಅರ್ಧ ಘ೦ಟೆ ವಿವರಿಸಿದರು. ಕೊನೆಗೆ ವಿಧಿಯಿಲ್ಲದೆ ಮಗಳನ್ನು ಕರೆದುಕೊ೦ಡು ಬನಶ೦ಕರಿಯಲ್ಲಿದ್ದ ಅವರ ಮನೆಗೆ ಹೋದೆ. ಅಲ್ಲಿ ಮತ್ತೊಮ್ಮೆ ನನಗೆ ವಿವರಿಸಿದರು, " ನಾನೂ ಇ೦ಜಿನಿಯರಿ೦ಗ್ ಓದ್ತಿದ್ದೆ ಸಾರ್, ಕಿರುತೆರೆಯಲ್ಲಿ ನನಗೆ ಅವಕಾಶ ಸಿಕ್ಕಿತು, ಬ೦ದೆ, ಇಲ್ಲಿ ಸಾಧಿಸಿದೆ, ಈಗ ನನ್ನದೇ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದೇನೆ, ಹಣ, ಅ೦ತಸ್ತು, ಗೌರವ, ಜೊತೆಗೆ ಆತ್ಮಸ೦ತೃಪ್ತಿಯನ್ನೂ ನಾನು ಕಿರುತೆರೆಯಲ್ಲಿ ಕ೦ಡುಕೊ೦ಡಿದ್ದೇನೆ. ನಿಮ್ಮ ಮಗಳಲ್ಲಿ ಒಬ್ಬ ಕಲಾವಿದೆ ಅಡಗಿ ಕುಳಿತಿದ್ದಾಳೆ, ಅವಳಿಗೆ ಬೆಳೆಯಲು ಅವಕಾಶ ಕೊಡಿ" ಎ೦ದವರ ಮಾತಿಗೆ ಮೌನವಾಗಿ ಒಪ್ಪಿಗೆ ಸೂಚಿಸಿದೆ. ಅವಳ ಧ್ವನಿ, ಅಭಿನಯ ಚಾತುರ್ಯವನ್ನು ಪರೀಕ್ಷಿಸಿ ಎಲ್ಲವನ್ನೂ ಓಕೆ ಮಾಡಿಯೇ ಬಿಟ್ಟರು. ಅವರ ಮು೦ದಿನ ಮೆಗಾ ಧಾರಾವಾಹಿ "ಚಿರ೦ಜೀವಿ ಸೌಭಾಗ್ಯವತಿ ಸಾವಿತ್ರಿ"ಯ ಮುಖ್ಯ ಪಾತ್ರಕ್ಕೆ ನನ್ನ ಮಗಳನ್ನು ಆಯ್ಕೆ ಮಾಡಿದ್ದರು. ಮಗಳ ಮುಖದ ಮೇಲೆ ನಲಿಯುತ್ತಿದ್ದ ಸ೦ತೋಷ, ಸ೦ತೃಪ್ತಿಯನ್ನು ಕ೦ಡು ನನ್ನ ಮನಸ್ಸಿಗೂ ನೆಮ್ಮದಿಯಾಯಿತು.
ಅಲ್ಲಿ೦ದ ಮನೆಗೆ ಬರುವ ಹಾದಿಯಲ್ಲೇ ನಮ್ಮ ಸ೦ಪದಿಗ ಮಿತ್ರ ಚಾಮರಾಜ ಸವಡಿಯವರಿಗೆ ಕರೆ ಮಾಡಿದೆ. ಅವರೀಗ ಸುವರ್ಣ ಚಾನಲ್ ಬಿಟ್ಟು "ಸಮಯ್ ಟಿವಿ"ಯಲ್ಲಿ ತೊಡಗಿಕೊ೦ಡಿದ್ದಾರೆ. ನಾವು ಕಬ್ಬನ್ ಪಾರ್ಕಿಗೆ ಬರುವ ಹೊತ್ತಿಗೆ ಅಲ್ಲಿ ಬ೦ದು ನಮ್ಮ ಎದುರು ನೋಡುತ್ತಿದ್ದರು. ಅವರು ಸಿಕ್ಕಿದ ಸ೦ತೋಷಕ್ಕೇನೋ, ಆಕಾಶಕ್ಕೆ ತೂತು ಬಿದ್ದ೦ತೆ ಧೋ ಎ೦ದು ಜೋರಾಗಿ ಮಳೆ ಸುರಿಯತೊಡಗಿತು. ನನ್ನ ಕಾರಿನಲ್ಲಿ ಕುಳಿತೇ ಅವರಿಗೆ ಎಲ್ಲವನ್ನೂ ವಿವರಿಸಿದೆ. ನನ್ನ ಮನದ ಹೊಯ್ದಾಟವನ್ನೂ ಅವರಿಗೆ ತಿಳಿಸಿ ಅವರ ಸಲಹೆ ಕೇಳಿದೆ. ಅದಕ್ಕವರು ಹೇಳಿದ್ದು, " ನೋಡಿ ಸಾರ್, ನಾನೂ ಸಹ ಮಾಧ್ಯಮದಲ್ಲಿದ್ದೇನೆ. ದಿನವೊ೦ದಕ್ಕೆ ೧೫-೨೦ ಜನ ಅವಕಾಶಗಳನ್ನು ಹುಡುಕಿಕೊ೦ಡು ನನ್ನ ಬಳಿಗೆ ಬರುತ್ತಾರೆ, ಆದರೆ ಅವರಿಗೆಲ್ಲ ಆ ಅವಕಾಶ ಸಿಗುವುದಿಲ್ಲ. ನಿಮ್ಮ ಮಗಳಿಗೆ ಅದಾಗಿಯೇ ಹುಡುಕಿಕೊ೦ಡು ಬ೦ದಿದೆ, ಅವಳಲ್ಲೊಬ್ಬ ಅಭಿನೇತ್ರಿಯಿದ್ದಾಳೆ, ನೀವು ಅವಳಿಗೆ ಕಿರುತೆರೆಯಲ್ಲಿ ಮು೦ದುವರೆಯಲು ಧೈರ್ಯವಾಗಿ ಅವಕಾಶ ನೀಡಿ. ಇಲ್ಲಿಯೂ ಮು೦ದುವರೆಯಲು ಸಾಕಷ್ಟು ಅವಕಾಶಗಳಿವೆ, ಎಲ್ಲ ಒಳ್ಳೆಯದಾಗುತ್ತದೆ" ಎ೦ದವರ ಮಾತುಗಳಿಗೆ ನಾನು ಬೇರೇನೂ ಬದಲು ಹೇಳುವ ಸ್ಥಿತಿಯಲ್ಲಿರಲಿಲ್ಲ. ಅಲ್ಲಿ೦ದ ರಾಜಭವನ್ ರಸ್ತೆಯ ಕ್ಯಾಪಿಟಲ್ ಹೋಟೆಲ್ಲಿಗೆ ಬ೦ದು ದೋಸೆ ಕಾಫಿಯ ಪಾರ್ಟಿ ಮುಗಿಸಿ, ಅವರ ಸಮಯೋಚಿತ ಸಲಹೆಗೆ ವ೦ದಿಸಿ ಮನೆಗೆ ಬ೦ದೆ.
ನನ್ನ ಮನಸ್ಸಿಗಿನ್ನೂ ಸಮಾಧಾನವಾಗಿರಲಿಲ್ಲ, ಹಲವಾರು ಹೊಯ್ದಾಟಗಳ ನಡುವೆಯೇ ತಮ್ಮ, ತ೦ಗೆ, ಮಡದಿ ಮತ್ತು ಆತ್ಮೀಯ ಗೆಳೆಯರೊಡನೆ ಮಾತಾಡಿದೆ. ಎಲ್ಲರ ಅಭಿಪ್ರಾಯವೂ ಅದೇ ಆಗಿತ್ತು, "ಅವಕಾಶ ತಾನಾಗಿ ಬ೦ದಿರುವಾಗ ನೀನು ಅದಕ್ಕೆ ಅಡ್ಡ ಹೋಗಬೇಡ, ಅವಳಿಗೆ ಒಪ್ಪಿಗೆ ನೀಡು, ಮು೦ದುವರೆಯಲಿ". ಕೊನೆಗೂ ಧಾರಾವಾಹಿಯಲ್ಲಿ ಅಭಿನಯಿಸಲು ನನ್ನ ಮಗಳಿಗೆ ಒಪ್ಪಿಗೆ ನೀಡಿ ಜೊತೆಯಲ್ಲಿ ತನ್ನ ವಿದ್ಯಾಭ್ಯಾಸವನ್ನೂ ಮು೦ದುವರಿಸುವ೦ತೆ ಸಲಹೆ ನೀಡಿದೆ. ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲಾಗದೆ ನನ್ನ ಕೈ ಹಿಡಿದು "ಥ್ಯಾ೦ಕ್ ಯೂ ಅಪ್ಪ" ಅ೦ದ ಮಗಳ ಕಣ್ಣಲ್ಲಿ ಆನ೦ದಭಾಷ್ಪ!
ಕಾಕತಾಳೀಯವೆ೦ದರೆ, ನಾನು ಕನಸು ಕ೦ಡು ಸಾಧಿಸಲಾಗದೆ ನನ್ನ ಮಗಳಾದರೂ ಚೆನ್ನಾಗಿ ಓದಿ ಐ.ಎ.ಎಸ್.ಅಧಿಕಾರಿಯಾಗಲೆ೦ಬ ಕನಸು ಕ೦ಡಿದ್ದೆ. ಅದು ನಿಜವಾಗುತ್ತದೋ ಇಲ್ಲವೋ, ಕಾಲವೇ ನಿರ್ಧರಿಸಲಿದೆ. ಆದರೆ ಈ ಧಾರಾವಾಹಿಯ ಕಥೆಯಲ್ಲಿ ಹಳ್ಳಿಯಲ್ಲಿ ಬಡ ಕುಟು೦ಬದಲ್ಲಿ ಹುಟ್ಟಿದ ಹೆಣ್ಣು ಮಗಳು ಎಲ್ಲ ಅಡೆ ತಡೆಗಳನ್ನು ಮೀರಿ, ಕೊನೆಗೆ ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುತ್ತಾಳ೦ತೆ! ನನ್ನ ಕನಸು ಧಾರಾವಾಹಿಯಲ್ಲ೦ತೂ ನಿಜವಾಗಲಿದೆ!!
ಕಳೆದ ಒ೦ದು ತಿ೦ಗಳಿನಿ೦ದ ದಿನಪೂರ್ತಿ ಭರ್ಜರಿ ಚಿತ್ರೀಕರಣ ನಡೆದಿದೆ. ಜೈಜಗದೀಶ್, ಬಿ.ವಿ.ರಾಧ, ಮ೦ಡ್ಯ ರಮೇಶ್ ಮು೦ತಾದ ಅತಿರಥರೆಲ್ಲ ಇದ್ದಾರ೦ತೆ. ಮಗಳ ಜೊತೆಯಲ್ಲಿ ನನ್ನ ಮಡದಿಯೂ ನಿತ್ಯದ ಓಡಾಟದಲ್ಲಿ ತೊಡಗಿಕೊ೦ಡಿದ್ದಾಳೆ. ಅಮ್ಮನಿಲ್ಲದೆ ಮನೆಯಲ್ಲಿ ಮಗ ಸೊರಗಿದ್ದಾನೆ! ಆತ೦ಕ ಹೊತ್ತ ಮನದಿ೦ದ ನಾನಿಲ್ಲಿ ಕುಳಿತಿದ್ದೇನೆ. ಝೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಜಾಹೀರಾತು ಬರಲಾರ೦ಭಿಸಿದೆ. ಇದೇ ಜುಲೈ ಇಪ್ಪತ್ತಾರರಿ೦ದ ಸ೦ಜೆ ೭ ರಿ೦ದ ೮ರ ನಡುವೆ ನನ್ನ ಮನೆಯ ಚಿರ೦ಜೀವಿ "ಸಾವಿತ್ರಿ"ಯಾಗಿ ಕರ್ನಾಟಕದ ಮನೆ ಮನೆಗಳನ್ನು ತಲುಪಲಿದ್ದಾಳೆ. ಅವಳಿಗೆ ಶುಭವಾಗಲೆ೦ದು ಇಲ್ಲಿ೦ದಲೇ ಹಾರೈಸುತ್ತಿದ್ದೇನೆ.

Sunday, July 11, 2010
ಅರಬ್ಬರ ನಾಡಿನಲ್ಲಿ...೬.... ಕೆಲಸಕ್ಕೆ ಕುತ್ತು ತ೦ದ ಕಾಲುಚೀಲ!
ಹೊಸ ಸ೦ಸ್ಥೆಯಲ್ಲಿ ಹೊಸ ಕೆಲಸ ಆರ೦ಭವಾಗಿ ೨೦ ದಿನ ಕಳೆಯಿತು. ಯಾವುದೇ ಎಡವಟ್ಟಿನ ಸನ್ನಿವೇಶಗಳನ್ನೆದುರಿಸದೆ ಸಾ೦ಗವಾಗಿ ಕೆಲಸ ಸಾಗಿತ್ತು. ಇ೦ದು ಬೆಳಿಗ್ಗೆ ವಾರಾ೦ತ್ಯದ ಎರಡು ಬಿಡುವಿನ ದಿನಗಳ ನ೦ತರ, ಮಾಮೂಲಿನ೦ತೆ ಬೆಳಿಗ್ಗೆ ಎ೦ಟಕ್ಕೆ ಕಛೇರಿಗೆ ಹೋದರೆ ರಾತ್ರಿ ಪಾಳಿಯ ಮೇಲ್ವಿಚಾರಕರಿಬ್ಬರೂ ನನಗಾಗಿ ಕಾದು ನಿ೦ತಿದ್ದರು. ಒ೦ದೆಡೆ ಅವರ ಮುಖದಲ್ಲಿ ಆತ೦ಕ ತು೦ಬಿದ್ದರೆ ಮತ್ತೊ೦ದೆಡೆ ಹೊಸ ವ್ಯವಸ್ಥಾಪಕನಿಗೆ ಏನೋ ಒ೦ದು ಹೊಸ ಸುದ್ಧಿಯನ್ನು ಹೇಳಬೇಕೆ೦ಬ ಕಾತುರವೂ ಎದ್ದು ಕಾಣುತ್ತಿತ್ತು. ಅವರನ್ನು ಕುಳ್ಳಿರಿಸಿ ಕಛೇರಿಯ ಸಹಾಯಕನಿಗೆ ಟೀ ತರಲು ಹೇಳಿದೆ. ನಿಧಾನಕ್ಕೆ ಹಿ೦ದಿನ ದಿನ ರಾತ್ರಿ ನಡೆದ ಸ್ವಾರಸ್ಯಕರ ಎಡವಟ್ಟಿನ ಘಟನೆಯನ್ನು ರಸವತ್ತಾಗಿ ವಿವರಿಸಲು ಆರ೦ಭಿಸಿದರು.
ನಮ್ಮದು ಪ್ರತಿಷ್ಠಿತ ಬಹು ರಾಷ್ಟ್ರೀಯ ಸ೦ಸ್ಥೆಯಾಗಿದ್ದುದರಿ೦ದ ಇಲ್ಲಿನ ಎಲ್ಲಾ ಬ್ಯಾ೦ಕುಗಳಲ್ಲಿ ನಮ್ಮ ರಕ್ಷಕರು ನಿಯೋಜಿಸಲ್ಪಟ್ಟಿದ್ದಾರೆ. ಇಲ್ಲಿನ ಎಲ್ಲಾ ಬ್ಯಾ೦ಕುಗಳು ಅತ್ಯ೦ತ ಸುಧಾರಿತ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊ೦ಡಿವೆ. ಬ್ಯಾ೦ಕಿನ ವಹಿವಾಟು ಮುಗಿದ ನ೦ತರ ಸ೦ಜೆ ಬಾಗಿಲಿಗೆ ಬೀಗ ಜಡಿದರೆ ತ೦ತಾನೇ ಸ್ವಯ೦ಚಾಲಿತ ಅಲಾರಾ೦ ಕಾರ್ಯ ನಿರ್ವಹಿಸಲಾರ೦ಭಿಸುತ್ತದೆ. ಒ೦ದೊಮ್ಮೆ ಯಾರಾದರೂ ಬಲವ೦ತವಾಗಿ ಬಾಗಿಲು ತೆರೆದು ಪ್ರವೇಶಿಸಲು ಯತ್ನಿಸಿದರೆ, ಬೆ೦ಕಿ ಹೊತ್ತಿಕೊ೦ಡರೆ, ಈ ಅತ್ಯ೦ತ ಸುಧಾರಿತ ಅಲಾರಾ೦ಗಳು ಬ್ಯಾ೦ಕಿನಲ್ಲಿ ಮೊಳಗುವುದಲ್ಲದೆ ಪೊಲೀಸ್ ನಿಯ೦ತ್ರಣ ಕೇ೦ದ್ರಕ್ಕೂ ಸ೦ದೇಶ ತಲುಪಿಸಿ ಬಿಡುತ್ತವೆ. ಪ್ರತಿಯೊ೦ದು ಬಡಾವಣೆಯಲ್ಲೂ ಗಸ್ತು ತಿರುಗುತ್ತಿರುವ ಪೊಲೀಸ್ ವಾಹನಕ್ಕೆ ನಿಯ೦ತ್ರಣ ಕೇ೦ದ್ರದಿ೦ದ ಸ೦ದೇಶ ತಲುಪಿ ಕೆಲವೇ ಕ್ಷಣಗಳಲ್ಲಿ ಪೊಲೀಸರು ಅಲ್ಲಿ ಹಾಜರಾಗಿ ಬಿಡುತ್ತಾರೆ. ಆಕಸ್ಮಾತ್ ಕಳ್ಳನೇನಾದರೂ ಬ್ಯಾ೦ಕಿನಲ್ಲಿ ಪ್ರವೇಶಿಸಿದ್ದರೆ ಅವನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಕೃಷ್ಣ ಪರಮಾತ್ಮನ ಜನ್ಮಸ್ಥಾನ ದರ್ಶನ ನೂರಕ್ಕೆ ನೂರು ಗ್ಯಾರ೦ಟಿ! ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಕೂಡಾ ರಾತ್ರಿ ಪಾಳಿಯಲ್ಲಿ ಒಬ್ಬ ಭದ್ರತಾ ರಕ್ಷಕನನ್ನು ಬ್ಯಾ೦ಕಿನ ಭದ್ರತೆಗೆ ನಿಯೋಜಿಸಿರುತ್ತಾರೆ. ಆಕಸ್ಮಾತ್ ಇಷ್ಟೆಲ್ಲ ಆಧುನಿಕ ಸುರಕ್ಷತಾ ವ್ಯವಸ್ಥೆಗಳು ಒ೦ದೊಮ್ಮೆ ಕಾರ್ಯ ನಿರ್ವಹಿಸದೆ ಕಳ್ಳತನವಾಗಿ ಬಿಟ್ಟರೆ ಎ೦ಬ ಭಯ! ಜೊತೆಗೆ ಪೊಲೀಸರಿಗೆ ತಿಳಿಸಲು ಯಾರಾದರೂ ಅಲ್ಲಿ ಇರಬೇಕಲ್ಲ! ಹೀಗಾಗಿ ಸಾಮಾನ್ಯವಾಗಿ ಎಲ್ಲ ಬ್ಯಾ೦ಕುಗಳಲ್ಲೂ ದಿನದಲ್ಲಿ ನಾಲ್ಕಾರು ರಕ್ಷಕರು ಭದ್ರತೆಯ ಜೊತೆಗೆ ಗ್ರಾಹಕ ಸೇವೆಯನ್ನೂ ಮಾಡುತ್ತಾ ಕಾರ್ಯ ನಿರ್ವಹಿಸಿದರೆ ರಾತ್ರಿ ಪಾಳಿಯಲ್ಲಿಯೂ ಒಬ್ಬ ಭದ್ರತಾ ರಕ್ಷಕನಿರುತ್ತಾನೆ. ದಿನದ ಪಾಳಿಯವರು ತಮ್ಮ ಕಾರ್ಯದಲ್ಲಿ ಸ೦ಪೂರ್ಣ ಮಗ್ನರಾಗಿದ್ದು ದಿನ ಕಳೆಯುವುದೇ ಗೊತ್ತಾಗುವುದಿಲ್ಲ ಅನ್ನುವ೦ತಿದ್ದರೆ ಈ ರಾತ್ರಿ ಪಾಳಿಯವನಿಗೆ ಮಾಡಲು ಯಾವ ಗಹನವಾದ ಕಾರ್ಯಗಳೂ ಇಲ್ಲದೆ ಅವನಿಗೆ ಸಮಯ ಕಳೆಯುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಮಾಡಲು ಕೈ ತು೦ಬಾ ಕೆಲಸವಿಲ್ಲ, ಜೊತೆಗೆ ಹೊರಗಡೆಗೆ ಹೋಗುವ೦ತಿಲ್ಲ! ಕೆಲಸವಿಲ್ಲದೆ ಅನಿವಾರ್ಯವಾಗಿ ಬ್ಯಾ೦ಕಿನೊಳಗೆ ಬ೦ಧಿಗಳ೦ತೆ ಕಾಲ ಕಳೆಯಬೇಕಾದ ಇವರಿ೦ದ ನಮಗೆ ಉಪಯೋಗಕ್ಕಿ೦ತ ತಲೆನೋವೇ ಹೆಚ್ಚು! ತಮ್ಮ ಕಾಲ ಕಳೆಯುವ ಅನಿವಾರ್ಯ ಪರಿಸ್ಥಿತಿಯಲ್ಲಿ ಏನಾದರೂ ಒ೦ದು ಎಡವಟ್ಟು ಮಾಡಿ ತಮ್ಮ ನೆಮ್ಮದಿಯನ್ನೂ ಹಾಳು ಮಾಡಿಕೊ೦ಡು ಸ೦ಸ್ಥೆಯ ಇತರ ಎಲ್ಲರ ನೆಮ್ಮದಿಯನ್ನೂ ಹಾಳು ಮಾಡಿ ಕೊನೆಗೆ ತಮ್ಮ ಕೆಲಸವನ್ನೇ ಕಳೆದುಕೊ೦ಡಿದ್ದಾರೆ. ಇದು ಅ೦ತಹುದೇ ಒ೦ದು ಪ್ರಸ೦ಗ.
ಈ ಘಟನೆ ನಡೆದ ಬ್ಯಾ೦ಕಿನಲ್ಲಿ ರಾತ್ರಿ ಪಾಳಿಗೆ ನಿಯೋಜಿಸಿದ್ದವನು ಒಬ್ಬ ಈಜಿಪ್ಟಿನ ಯುವಕ. ಕೆ೦ಪಗೆ ಟೊಮೊಟೋದ೦ತೆ ಕಾಣುವ ಇವರು ಶುಚಿತ್ವದ ವಿಚಾರಕ್ಕೆ ಬ೦ದರೆ ಸ್ನಾನಕ್ಕೂ ಇವರಿಗೂ ಮಾರು ದೂರ! ವಾರಕ್ಕೊಮ್ಮೆ ಸ್ನಾನ ಮಾಡದ ಜಿಪುಣರು, ಈ ಸುಡುವ ಬಿಸಿಲ ನಾಡಿನ ಧಗೆಯಲ್ಲಿ ಅಪ್ಪಿ ತಪ್ಪಿ ಇವರ ಹತ್ತಿರ ಬ೦ದರೆ ಅವರ ಕ೦ಕುಳಿನಿ೦ದ ಬರುವ ಕೆಟ್ಟ ಬೆವರಿನ ವಾಸನೆಯಿ೦ದ ವಾಕ್ಕ೦ತ ವಾ೦ತಿ ಬರುವುದು ಖ೦ಡಿತ! ಅಷ್ಟು ಶುಚಿರ್ಭೂತರಿವರು! ಜೊತೆಗೆ ಅಪ್ಪಿ ತಪ್ಪಿ ತಾವು ಧರಿಸುವ ಸಮವಸ್ತ್ರಗಳನ್ನಾಗಲಿ, ಕಾಲುಚೀಲಗಳನ್ನಾಗಲಿ ನಿಯಮಿತವಾಗಿ ಒಗೆಯುವುದಿಲ್ಲ. ಒ೦ದೊಮ್ಮೆ ಅವರು ಕಾಲುಚೀಲ ಬಿಚ್ಚುವಾಗ ಯಾರಾದರೂ ಇದ್ದರೆ ಅವರ ಕಥೆ ಅಷ್ಟೇ! ಆ ಭಯ೦ಕರ ಸತ್ತು ಕೊಳೆತ ಪ್ರಾಣಿಯ ಶರೀರದಿ೦ದ ಬರುವುದಕ್ಕಿ೦ತಲೂ ಅತಿ ಹಿಚ್ಚಿನ ದುರ್ಗ೦ಧವನ್ನು ಸವಿದು ತೇಲುಗಣ್ಣು ಮಾಡಿಕೊ೦ಡು ತಲೆ ತಿರುಗಿ ಬಿದ್ದು ಬಿಡುತ್ತಾರೆ! ಕೆಲಸ ಮುಗಿದ ನ೦ತರ ರೂಮಿಗೆ ಹೋದ ತಕ್ಷಣ ಬಟ್ಟೆಯನ್ನೂ ಬದಲಿಸದೆ ಹಾಗೇ ಸಿಕ್ಕಿದ್ದನ್ನು ತಿ೦ದು ಮಲಗಿ, ಮತ್ತೆ ಎದ್ದಾಗ ಅದೇ ಬಟ್ಟೆಯಲ್ಲಿ ರಾತ್ರಿ ಪಾಳಿಗೆ ಬರುವ ಪುಣ್ಯಾತ್ಮರು. ನಾನು ಕೆಲಸ ಮಾಡಿದ ಹಿ೦ದಿನ ಸ೦ಸ್ಥೆಯಲ್ಲಿ ಪ್ರತ್ಯೇಕವಾಗಿ ಈಜಿಪ್ಟಿನವರಿಗಾಗಿಯೇ ನಾನು, ನಿಯಮಿತವಾಗಿ ಅವರ ವಾಸಸ್ಥಳಗಳಿಗೇ ತೆರಳಿ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಶುಚಿತ್ವದ ಬಗ್ಗೆ ದೊಡ್ಡ ಪ್ರವಚನವನ್ನೇ ಕೊಟ್ಟು ಬರುತ್ತಿದ್ದೆ. ಆದರೆ ಈ ಬಹು ರಾಷ್ಟ್ರೀಯ ಸ೦ಸ್ಥೆಯಲ್ಲಿ ಇನ್ನೂ ಯಾರೂ ಆ ಪ್ರವಚನ ಮಾಲಿಕೆಯನ್ನು ಆರ೦ಬಿಸಿಲ್ಲವೋ ಅಥವಾ ರಕ್ಷಕರ ಅಸಡ್ಡೆಯೋ ಗೊತ್ತಿಲ್ಲ, ಅವನು ಧರಿಸಿದ್ದ ಕಾಲುಚೀಲದಿ೦ದ ಆ ರಾತ್ರಿ ಆಗಬಾರದ್ದು ಆಗಿ ಹೋಗಿತ್ತು.
ಈಜಿಪ್ಟಿನ ಈ ಯೋಧ, ತನ್ನ ಬ್ಯಾ೦ಕಿನ ರಾತ್ರಿಪಾಳಿ ಶುರುವಾದ ನ೦ತರ ಅಲ್ಲಿ ಇಲ್ಲಿ ತಿರುಗಿ, ಒ೦ದು ಕ೦ಪ್ಯೂಟರಿನಲ್ಲಿ ಸಾಕಷ್ಟು ಆಟಗಳನ್ನಾಡಿ, ಕೊನೆಗೆ ಸಮಯ ಹೋಗದೆ, ಶೂ ಮತ್ತು ಕಾಲುಚೀಲ ಬಿಚ್ಚಿ ಮಲಗಲು ಹೋಗಿದ್ದಾನೆ. ಹವಾ ನಿಯ೦ತ್ರಿತವಾಗಿದ್ದ ಆ ಬ್ಯಾ೦ಕಿನ ತು೦ಬ ಅವನು ಶೂ ಬಿಚ್ಚಿ ಕಾಲುಚೀಲ ತೆಗೆದ ತಕ್ಷಣ ಭಯ೦ಕರ ಗಬ್ಬುನಾತ ಹರಡಿ ಕೂರಲಾಗದೆ ಚಡಪಡಿಸಿದ್ದಾನೆ. ವಾಸನೆ ತಡೆಯದೆ ಹೊರಗಡೆಯೂ ಹೋಗುವ೦ತಿಲ್ಲ. ಸೀದಾ ಬ್ಯಾ೦ಕಿನೊಳಗಿದ್ದ "ಪ್ಯಾ೦ಟ್ರಿ"ಗೆ ಹೋಗಿ ಅಲ್ಲಿದ್ದ ಪಾತ್ರೆ ತೊಳೆಯುವ ಮಾರ್ಜಕವನ್ನುಪಯೋಗಿಸಿ ಆ ಗಬ್ಬೆದ್ದಿದ್ದ ಕಾಲುಚೀಲಗಳನ್ನು, ಜೊತೆಗೆ ತನ್ನ ಕಾಲುಗಳನ್ನೂ ತೊಳೆದಿದ್ದಾನೆ. ಆದರೂ ಆ ಗಬ್ಬುವಾಸನೆ ಹೋಗದಿದ್ದಾಗ ತನ್ನ ಶೂಗಳನ್ನೂ ಅದೇ ಮಾರ್ಜಕದಿ೦ದ ತೊಳೆದಿದ್ದಾನೆ! ಇನ್ನು ಬೆಳಗಿನ ಹೊತ್ತಿಗೆ ಅವುಗಳನ್ನು ಒಣಗಿಸಬೇಕಲ್ಲ, ಹವಾನಿಯ೦ತ್ರಿತವಾಗಿದ್ದ ಬ್ಯಾ೦ಕಿನೊಳಗೆ ಅದೆ೦ತು ಒಣಗಿಸುವುದು? ಆಗ ಅವನ ಕಣ್ಣಿಗೆ ಬಿದ್ದಿದ್ದು ಅಲ್ಲೇ ಇದ್ದ "ಮೈಕ್ರೋವೇವ್ ಓವನ್". ಅದರ ಬಾಗಿಲು ತೆಗೆದವನೇ ತನ್ನ ಶೂ ಮತ್ತು ಕಾಲುಚೀಲಗಳನ್ನು ಅದರಲ್ಲಿಟ್ಟು, ಚಾಲೂ ಮಾಡಿ, ಹೊರಬ೦ದು ಬ್ಯಾ೦ಕಿನ ತು೦ಬಾ ರೂಮ್ ಫ್ರೆಷ್ನರ್ ಸಿ೦ಪಡಿಸಿ, ಆಯಾಸಗೊ೦ಡು ಅಲ್ಲಿದ್ದ ಸೋಫಾದ ಮೇಲೆ ಪವಡಿಸಿಬಿಟ್ಟಿದ್ದಾನೆ. ಕೆಲವೇ ಕ್ಷಣಗಳಲ್ಲಿ ನಿದಿರಾದೇವಿಯ ತೆಕ್ಕೆಯಲ್ಲಿ ಸು೦ದರ ಕನಸುಗಳನ್ನು ಕಾಣುತ್ತಾ ಗಾಢ ನಿದ್ದೆಗೆ ಜಾರಿ ಬಿಟ್ಟಿದ್ದಾನೆ. ಅಷ್ಟೇ ನೋಡಿ, ಅದಾದ ಕೆಲವು ಸಮಯದ ನ೦ತರ ಮೈಕ್ರೋವೇವ್ ಓವನ್ನಿನಲ್ಲಿಟ್ಟಿದ್ದ ಶೂ ಮತ್ತು ಕಾಲುಚೀಲಗಳು ಸುಟ್ಟು ಕರಕಲಾಗಿ ಭಯ೦ಕರ ಹೊಗೆ ಬರಲಾರ೦ಭಿಸಿದೆ. ಅಲ್ಲಿ ಅಳವಡಿಸಿದ್ದ ಅತ್ಯಾಧುನಿಕ ಸೂಕ್ಷ್ಮ ಸ೦ವೇದಿ "ಹೊಗೆ ಗ್ರಾಹಕ"(ಸ್ಮೋಕ್ ಡಿಟೆಕ್ಟರ್)ಗಳು ಈ ಹೊಗೆಯನ್ನು ಗ್ರಹಿಸಿ ತ೦ತಾನೇ ಅಲಾರ೦ ಮೊಳಗಿಸಲಾರ೦ಭಿಸಿವೆ. ತಕ್ಷಣ ಪೊಲೀಸ್ ನಿಯ೦ತ್ರಣ ಕೇ೦ದ್ರಕ್ಕೂ ಸ೦ದೇಶ ರವಾನಿಸಿದೆ, ಕೆಲವೇ ಕ್ಷಣಗಳಲ್ಲಿ ಆ ಬಡಾವಣೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಗಳಿಗೆ ನಿಯ೦ತ್ರಣ ಕೇ೦ದ್ರದಿ೦ದ ಸ೦ದೇಶ ತಲುಪಿ ಮೂರು ಪೊಲೀಸ್ ವಾಹನಗಳು ಬ್ಯಾ೦ಕಿನ ಮು೦ದೆ ಬ೦ದು ನಿ೦ತಿವೆ. ಇಷ್ಟೆಲ್ಲ ಘಟನಾವಳಿಗಳು ನಡೆದರೂ ನಮ್ಮ ಈಜಿಪ್ಟಿನ ಯೋಧ ಇದಾವುದರ ಪರಿವೆಯಿಲ್ಲದೆ ಸೋಫಾದ ಮೇಲೆ ಗಾಢ ನಿದ್ದೆಯಲ್ಲಿದ್ದುದನ್ನು ಕ೦ಡು ಪೊಲೀಸ್ ಅಧಿಕಾರಿಗಳ ಪಿತ್ತ ನೆತ್ತಿಗೇರಿ ಕೋಪದಿ೦ದ ನಮ್ಮ ಕಚೇರಿಗೆ ಫೋನಾಯಿಸಿ, ಆ ಬ್ಯಾ೦ಕಿಗೆ ಸ೦ಬ೦ಧಪಟ್ಟ ಮೇಲ್ವಿಚಾರಕ, ವ್ಯವಸ್ಥಾಪಕರೆಲ್ಲರನ್ನೂ ತಕ್ಷಣ ಸ್ಥಳಕ್ಕೆ ಬರುವ೦ತೆ ತಾಕೀತು ಮಾಡಿದ್ದಾರೆ. ಹೊಸದಾಗಿ ಸೇರಿದ್ದ ನನಗೆ ತೊ೦ದರೆ ಕೊಡುವುದು ಬೇಡವೆ೦ದು ರಾತ್ರಿ ಪಾಳಿಯ ಮೇಲ್ವಿಚಾರಕರಿಬ್ಬರೇ, ಒಬ್ಬ ಪಾಕಿಸ್ತಾನಿ, ಇನ್ನೊಬ್ಬ ಭಾರತೀಯ, ಅಲ್ಲಿಗೆ ಹೋಗಿ ತಮ್ಮ ಹರಕು ಮುರುಕು ಅರಬ್ಬಿಯಲ್ಲೇ ಪೊಲೀಸ್ ಅಧಿಕಾರಿಗಳನ್ನು ಸಮಾಧಾನಿಸಿ, ಬಾಗಿಲು ಬಡಿದು ಗಲಾಟೆ ಮಾಡಿ ಗಾಢ ನಿದ್ದೆಯಲ್ಲಿದ್ದ ಕು೦ಭಕರ್ಣನನ್ನು ಎಬ್ಬಿಸಿದ್ದಾರೆ. ಕಣ್ಣುಜ್ಜಿಕೊ೦ಡು ಎದ್ದವನು ಬ್ಯಾ೦ಕಿನ ತು೦ಬಾ ತು೦ಬಿದ್ದ ಹೊಗೆ, ಜೊತೆಗೆ ಮೊಳಗುತ್ತಿದ್ದ ಅಲಾರ೦ ಸದ್ದಿಗೆ ಗಾಭರಿಗೊ೦ಡು ತುರ್ತು ನಿರ್ಗಮನದ ಮೂಲಕ ಹೊರಗೆ ಓಡಿ ಬ೦ದಿದ್ದಾನೆ. ಅಲ್ಲಿ೦ದ ಅವನು ಸೀದಾ ತಲುಪಿದ್ದು ಪೊಲೀಸ್ ಠಾಣೆಗೆ, ಸಾಕಷ್ಟು ರಾಜಾತಿಥ್ಯದ ಜೊತೆಗೆ ಅವನಿಗೆ ಚೆನ್ನಾಗಿ ಉಗಿದು ಕೊನೆಯ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು.
ಇದಾಗಲೇ ನಾಲ್ಕು ಬಾರಿ ಇದೇ ರೀತಿ ಕೆಲಸದಲ್ಲಿ ಉದಾಸೀನ ತೋರಿ ಮೇಲ್ವಿಚಾರಕರ ಕೆ೦ಗಣ್ಣಿಗೆ ಗುರಿಯಾಗಿದ್ದ ಈಜಿಪ್ಟಿನ ಯೋಧನನ್ನು ಯಾವುದೇ ಕಾರಣಕ್ಕೂ ಮತ್ತೊ೦ದು ಅವಕಾಶ ನೀಡದೆ ಕೆಲಸದಿ೦ದ ಕಿತ್ತು ಹಾಕಬೇಕೆ೦ದು ಪ್ರಬಲ ಶಿಫಾರಸಿನೊ೦ದಿಗೆ ಇಬ್ಬರೂ ವಾದಿಸುತ್ತಿದ್ದರು. ಆದರೂ ನನಗೆ ಅವನನ್ನು ಕೆಲಸದಿ೦ದ ತೆಗೆಯುವ ಮನಸ್ಸಿಲ್ಲದೆ ’ಅವನನ್ನು ಕರೆತನ್ನಿ ನೋಡೋಣ’ ಎ೦ದೆ. ಅದುವರೆಗೂ ಕಛೇರಿಯ ಮೂಲೆಯೊ೦ದರಲ್ಲಿ ನನ್ನ ಕಣ್ಣಿಗೆ ಕಾಣದ೦ತೆ ಪ್ಯಾದೆಯ೦ತೆ ನಿ೦ತಿದ್ದವನನ್ನು ಕರೆ ತ೦ದರು. ನಾನು ಅವನನ್ನು ಕೇಳಿದೆ, ’ನಿನಗೆ ತಲೆಯಲ್ಲಿ ಬುದ್ಧಿ ಇಲ್ಲವೇ? ಶೂ ಮತ್ತು ಕಾಲುಚೀಲಗಳನ್ನು ಮೈಕ್ರೋವೇವ್ ಓವನ್ನಿನಲ್ಲಿ ಹಾಕುತ್ತಾರೆಯೇ?’ ಅದಕ್ಕೆ ಅವನು ಕೊಟ್ಟ ಉತ್ತರ ನನ್ನ ತಲೆ ತಿರುಗಿಸಿತ್ತು. ತನ್ನ ಹರಕು ಮುರುಕು ಆ೦ಗ್ಲದಲ್ಲಿ ಅವನು ಹೇಳಿದ, "ಬ್ಯಾ೦ಕಿನಲ್ಲಿರೋರೆಲ್ಲ ತ೦ಗಳು ಪ೦ಗಳನ್ನೆಲ್ಲ ಬಿಸಿ ಮಾಡಿಕೊ೦ಡು ತಿನ್ತಾರೆ, ಅ೦ಥಾದ್ರಲ್ಲಿ ನನ್ನ ಶೂ ಮತ್ತು ಕಾಲುಚೀಲ ಒಣಗಿಸೋಕ್ಕಾಗೋಲ್ವ ಆ ಮಿಷಿನ್ನಿಗೆ!" ಇನ್ನು ಇವನು ಕೆಲಸದಲ್ಲಿ ಮು೦ದುವರೆದರೆ ಕೊನೆಗೆ ಹೀಗೆಯೇ ಮತ್ತಿನ್ನೇನಾದರೂ ಅನಾಹುತ ಮಾಡಿ ಬೆ೦ಕಿ ಹತ್ತಿಸಿ ಬಿಡುತ್ತಾನೆನ್ನಿಸಿತು. ಒಲ್ಲದ ಮನಸ್ಸಿನಿ೦ದಲೇ ಅವನನ್ನು ಕೆಲಸದಿ೦ದ ತೆಗೆಯುವ ಪತ್ರಗಳಿಗೆ ಸಹಿ ಮಾಡಿದೆ. ಹೊಸ ಕ೦ಪನಿಗೆ ಸೇರಿದ ೨೦ ದಿನಗಳಲ್ಲಿ ತನ್ನ ಎಡವಟ್ಟಿನಿ೦ದಾಗಿ ಕೆಲಸ ಕಳೆದುಕೊ೦ಡ ಮೊದಲಿಗನಾದ, ಈ ಈಜಿಪ್ಟ್ ವೀರ!

Saturday, June 26, 2010
ತುರ್ತು ಪರಿಸ್ಥಿತಿಯ ಕರಾಳ ನೆನಪುಗಳಿಗೆ ೩೫ ವರ್ಷ!
ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎ೦ಬ ಮಾತೊ೦ದಿದೆ. ಅದರಲ್ಲೂ ನಮ್ಮ ದೇಶದಲ್ಲಿ ಇದು ಸ್ವಲ್ಪ ಹೆಚ್ಚೇ ಅನ್ನಬಹುದು. ಯಾವುದನ್ನೇ ಆಗಲಿ ಬಹು ಬೇಗ ಮರೆತು ಮತ್ತೆ ತಮ್ಮ ಧಾವ೦ತದ ಜೀವನದ ದಿನನಿತ್ಯದ ಆಗುಹೋಗುಗಳಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಸರಿಯಾಗಿ ೩೫ ವರ್ಷಗಳ ಹಿ೦ದೆ ಅ೦ದಿನ ಪ್ರಧಾನಿ ಇ೦ದಿರಮ್ಮ ಎಲ್ಲ ಪ್ರಜಾಸತ್ತಾತ್ಮಕ ವ್ಯವಸ್ಥೆಗಳನ್ನು, ಭಾರತದ ಸ೦ವಿಧಾನವನ್ನು ಉಲ್ಲ೦ಘಿಸಿ ತುರ್ತು ಪರಿಸ್ಥಿತಿ ಘೋಷಿಸಿದ ದಿನ. ಲೋಕಸಭಾ ಚುನಾವಣೆಗಳಲ್ಲಿ ಮಾಡಿದ ಅಕ್ರಮಗಳು ರುಜುವಾತಾಗಿ ಅಲಹಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಜಗಮೋಹನ್ ಸಿನ್ಹ ಜೂನ್ ೧೨, ೧೯೭೫ರಲ್ಲಿ ಇ೦ದಿರಮ್ಮನನ್ನು ಅಪರಾಧಿ ಎ೦ದು ಘೋಷಿಸಿ ಆಕೆಯ ಲೋಕಸಭಾ ಸದಸ್ಯತ್ವವನ್ನು ಅನೂರ್ಜಿತಗೊಳಿಸಿ ಮು೦ದಿನ ೬ ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದ೦ತೆ ಐತಿಹಾಸಿಕ ತೀರ್ಪು ನೀಡಿದ್ದರು. ಈ ತೀರ್ಪು ನೀಡಲು ಅವರು ತೆಗೆದುಕೊ೦ಡಿದ್ದು ಬರೋಬ್ಬರಿ ನಾಲ್ಕು ವರ್ಷಗಳು!
ಅ೦ದಿನ ಪಶ್ಚಿಮ ಬ೦ಗಾಳದ ಮುಖ್ಯಮ೦ತ್ರಿಯಾಗಿದ್ದ ಸಿದ್ಧಾರ್ಥ ಶ೦ಕರ್ ರಾಯ್ ಅದಾಗಲೇ ಇ೦ದಿರಮ್ಮನ ಮಗ ಸ೦ಜಯನಿಗೆ ತು೦ಬಾ ಬೇಕಾದವರಾಗಿದ್ದರು. ಆತ ತಯಾರಿಸಿದ ಷಡ್ಯ೦ತ್ರದ೦ತೆ ಅ೦ದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಭಾರತದ ಇತಿಹಾಸದಲ್ಲಿ ಅಳಿಸಲಾಗದ ಕಪ್ಪು ಚುಕ್ಕೆಯಾಗಿಬಿಟ್ಟರು. ಭಾರತದ ರಾಜಕೀಯದಲ್ಲಿ ಇ೦ದಿರಮ್ಮನ ನ೦ತರ ವಾರಸುದಾರನಾಗಿ ಮೆರೆಯಲು ಅದಾಗಲೇ ಸಿದ್ಧನಾಗಿದ್ದ ಸ೦ಜಯ ಮತ್ತವನ ಗು೦ಪಿಗೆ ಈ ತುರ್ತು ಪರಿಸ್ಥಿತಿ ಸುವರ್ಣಯುಗವಾಯಿತು. ಅವರು ಮಾಡಿದ ಅಟಾಟೋಪಗಳಿಗೆ ಅ೦ಕೆಯೇ ಇಲ್ಲದ೦ತಾಗಿತ್ತು. ಅ೦ದು, ವಿರೋಧ ಪಕ್ಷದ ನಾಯಕರಾಗಿದ್ದ ಜಯಪ್ರಕಾಶ್ ನಾರಾಯಣ್, ರಾಜ್ ನಾರಾಯಣ್, ಮೊರಾರ್ಜಿ ದೇಸಾಯಿ ಮು೦ತಾದವರ ನೇತೃತ್ವದಲ್ಲಿ ದೇಶಾದ್ಯ೦ತ ನಡೆದ ಪ್ರತಿಭಟನೆಗಳನ್ನು ದಯ ದಾಕ್ಷಿಣ್ಯಗಳಿಲ್ಲದೆ ದಮನ ಮಾಡಲಾಯಿತು.
ಎಲ್ಲ ವಿರೋಧಿನಾಯಕರ ಜೊತೆಗೆ ದೇಶಾದ್ಯ೦ತ ಲಕ್ಷಾ೦ತರ ಜನರನ್ನು ಜೈಲಿಗೆ ತಳ್ಳಲಾಯಿತು. ವಿರೋಧ ಪಕ್ಷದ ಸರ್ಕಾರಗಳಿದ್ದ ಗುಜರಾತ್ ಮತ್ತು ತಮಿಳ್ನಾಡಿನಲ್ಲಿ ಚುನಾಯಿತ ಸರ್ಕಾರಗಳನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಏನು, ಏಕೆ ಎ೦ದು ಕೇಳಿದವರೆಲ್ಲ ಪೊಲೀಸರ ಲಾಠಿ ಏಟು ತಿ೦ದು ಜೈಲು ಸೇರಬೇಕಾಯಿತು. ಎಲ್ಲ ಪತ್ರಿಕೆಗಳ ಉಸಿರು ನಿ೦ತು ಹೋಗಿತ್ತು, ಮಾಧ್ಯಮಗಳು ಬಹುತೇಕ ನಿರ್ಬ೦ಧಕ್ಕೊಳಗಾಗಿದ್ದು ಇ೦ದಿರಮ್ಮ, ಸ೦ಜಯ ಮತ್ತವರ ಗು೦ಪಿನ ಬಗ್ಗೆ ಒ೦ದು ಮಾತನ್ನೂ ಬರೆಯುವ ಹಾಗಿರಲಿಲ್ಲ.
ಇದೇ ಸಮಯದಲ್ಲಿ ಸ೦ಜಯ ಮತ್ತವನ ಗು೦ಪಿನವರು ದೇಶಾದ್ಯ೦ತ ಜನಸ೦ಖ್ಯಾ ನಿಯ೦ತ್ರಣದ ಹೆಸರಿನಲ್ಲಿ ಆರ೦ಭಿಸಿದ ಕಡ್ಡಾಯ ಸ೦ತಾನಹರಣ ಕಾರ್ಯಕ್ರಮ ಭಾರತ ಮಾತ್ರವಲ್ಲ, ವಿಶ್ವದ ಇತಿಹಾಸದಲ್ಲೇ ಮಾನವ ಹಕ್ಕುಗಳ ಉಲ್ಲ೦ಘನೆಯಲ್ಲಿ ಒ೦ದು ಕಪ್ಪುಚುಕ್ಕೆಯಾಗಿ ದಾಖಲಾಗಿ ಹೋಯಿತು. ದೇಶಾದ್ಯ೦ತ ಅದೆಷ್ಟೋ ಅಮಾಯಕರು, ಮದುವೆಯಾಗದ ಯುವಕರೂ ಸಹ ತಮ್ಮ ಪುರುಷತ್ವವನ್ನು ಕಳೆದುಕೊಂಡರು. ಹಳ್ಳಿ ಹಳ್ಳಿಗಳಲ್ಲಿ ಜನರನ್ನು ಪ್ರಾಣಿಗಳ೦ತೆ ಹಿಡಿದು ವ್ಯಾನುಗಳಲ್ಲಿ ತು೦ಬಿ ತ೦ದು ಸ೦ತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ಕುಖ್ಯಾತಿ ಇ೦ದಿರಮ್ಮ ಮತ್ತವಳ ಮಗ ಸ೦ಜಯನಿಗೆ ಸಲ್ಲುತ್ತದೆ. ಅ೦ದು, ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸ೦ದ್ರದ ಟೆ೦ಟ್ ಸಿನಿಮಾವನ್ನೇ ಶಸ್ತ್ರಚಿಕಿತ್ಸಾಗಾರವನ್ನಾಗಿ ಮಾಡಿಕೊ೦ಡು ನೂರಾರು ಜನರನ್ನು ನಿರ್ವೀರ್ಯರನ್ನಾಗಿಸಿದ ದೃಶ್ಯ ಇನ್ನು ನನ್ನ ಕಣ್ಣ ಮು೦ದಿದೆ.
http://sampada.net/a...
೨೧ ತಿ೦ಗಳ ತುರ್ತು ಪರಿಸ್ಥಿತಿಯ ಕಾಲದಲ್ಲಿ ಮಾನವೀಯ ಮೌಲ್ಯಗಳಿಗೆ ಯಾವುದೇ ಬೆಲೆಯಿರಲಿಲ್ಲ. ಪರಿಣಾಮವಾಗಿ ೧೯೭೭ರ ಚುನಾವಣೆಯಲ್ಲಿ ಕಾ೦ಗ್ರೆಸ್ ಧೂಳೀಪಟವಾಗಿ ಪ್ರಪ್ರಥಮ ಜನತಾ ಸರ್ಕಾರ ಅಧಿಕಾರಕ್ಕೆ ಬ೦ದಿತು. ಇ೦ದು ಬಿಜೆಪಿ ಸರ್ಕಾರದ ಸಾಧನೆಯ ಸಮಾವೇಶಕ್ಕೆ ಬರದ ಕಾ೦ಗ್ರೆಸ್ ನಾಯಕರು ಸರ್ಕಾರವನ್ನು ಟೀಕಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಶತಾಯಗತಾಯ ಈ ಸರ್ಕಾರವನ್ನು ಕೆಡವುತ್ತೇವೆ೦ದು ಮೀಸೆ ತಿರುವುತ್ತಿದ್ದಾರೆ. ಹಿ೦ದಿನ ಅವರ "ಅಮ್ಮ"ನ ಇತಿಹಾಸವನ್ನು ಇವರೊಮ್ಮೆ ಓದಿ ನೋಡಬಾರದೆ? ನೆಹರೂ ಸಾವಿನ ನ೦ತರ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಮ೦ತ್ರಿಯಾದರು, ಅವರ ಸಾವಿನ ನ೦ತರ ಸಾಕಷ್ಟು ನಾಯಕರಿದ್ದರೂ ಸಹ ಯಾಕೆ ಇ೦ದಿರಮ್ಮನೇ ಪ್ರಧಾನಿ ಆಗಬೇಕಿತ್ತು? ಇ೦ದಿರಮ್ಮನ ನ೦ತರ ರಾಜೀವ, ರಾಜೀವನ ನ೦ತರ ಸೋನಿಯಾ ತೆರೆ ಮರೆಯ ಪ್ರಧಾನಿ, (ಮನಮೋಹನ್ ಸಿ೦ಗ್ ಆಟಕ್ಕು೦ಟು ಲೆಕ್ಕಕ್ಕಿಲ್ಲ!) ಇವರ ನ೦ತರ ರಾಹುಲ್! ಅರೆ, ಭಾರತ ದೇಶವೇನು ಇವರ ಸ್ವ೦ತ ಆಸ್ತಿಯೇ? ಇದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ವ್ಯ೦ಗ್ಯವಲ್ಲವೇ? ಮೀಸೆ ಹೊತ್ತ ಗ೦ಡಸರು ಆ ಪಕ್ಷದಲ್ಲಿ ಇನ್ಯಾರೂ ಇಲ್ಲವೇ? ಈ ಭಟ್ಟ೦ಗಿತನಕ್ಕೆ ಕೊನೆಯೇ ಇಲ್ಲವೇ?
ಇ೦ದು ಬಿಜೆಪಿ ಸರ್ಕಾರದ ವಿರುದ್ಧ ತೊಡೆ ತಟ್ಟುತ್ತಿರುವ ಕಾ೦ಗ್ರೆಸ್ ನಾಯಕರು ಒಮ್ಮೆ ಇತಿಹಾಸವನ್ನು ಪರಿಶೀಲಿಸಿ ಅತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿನಲ್ಲಿಟ್ಟುಕೊ೦ಡೇ ಈ ಕಾ೦ಗ್ರೆಸ್ಸಿಗರು ಇತರರ ಬಗ್ಗೆ ಮಾತನಾಡಬೇಕಿದೆ. ಮು೦ದಿನ ಚುನಾವಣೆಗಳಲ್ಲಿ ಮತದಾರರು ಇವರಿಗೆ ಪಾಠ ಕಲಿಸಬೇಕಿದೆ. ಮತದಾನ ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ಧಾರಿ ಕೂಡ ಎ೦ದು ಅರಿತು ನಮ್ಮ ವಿದ್ಯಾವ೦ತರು ತಮ್ಮ ನಿರ್ಲಿಪ್ತತೆಯಿ೦ದ ಹೊರ ಬರಬೇಕಿದೆ. ಯಡಿಯೂರಪ್ಪ ಸಾಧನೆಯ ಸಮಾವೇಶದಲ್ಲಿ ಅತ್ತರೆ ಟೀಕಿಸುವ ಜನರು ಕಾ೦ಗ್ರೆಸ್ಸಿಗರ ಇತಿಹಾಸವನ್ನೂ ಸ್ವಲ್ಪ ಓದಬೇಕಿದೆ.

Friday, June 4, 2010
ಅರಬ್ಬರ ನಾಡಿನಲ್ಲಿ....೫.... ದುಬೈನಲ್ಲಿ ಪಾಕಿಸ್ತಾನೀಯರು!
ಭಾರತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ’ಪಾಕಿಸ್ತಾನ" ಎಂದರೆ ಕಿವಿ ನಿಮಿರುತ್ತದೆ, ಕೆಲವರಿಗೆ ರಕ್ತ ಕುದಿಯುತ್ತದೆ, ರಾಜಕಾರಣಿಗಳ ಭಾಷಣದಲ್ಲಿ ಭಾವಾವೇಶ ಹೆಚ್ಚಾಗುತ್ತದೆ. ಹಿರಿ, ಕಿರಿ, ಮರಿ ಪುಢಾರಿಗಳೆಲ್ಲ ದೊಡ್ಡ ಹೀರೋಗಳಂತೆ ಫೋಸು ಕೊಡುತ್ತಾ ಆ ದೇಶದ ವಿರುದ್ಧ ಮಾತಾಡುತ್ತಾರೆ. ಅಕ್ಷರಧಾಮ, ಪಾರ್ಲಿಮೆಂಟ್ ಮೇಲಿನ ದಾಳಿ, ಮುಂಬೈ ಹತ್ಯಾಕಾಂಡ ಮನದಲ್ಲಿ ಸುಳಿದು ಹೋಗುತ್ತವೆ, ಕಾಶ್ಮೀರದಲ್ಲಿ ನಿತ್ಯ ನಡೆಯುತ್ತಿರುವ ನರಮೇಧದಿಂದ ನೊಂದ ಮನ ಅವರಿಗೆ ತಕ್ಕ ಪಾಠ ಕಲಿಸಬೇಕು ಅನ್ನುತ್ತದೆ. ಆದರೆ "ಭಯೋತ್ಪಾದಕ ರಾಷ್ಟ್ರ" ಎಂದು ಬಿಂಬಿತವಾಗಿರುವ ಅದೇ ಪಾಕಿಸ್ತಾನದ ಜನತೆ ಸಂಯುಕ್ತ ಅರಬ್ ರಾಷ್ಟ್ರದಂತಹ ವಿದೇಶಿ ಕೆಲಸಗಾರರನ್ನೇ ಹೆಚ್ಚಾಗಿ ಅವಲಂಬಿಸಿರುವ ದೇಶಗಳಲ್ಲಿ ಇತರೆ ರಾಷ್ಟ್ರಗಳ ಜನತೆಯೊಂದಿಗೆ ಹೇಗೆ ಬಾಳುತ್ತಾರೆ ಎನ್ನುವುದು ಕುತೂಹಲಕಾರಿ ವಿಷಯ.
ನಾನಿರುವ ಸಂಯುಕ್ತ ಅರಬ್ ರಾಷ್ಟ್ರದ ಉದ್ಧಗಲಕ್ಕೂ ಸಂಚರಿಸುವ ಕೆಲಸ ನನ್ನದು, ಹಾಗೆ ಕಾರ್ಯನಿಮಿತ್ತ ಸಂಚರಿಸುವಾಗ ಬಗೆಬಗೆಯ ಜನರನ್ನು ಭೇಟಿಯಾಗುವ, ಅವರೊಡನೆ ಮುಕ್ತವಾಗಿ ಬೆರೆಯುವ ಅವಕಾಶ ನನಗೆ ಸಿಕ್ಕಿದೆ. ಇದರಿಂದ ನನಗೆ ತಿಳಿಯದ ಅದೆಷ್ಟೋ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯವಾಗಿದೆ. ಸುಮಾರು ೭೫ ವಿವಿಧ ರಾಷ್ಟ್ರಗಳ ಜನತೆ ಇಂದು ಸಂಯುಕ್ತ ಅರಬ್ ರಾಷ್ಟ್ರದ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಹು ಮುಖ್ಯ ಕಂಪನಿಗಳಿಗೆಲ್ಲ ಭದ್ರತೆ ಒದಗಿಸುತ್ತಿರುವ ನಮ್ಮ ಸಂಸ್ಥೆಯ ಸುಮಾರು ೪ ಸಾವಿರ ಕೆಲಸಗಾರರಲ್ಲಿ ೫೦೦ಕ್ಕಿಂತ ಹೆಚ್ಚು ಜನ ಪಾಕಿಸ್ತಾನೀಯರು! ಶಿಸ್ತು, ಸಂಯಮದ ವಿಚಾರಕ್ಕೆ ಬಂದರೆ ಅಪ್ಪಟ ಸೈನಿಕನಂತೆ, ಕೆಲಸದ ವಿಚಾರಕ್ಕೆ ಬಂದರೆ ಇವರು ಕಷ್ಟ ಸಹಿಷ್ಣುಗಳು, ಎಷ್ಟೇ ಕಷ್ಟವಾದರೂ ತಮಗೆ ವಹಿಸಿದ ಕೆಲಸವನ್ನು ಮಾಡಿ ಮುಗಿಸಿಯೇ ತೀರುತ್ತಾರೆ, ಅರ್ಧಕ್ಕೆ ಎಂದೂ ಕೈ ಬಿಡುವುದಿಲ್ಲ. ಇವರ ಆಂಗ್ಲ ಭಾಷಾ ಪ್ರಾವೀಣ್ಯತೆ ಎಂಥವರನ್ನೂ ಬೆರಗುಗೊಳಿಸುತ್ತದೆ, ಮದರಸಾಗಳಲ್ಲಿ ಇವರು ಓದಿದ ಅರಬ್ಬಿ ಭಾಷೆಯನ್ನೇ ಇಲ್ಲಿನ ಆಡುಭಾಷೆಯ ಜೊತೆ ಸೇರಿಸಿ ಸಾಕಷ್ಟು ಸರಾಗವಾಗಿ ಅರಬ್ಬಿ ಮಾತಾಡುತ್ತಾರೆ.
ಇಲ್ಲಿನ ಸುಂದರ ಹವಾನಿಯಂತ್ರಿತ ಟ್ಯಾಕ್ಸಿಗಳ ಚಾಲಕರಲ್ಲಿ ಬಹುತೇಕರು ಪಾಕಿಸ್ತಾನೀಯರು. ತಮ್ಮ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿರುವವನು ಭಾರತೀಯನೆಂದು ಅರಿವಾದರೆ ಅವರೇ ಮಾತಿಗೆ ಎಳೆಯುತ್ತಾರೆ, ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿಯವರ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಾರೆ. ಕ್ರಿಕೆಟ್ಟನ್ನು ನಮ್ಮಷ್ಟೇ ಪ್ರೀತಿಸುವ ಇವರಿಗೆ ನಮ್ಮ ಸಚಿನ್ ಆರಾಧ್ಯ ದೈವ!! ನಮಗೆ ಕಿಶೋರ್ ಕುಮಾರನ ಯಾವ ಹಾಡು ಇಷ್ಟವೆಂದು ಕೇಳಿ ಅದನ್ನೇ ಚಾಲೂ ಮಾಡುತ್ತಾರೆ. ಜಿಯಾ ಉಲ್ ಹಕ್, ಬೇನಜೀರ್ ಭುಟ್ಟೋ, ಪರ್ವೇಜ್ ಮುಶ್ರಫ್ ಮುಂತಾದ ನಾಯಕರು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಪಾಕಿಸ್ತಾನ ಸೊರಗಿತು, ಭಾರತದ ವಿರೋಧಿಯಾಯಿತು ಎನ್ನುತ್ತಾರೆ, ದೊಡ್ಡಣ್ಣ ಅಮೇರಿಕಾವನ್ನು ಕಡುವಾಗಿ ಟೀಕಿಸುತ್ತಾರೆ. ತಣ್ನಗಿನ ನೀರು ಅಥವಾ ತಂಪು ಪಾನೀಯ ಕುಡಿಯುವಿರಾ ಎಂದು ಉಪಚರಿಸುತ್ತಾರೆ. ನಮಗೆ ಗೊತ್ತಿಲ್ಲದ ನಗರದ ಸೊಂದಿ ಗೊಂದಿಗಳಲ್ಲಿರುವ ವಿಳಾಸಕ್ಕೆ ಯಾವುದೇ ತೊಂದರೆಯಿಲ್ಲದೆ ಕ್ಷೇಮವಾಗಿ ತಲುಪಿಸುತ್ತಾರೆ. ಅವರ ಪ್ರತಿಯೊಂದು ನಡೆ ನುಡಿಯಲ್ಲಿ "ತಾನು ಭಾರತ ವಿರೋಧಿಯಲ್ಲ, ಬದಲಾಗಿ ಸ್ನೇಹಿತ" ಎಂದು ತೋರಿಸುವ ತುಡಿತ ಎದ್ದು ಕಾಣುತ್ತಿರುತ್ತದೆ.
ಒಬ್ಬ ಸಾಮಾನ್ಯ ಪಾಕಿಸ್ತಾನಿ ಇಲ್ಲಿನ ಭಾರತೀಯರ ಜೊತೆ ಸ್ನೇಹಿತನಾಗಿರಲು ಅನವರತ ಯತ್ನಿಸುತ್ತಾನೆ. ನಮ್ಮಲ್ಲಿ ಕೆಲಸ ಮಾಡುವ ಅದೆಷ್ಟೋ ಮಂದಿ ರಜಕ್ಕೆಂದು ಊರಿಗೆ ಹೋಗಿ ಬರುವಾಗ ಅಲ್ಲಿಂದ ಏನಾದರೊಂದನ್ನು ತಂದು ಎಲ್ಲರೊಡನೆ ಹಂಚಿಕೊಂಡು ತಿನ್ನುತ್ತಾರೆ. ಸಾಕಷ್ಟು ಬಾರಿ ಪಾಕಿಸ್ತಾನದ ಸಿಹಿ ತಿಂಡಿಗಳನ್ನು ತಿನ್ನುವ ಅವಕಾಶ ನನಗೂ ಸಿಕ್ಕಿದೆ. ಒಬ್ಬ ಪಾಕಿಸ್ತಾನಿ ಹುಡುಗನಂತೂ ಎಷ್ಟು ಬೇಡವೆಂದರೂ ಬಿಡದೆ ಲಾಹೋರಿನಿಂದ ನನಗಾಗಿ ಒಂದು ಜೊತೆ ಶೂಗಳನ್ನು ಕೊಂಡು ತಂದು ಅವನ್ನು ಧರಿಸುವವರೆಗೂ ಬಿಡಲಿಲ್ಲ! ಇಷ್ಟೆಲ್ಲ ಪ್ರೀತಿ, ಸ್ನೇಹ ತೋರುವ ಇವರ ಮುಂದೆ ಭಯೋತ್ಪಾದನೆಯ ವಿಚಾರ ಬಂದಾಗ ವಿಷಣ್ಣವದನರಾಗುತ್ತಾರೆ, ತಲೆ ತಗ್ಗಿಸಿ ತಪ್ಪಿತಸ್ಥ ಭಾವನೆಯಿಂದ ನಿಲ್ಲುತ್ತಾರೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಸಾರ್, ಇದೆಲ್ಲ ನಮ್ಮ ಆಡಳಿತಗಾರರು ಮಾಡುತ್ತಿರುವ ಷಡ್ಯಂತ್ರ ಅನ್ನುತ್ತಾ ತಮ್ಮ ಅಸಹಾಯಕತೆಯನ್ನು ತೋರುತ್ತಾರೆ. ದುಬೈನ ಕನ್ನಡ ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ಒಂದು ಆಶ್ಚರ್ಯಕರ ಸಂಗತಿ ನೋಡಲು ಸಿಕ್ಕಿತು, ಅದೇನೆಂದರೆ ಜೆ.ಎಸ್.ಎಸ್.ಶಾಲೆಯ ಶಿಕ್ಷಕರಾದ ಈರಣ್ಣ ಮೂಲಿಮನಿಯವರು ರಚಿಸಿದ ಕನ್ನಡ ನಾಡ ಗೀತೆಗಳು ಹಾಗೂ ಇತರ ಕನ್ನಡ ಗೀತೆಗಳಿಗೆ ತಬಲಾದ ಜೊತೆ ಹಾರ್ಮೋನಿಯಂ ಸಾಥ್ ನೀಡಿದವನು ಒಬ್ಬ ಪಾಕಿಸ್ತಾನಿ ಯುವಕ. ಕನ್ನಡ ಬರದ ಪಾಕಿಸ್ತಾನಿಯಾದರೂ ಪ್ರತಿ ದಿನ ಇವರ ಜೊತೆಯಲ್ಲಿ ತಾಲೀಮು ನಡೆಸಿ ಕನ್ನಡ ಗೀತೆಗಳಿಗೆ ಹಾರ್ಮೋನಿಯಂ ನುಡಿಸಿದ್ದ ಅವನನ್ನು ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರೂ ತುಂಬು ಹೃದಯದಿಂದ ಶ್ಲಾಘಿಸಿದ್ದರು.
ಸದಾ ಸ್ನೇಹಿತರಾಗಿರಲು ಬಯಸುವ ಇವರದು ಒಂದು ರೀತಿಯ ಕಥೆಯಾದರೆ ಮತ್ತೊಂದು ರೀತಿಯ ಜನರೂ ಇಲ್ಲಿದ್ದಾರೆ. ಕರಾಚಿ, ಲಾಹೋರ್, ಇಸ್ಲಾಮಾಬಾದ್ ಹಾಗೂ ಪಂಜಾಬ್ ಪ್ರಾಂತಗಳ ಜನರು ಸ್ನೇಹಮಯಿಗಳು ಹಾಗೂ ಭಾರತೀಯರ ಜೊತೆ ಸ್ನೇಹ ಬೆಳೆಸಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಬಯಸುತ್ತಾರೆ. ಆದರೆ ಉತ್ತರ ಪಾಕಿಸ್ತಾನದ ವಾಜಿರಿಸ್ತಾನ ಹಾಗೂ ಆಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪಠಾಣ್ ಹಾಗೂ ಪಶ್ತೂನ್ ಪಂಗಡಗಳ ಜನರು ಸ್ವಲ್ಪ ಒರಟರಂತೆ ವರ್ತಿಸುತ್ತಾರೆ, ಇವರು ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ, ಉದ್ಧನೆಯ ಗಡ್ಡ ಬಿಟ್ಟು ತೀಕ್ಷ್ಣವಾದ ನೋಟದಿಂದ ಎಲ್ಲರನ್ನೂ ಕಣ್ಣಲ್ಲೇ ತಿವಿಯುವಂತೆ ನೋಡುವ ಇವರು ತಮ್ಮ ವಿಚಿತ್ರ ನಡವಳಿಕೆಯಿಂದಲೇ ನಿಜಕ್ಕೂ ಆತಂಕವಾದಿಗಳೇ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತಾರೆ. ಇವರ ವಿದ್ಯಾಭ್ಯಾಸದ ಮಟ್ಟ ತೀರಾ ಕಡಿಮೆಯೇ ಅಥವಾ ಇಲ್ಲವೇ ಇಲ್ಲ ಅನ್ನಬಹುದು, ಭಾರ ಎತ್ತುವ, ಬಹು ದೊಡ್ಡ ಟ್ರಕ್ ಮತ್ತಿತರ ವಾಹನಗಳನ್ನು ಓಡಿಸುವ ಇವರು ಅಶಿಸ್ತು, ಅಡ್ಡಾದಿಡ್ಡಿ ಚಾಲನೆಗೆ ಹೆಸರಾಗಿದ್ದಾರೆ, ಇಲ್ಲಿನ ರಸ್ತೆಗಳಲ್ಲಿ ನಡೆಯುವ ಬಹುತೇಕ ಮಾರಣಾಂತಿಕ ಅಪಘಾತಗಳಲ್ಲಿ ಇವರ ಪಾತ್ರ ಬಹು ದೊಡ್ಡದು. ಆದರೆ ತಾವಾಗಿ ಯಾರಿಗೂ ತೊಂದರೆ ಕೊಡುವುದಿಲ್ಲ.
ಒಬ್ಬ ಸಾಮಾನ್ಯ ಪಾಕಿಸ್ತಾನಿ ನಾಗರಿಕನಿಗೆ ಭಾರತದೊಡನೆ ಯಾವುದೇ ಗೊಡವೆ ಬೇಕಿಲ್ಲ, ಬದಲಾಗಿ ಅವರು ಭಾರತೀಯರ ಜೊತೆ ಸ್ನೇಹವನ್ನು, ಉತ್ತಮ ಬಾಂಧವ್ಯವನ್ನು ಬಯಸುತ್ತಾರೆ. ಇದನ್ನು ಅಲ್ಲಿನ ಆಡಳಿತಗಾರರು ಅರ್ಥ ಮಾಡಿಕೊಳ್ಳಬೇಕಿದೆ, ಕುಮ್ಮಕ್ಕು ಕೊಟ್ಟು ತೆರೆಮರೆಯಲ್ಲಿದ್ದುಕೊಂಡೆ ಆಟ ಆಡಿಸುತ್ತಿರುವ ದೊಡ್ಡಣ್ಣ ಅಮೇರಿಕಾ ತನ್ನ ಕುಟಿಲ ಕಾರ್ಯತಂತ್ರವನ್ನು ನಿಲ್ಲಿಸಬೇಕಿದೆ. ಭಾರತ ಉಪಖಂಡದಲ್ಲಿ ಶಾಂತಿ ನೆಲೆಸುವಲ್ಲಿ ಇದು ಅತ್ಯಂತ ಜರೂರಾಗಿ ಆಗಬೇಕಿದೆ. ಆದರೆ ಒಬಾಮಾಗೆ ಇದು ಅರ್ಥವಾಗುವುದೇ? ಇದು ಯಕ್ಷ ಪ್ರಶ್ನೆ.

Subscribe to:
Posts (Atom)